Updated on: Aug 11, 2024 | 12:26 PM
ಕನ್ನಡ ಚಿತ್ರರಂಗದ ಜನಪ್ರಿಯ ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಇಂದು (ಆಗಸ್ಟ್ 11) ಬೆಂಗಳೂರಿನ ಕೆಂಗೇರಿ ಬಳಿ ಇರುವ ಪೂರ್ಣಿಮಾ ಪ್ಯಾಲೆಸ್ ಕಲ್ಯಾಣ ಮಂಟಪದಲ್ಲಿ ವಿವಾಹವಾಗಿದ್ದಾರೆ.
ತರುಣ್ ಸುಧೀರ್ ಮತ್ತು ಸೋನಲ್ ಕಳೆದ ಕೆಲ ವರ್ಷಗಳಿಂದಲೂ ಪರಸ್ಪರ ಪ್ರೀತಿಸುತ್ತಿದ್ದರು. ಬಳಿಕ ಎರಡೂ ಕುಟುಂಬಗಳನ್ನು ಒಪ್ಪಿಸಿ ಬಂಧುಗಳ, ಕುಟುಂಬದವರ ಆಶೀರ್ವಾದದೊಂದಿಗೆ ಮದುವೆ ಆಗಿದ್ದಾರೆ.
ತರುಣ್ ಸುಧೀರ್, ಕನ್ನಡದ ಖ್ಯಾತ ಖಳನಟ ಸುಧೀರ್ ಅವರ ಪುತ್ರ. ಅವರ ಸಹೋದರ ನಂದ ಕಿಶೋರ್ ಸಹ ಕನ್ನಡ ಚಿತ್ರರಂಗದ ಜನಪ್ರಿಯ ಸಿನಿಮಾ ನಿರ್ದೇಶಕ.
ಇನ್ನು ಸೋನಲ್, ಮಂಗಳೂರಿನ ಚೆಲುವೆ, ತುಳು ಸಿನಿಮಾಗಳಲ್ಲಿ ನಟಿಸುವ ಮೂಲಕ ನಟನೆಗೆ ಕಾಲಿರಿಸಿ, ಹಲವು ಜನಪ್ರಿಯ ಕನ್ನಡ ಸಿನಿಮಾಗಳಲ್ಲಿ ಸೋನಲ್ ನಟಿಸಿದ್ದಾರೆ. ತರುಣ್ ನಿರ್ದೇಶನದ ‘ರಾಬರ್ಟ್’ ಸಿನಿಮಾದಲ್ಲಿಯೂ ಸೋನಲ್ ನಟಿಸಿದ್ದಾರೆ.
ಕಳೆದ ವರ್ಷವೇ ಇವರ ಮದುವೆ ಆಗಬೇಕಿತ್ತಂತೆ ಹಲವು ಕಾರಣಗಳಿಂದ ಮದುವೆ ಮೂಂದೂಡುತ್ತಲೇ ಬರಲಾಗಿತ್ತು. ಈಗ ದರ್ಶನ್ ಬಂಧನ ಆಗಿರುವುದರಿಂದ ಮತ್ತೆ ಮುಂದೂಡುವ ಯೋಚನೆ ಮಾಡಲಾಗಿತ್ತಂತೆ.
ತರುಣ್ ಸುಧೀರ್ ಉತ್ತರ ಕರ್ನಾಟಕದ ಮೂಲದವರಾದರೆ ಸೋನಲ್ ಕರಾವಳಿ ಕರ್ನಾಟಕದವರು. ಇವರಿಬ್ಬರ ಮದುವೆ ಮೂಲಕ ರಾಜ್ಯದ ಎರಡು ಭಿನ್ನ ಸಂಸ್ಕೃತಿಗಳು ಜೊತೆಯಾದಂತಿವೆ.
ತರುಣ್ ಸುಧೀರ್ ಹಾಗೂ ಸೋನಲ್ ಅವರ ವಿವಾಹಕ್ಕೆ ಮಾಜಿ ಸಿಎಂ ಯಡಿಯೂರಪ್ಪ, ಚಿತ್ರರಂಗದ ಹಲವಾರು ಗಣ್ಯರು ಆಗಮಿಸಿ ನವ ವಧು-ವರರಿಗೆ ಆಶೀರ್ವಾದ ಮಾಡಿದ್ದಾರೆ.