- Kannada News Photo gallery Kannada News | Swamijis on Kashi Yatra: Uttarakhand Minister to plant 100,008 trees along route
ಕಾಶಿ ಯಾತ್ರೆ ಕೈಗೊಂಡ ಸ್ವಾಮೀಜಿಗಳು: ದಾರಿಯುದ್ದಕ್ಕೂ 100,008 ಮರಗಳು ನೆಡಲು ಮುಂದಾದ ಉತ್ತರಾಖಂಡ ಸಚಿವ
ಮಹಾಮಂಡಲೇಶ್ವರ ಅವಧೂತ್ ಆನಂದ್ ಅರುಣ್ ಗಿರಿ ಮಹಾರಾಜಿ ಮತ್ತು ಮಹಾಮಂಡಲೇಶ್ವರ 1008 ಅನಂತ ವಿಭೂಷಿತ್ ಸ್ವಾಮಿ ಶ್ರೀ ನಾರಾಯಣ್ ನಾನದ್ ಗಿರಿಜಿ ಮಹಾರಾಜ್ ಜಿ ನೇತೃತ್ವದಲ್ಲಿ ಕಾಶಿ ಯಾತ್ರೆ ಕೈಗೊಳ್ಳಲಾಗಿದೆ.
Updated on: May 28, 2023 | 11:03 PM

ರಿಷಿಕೇಶ್ ಮೂಲದ ಜುನಾ ಅಖಾರಾದ ಮಹಾಮಂಡಲೇಶ್ವರ ಅವಧೂತ್ ಅರುಣ್ ಗುರು ಜಿ ಮಹಾರಾಜ್ ಮತ್ತು 1008 ಅನಂತ ವಿಭೂಷಿತ್ ಸ್ವಾಮಿ ಶ್ರೀ ನಾರಾಯಣ್ ನನಾದ್ ಗಿರಿಜಿ ಮಹಾರಾಜ್ ಜಿ ನೇತೃತ್ವದಲ್ಲಿ ಕಾಶಿ ಯಾತ್ರೆಯನ್ನು ಕೈಗೊಳ್ಳಲಾಗಿದೆ.

ಉತ್ತರಾಖಂಡ, ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯಗಳ ಮೂಲಕ ಈ ಯಾತ್ರೆ ಸಾಗಲಿದ್ದು, ಮುಂಚಿತವಾಗಿ ಇಂದು ಪೂಜೆ ಮಾಡುವ ಮೂಲಕ ಯಾತ್ರೆಯನ್ನು ಆರಂಭಿಸಲಾಗಿದೆ.

ಅಭಿವೃದ್ಧಿ ಪ್ರಾಧಿಕಾರ ಸಚಿವ ಪ್ರೇಮ್ ಚಂದ್ ಅಗರ್ ವಾಲ್ ಮತ್ತು ಮೇಯರ್ ಅನಿತಾ ಮಾಮ ಗೈನ್ ಅವರು ಯಾತ್ರೆಗೆ ಕೈಜೋಡಿಸಿದ್ದು, ದಾರಿಯುದ್ದಕ್ಕೂ 100,008 ಮರಗಳನ್ನು ನೆಡಲು ಸಹಕರಿಸಿದ್ದಾರೆ.

ರಾಷ್ಟ್ರಕ್ಕಾಗಿ ಪ್ರಾಣ ತ್ಯಾಗ ಮಾಡುತ್ತಿರುವ ಸೈನಿಕರು ಮತ್ತು ಹುತಾತ್ಮರ ಶಾಂತಿಗಾಗಿ ರಿಷಿಕೇಶದಿಂದ 1008 ಕಳಶಗಳನ್ನು ತೆಗೆದುಕೊಂಡು ಹೋಗಲಾಗುತ್ತಿದೆ.

ಯಾತ್ರೆಯ ಕೊನೆಯಲ್ಲಿ, ಪವಿತ್ರ ಗಂಗಾ ನದಿಯಿಂದ 1008 ಕಲಶ ನೀರನ್ನು ಬಳಸಿಕೊಂಡು ಅಭಿಷೇಕವನ್ನು ಮಾಡುತ್ತೇವೆ. ಈ ಕಾಶಿ ಯಾತ್ರೆ ಎಲ್ಲರಲ್ಲಿ ಶಾಂತಿ ಮೂಡಿಸಲಿ, ಒಗ್ಗಟ್ಟಿನ ಬಂಧಗಳನ್ನು ಬೆಳೆಯಲಿ ಎಂದು ಅವಧೂತ್ ಅರುಣ್ ಗುರು ಜಿ ಮಹಾರಾಜ್ ಹೇಳಿದ್ದಾರೆ.




