Updated on:Feb 15, 2023 | 10:33 AM
ನಟಿ ತಮನ್ನಾ ಹಾಗೂ ವಿಜಯ್ ವರ್ಮಾ ಅವರು ಕಳೆದ ಕೆಲ ತಿಂಗಳಿಂದ ಸುತ್ತಾಟ ನಡೆಸುತ್ತಿದ್ದಾರೆ. ಮುಂಬೈನಲ್ಲಿ ಇಬ್ಬರೂ ಒಟ್ಟಾಗಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ.
ವ್ಯಾಲೆಂಟೈನ್ ಡೇ ದಿನ ತಮನ್ನಾ ಹಾಗೂ ವಿಜಯ್ ವರ್ಮಾ ಅವರು ಒಟ್ಟಾಗಿ ಸುತ್ತಾಟ ನಡೆಸಿದ್ದಾರೆ. ತಮನ್ನಾ ಹಾಗೂ ತಮ್ಮ ಶ್ಯೂ ಫೋಟೋ ಹಾಕಿ ಹಾರ್ಟ್ ಮಾರ್ಕ್ ಹಾಕಿದ್ದಾರೆ ವಿಜಯ್.
ತಮನ್ನಾ ಅವರು ವಿಜಯ್ ಜತೆಗಿನ ಪ್ರೀತಿ ವಿಚಾರವನ್ನು ಶೀಘ್ರವೇ ಅಧಿಕೃತ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
ಸೆಲೆಬ್ರಿಟಿಗಳ ಬಗ್ಗೆ ಅಭಿಮಾನಿಗಳಿಗೆ ಸದಾ ವಿಶೇಷ ಗಮನ ಇರುತ್ತದೆ. ಅದರಲ್ಲೂ ಡೇಟಿಂಗ್ ವಿಚಾರ ಬಂದಾಗ ವಿಶೇಷ ಗಮನ ಕೊಡುತ್ತಾರೆ.
ತಮನ್ನಾ ಅವರು ಪ್ರೀತಿ ವಿಚಾರವನ್ನು ಶೀಘ್ರವೇ ಅಧಿಕೃತ ಮಾಡಲಿ ಹಾಗೂ ವಿಜಯ್ ಅವರನ್ನು ಮದುವೆ ಆಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.
Published On - 9:50 am, Wed, 15 February 23