AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tamanna Bhatia: ಅಧ್ಯಾತ್ಮದ ಕಡೆಗೆ ವಾಲಿದ ತಮನ್ನಾ ಭಾಟಿಯಾ; ನಟಿಯ ಜೀವನದಲ್ಲಿ ಆಗಿದೆ ಬದಲಾವಣೆ

Tamannaah Bhatia | Linga Bhairavi: ಲಿಂಗ ಭೈರವಿ ದೇವಿಯ ಮೇಲೆ ತಮನ್ನಾ ಭಾಟಿಯಾ ಅವರಿಗೆ ಸೆಳೆತ ಉಂಟಾಗಿದೆ. ಹಾಗಾಗಿ ದೇವಿಯ ವಿಗ್ರಹವನ್ನು ಅವರು ಮನೆಯಲ್ಲಿ ಪೂಜಿಸುತ್ತಿದ್ದಾರೆ.

ಮದನ್​ ಕುಮಾರ್​
|

Updated on: Feb 08, 2023 | 6:25 PM

Share
ಭಾರತೀಯ ಚಿತ್ರರಂಗದ ಖ್ಯಾತ ನಟಿ ತಮನ್ನಾ ಭಾಟಿಯಾ ಅವರು ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಅದರ ನಡುವೆ ಅವರ ಮನಸ್ಸು ಅಧ್ಯಾತ್ಮದ ಕಡೆಗೆ ವಾಲಿದೆ. ಈ ಕುರಿತು ಅವರು ಮಾಹಿತಿ ನೀಡಿದ್ದಾರೆ.

1 / 5
ಸದಾ ಗ್ಲಾಮರಸ್​ ಆಗಿ ಪೋಸ್​ ನೀಡುವ ತಮನ್ನಾ ಭಾಟಿಯಾ ಅವರು ಈಗ ಏಕಾಏಕಿ ಕಾವಿ ಧರಿಸಿ ಬಂದಿದ್ದಾರೆ. ಭಕ್ತಿ ಭಾವದಿಂದ ಪೂಜೆ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಅದನ್ನು ಕಂಡು ಅಭಿಮಾನಿಗಳಿಗೆ ಅಚ್ಚರಿ ಆಗಿದೆ.

2 / 5
ಲಿಂಗ ಭೈರವಿ ದೇವಿಯ ಮೇಲೆ ತಮನ್ನಾ ಭಾಟಿಯಾ ಅವರಿಗೆ ಸೆಳೆತ ಉಂಟಾಗಿದೆ. ಹಾಗಾಗಿ ಅವರು ಈ ದೇವರನ್ನು ಆರಾಧಿಸಲು ಶುರು ಮಾಡಿದ್ದಾರೆ. ತಮ್ಮ ಮನೆಯಲ್ಲೂ ಲಿಂಗ ಭೈರವಿ ದೇವಿಯ ವಿಗ್ರಹವನ್ನು ಇಟ್ಟುಕೊಂಡು ಅವರು ಪೂಜಿಸುತ್ತಿದ್ದಾರೆ.

3 / 5
ಕೇವಲ ಲಿಂಗ ಭೈರವಿ ವಿಗ್ರಹವನ್ನು ಮನೆಗೆ ತೆಗೆದುಕೊಂಡು ಹೋಗುವುದಷ್ಟೇ ಮುಖ್ಯವಲ್ಲ. ಆ ದೇವರ ಗುಣಗಳನ್ನು ಅವಳಡಿಸಿಕೊಳ್ಳುವುದು ಮುಖ್ಯ ಎಂದು ತಮನ್ನಾ ಹೇಳಿದ್ದಾರೆ. ನಟಿಯ ಈ ಮಾತುಗಳಿಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

4 / 5
‘ಜೀವನದಲ್ಲಿನ ಭಯಗಳನ್ನು ಲಿಂಗ ಭೈರವಿ ದೂರ ಮಾಡುತ್ತಾಳೆ. ಅನೇಕ ಬಾರಿ ಅದು ನನ್ನ ಅನುಭವಕ್ಕೆ ಬಂದಿದೆ. ಏನನ್ನಾದರೂ ಮಾಡುವಾಗ ಭಯ ಆಗಿದ್ದುಂಟು. ಆದರೆ ದೇವಿಯ ಕ್ಷೇತ್ರಕ್ಕೆ ಬಂದಾಗ ಆ ಭಯದಿಂದ ಹೊರಬರುವ ಶಕ್ತಿ ನನ್ನೊಳಗೆ ಮೂಡುತ್ತದೆ’ ಎಂದು ತಮನ್ನಾ ಹೇಳಿದ್ದಾರೆ.

5 / 5
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us