Sign In

By signing in or creating an account, you agree with Associated Broadcasting Company's Terms & Conditions and Privacy Policy.

60 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆ

TV9 Web
| Updated By: ಝಾಹಿರ್ ಯೂಸುಫ್

Updated on: Sep 15, 2021 | 8:32 PM

ಭಾರತದಲ್ಲಿ ದುಬಾರಿ ಪೆಟ್ರೋಲ್-ಡೀಸೆಲ್ ಬೆಲೆಗಳ ನಡುವೆ ಎಲೆಕ್ಟ್ರಿಕ್ ವಾಹನಗಳು ಸಂಚಲನ ಸೃಷ್ಟಿಸುತ್ತಿದೆ. ಇತ್ತ ಬಹುತೇಕ ಕಂಪೆನಿಗಳು ಕೂಡ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸುತ್ತಿದೆ. ಇದೀಗ ಟಾಟಾ ಇಂಟರ್‌ನ್ಯಾಷನಲ್ ಲಿಮಿಟೆಡ್‌ನ ಅಂಗ ಸಂಸ್ಥೆಯಾದ  ಸ್ಟ್ರೈಡರ್ ಸೈಕಲ್ಸ್ ಕೂಡ ಎಲೆಕ್ಟ್ರಿಕ್​ ಸೈಕಲ್​ (ಇ-ಬೈಕ್ಸ್​)ಗಳನ್ನು ಬಿಡುಗಡೆ ಮಾಡಿದೆ.

1 / 6
ಸ್ಟ್ರೈಡರ್ ವೋಲ್ಟಿಕ್  1.7 (Stryder Voltic 1.7) ಹಾಗೂ ಕಾಂಟಿನೋ ಇಟಿಬಿ-100 (Contino ETB-100) ಹೆಸರಿನಲ್ಲಿ ಬಿಡುಗಡೆಯಾಗಿರುವ ಈ ಇ-ಸೈಕಲ್ಸ್​  ಚಾರ್ಜಿಂಗ್​​ನಲ್ಲಿ ಚಲಿಸಲಿದೆ. ಅದರ ಜೊತೆಗೆ ಪೆಡಲ್​ಗಳು ಸಹ ಇದ್ದು, ಚಾರ್ಜ್​ ಮುಗಿದರೆ ಪೆಡಲ್​ಗಳ ಮೊರೆ ಹೋಗಬಹುದು. ಇ-ಬೈಕ್ ನಲ್ಲಿ ಏಳು ಸ್ಪೀಡ್ ಮತ್ತು ಮೂರು ರೈಡ್ ಮೋಡ್‌ಗಳೊಂದಿಗೆ (ಎಲೆಕ್ಟ್ರಿಕ್, ಹೈಬ್ರಿಡ್ ಮತ್ತು ಪೆಡಲ್) ನೀಡಲಾಗಿರುವುದು ಮತ್ತೊಂದು ವಿಶೇಷ.

2 / 6
ಸ್ಟ್ರೈಡರ್ ವೋಲ್ಟಿಕ್ 1.7 ವಿಶೇಷತೆ: ಈ ಸೈಕಲ್​ನಲ್ಲಿ ಶಕ್ತಿಯುತವಾದ 48V/260W ಮೋಟಾರ್, 48V ಲಿಥಿಯಂ-ಐಯಾನ್ ಬ್ಯಾಟರಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ನೀಡಲಾಗಿದೆ. ಸ್ಟ್ರೈಡರ್ ವೋಲ್ಟಿಕ್ 1.7 ಅನ್ನು ಮೂರು ಗಂಟೆಗಳಲ್ಲಿ ಸಂಪೂರ್ಣ ಚಾರ್ಜ್ ಮಾಡಬಹುದು.  ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ ಸುಮಾರು 60 ಕಿಮೀ ವ್ಯಾಪ್ತಿಯವರೆಗೆ ಚಲಿಸಬಹುದು.

3 / 6
ಕಾಂಟಿನೋ ಇಟಿಬಿ -100 ವಿಶೇಷತೆ: ಕಾಂಟಿನೋ ಇಟಿಬಿ -100 ಇ-ಬೈಕ್ ಅನ್ನು ಗ್ರಾಮೀಣ ಪ್ರದೇಶವನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ಡಿಟ್ಯಾಚೇಬಲ್, ರೀಚಾರ್ಜ್ ಮಾಡಬಹುದಾದ ಬ್ಯಾಟರಿ ಮತ್ತು ಮೂರು ಡ್ರೈವಿಂಗ್ ಮೋಡ್‌ಗಳನ್ನು (ಎಲೆಕ್ಟ್ರಿಕ್, ಹೈಬ್ರಿಡ್ ಮತ್ತು ಪೆಡಲ್)  ನೀಡಲಾಗಿದೆ. 260W ಎಲೆಕ್ಟ್ರಿಕ್ ಮೋಟಾರ್ ಇದರಲಿದ್ದು, ಹೈಬ್ರಿಡ್ ಮೋಡ್‌ನಲ್ಲಿ 60 ಕಿಮೀ ಮತ್ತು ಪೂರ್ಣ ಎಲೆಕ್ಟ್ರಿಕ್ ಮೋಡ್‌ನಲ್ಲಿ 30 ಕಿಮೀ ವರೆಗೆ ಚಲಿಸಬಹುದು. ಹಾಗೆಯೇ ಬಳಕೆದಾರರು ಮೋಟಾರ್ ಮೋಡ್ ಮತ್ತು ಪೆಡಲ್ ಮೋಡ್ ನಡುವೆ ಸುಲಭವಾಗಿ ಬದಲಾಯಿಸಿಕೊಳ್ಳುವ ಅವಕಾಶ ಇದರಲ್ಲಿದೆ.

4 / 6
ಇನ್ನು ಇದರಲ್ಲಿ ಡಬಲ್ ಡಿಸ್ಕ್ ಬ್ರೇಕ್, ಕೀ-ಲಾಕ್ ಬ್ಯಾಟರಿ, ಸ್ಮಾರ್ಟ್ ರೈಡ್ ( ಬ್ರೇಕ್ ಹಾಕಿದಾಗ ಆಟೋ ಪವರ್ ಕಟ್ ಆಫ್) ಮತ್ತುಮುಂಭಾಗದ ಎಲ್‌ಇಡಿ ಲೈಟ್​ ಫೀಚರ್‌ಗಳನ್ನು ನೀಡಲಾಗಿದೆ.

5 / 6
ಕಂಪೆನಿಯು ಈ ಇ-ಸೈಕಲ್​ಗಳ ಮೇಲೆ 2 ವರ್ಷಗಳ ವಾರಂಟಿಯನ್ನೂ ಸಹ ನೀಡುತ್ತಿದೆ. ಅಂದಹಾಗೆ ವೋಲ್ಟಿಕ್ 1.7 ಸೈಕಲ್​ ಬೆಲೆ 29,995 ರೂ. ಹಾಗೆಯೇ ಕಾಂಟಿನೊ ಇಟಿಬಿ -100 ಬೆಲೆ 37,999 ರೂ.

6 / 6
Follow us
ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ

ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು

ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ

ಧರ್ಮಸ್ಥಳ ಮಂಜುನಾಥ, ವೀರೇಂದ್ರ ಹೆಗ್ಗಡೆಯವರ ಆಶಿರ್ವಾದ ಪಡೆದ ಡಿಕೆಶಿ

ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಬಗ್ಗೆ ಗೃಹ ಸಚಿವ ಹೇಳಿದ್ದಿಷ್ಟು

Babar Azam: 0, 1, 2... ಬಂದ ಬಾಬರ್, ಹೋದ ಬಾಬರ್

ಕುಟುಂಬದ ಜೊತೆ ಉಡುಪಿಗೆ ಬಂದ ಸುನೀಲ್ ಶೆಟ್ಟಿ; ಮಾರಿಗುಡಿಗೆ ಭೇಟಿ

ಜೀಪ್​ ಅಡ್ಡಗಟ್ಟಿದ ಹುಲಿರಾಯ: ಆತಂಕದಿಂದ ಚಿರಾಡಿದ ಪ್ರವಾಸಿಗರು!

ಕಾರಿನ ಮೇಲೆ ಕಾಡಾನೆ ದಾಳಿ ಯತ್ನ, ಎದೆ ಝಲ್​ ಎನ್ನಿಸುವ ವಿಡಿಯೋ ವೈರಲ್

ಮದುವೆ ಯಾಕಾಗಬೇಕು? ರವಿಚಂದ್ರನ್ ಮಾತಿಗೆ ಚಪ್ಪಾಳೆಯ ಸುರಿಮಳೆ