Tata Safari Gold: ಹೊಸ ಲುಕ್​ನಲ್ಲಿ ರಸ್ತೆಗಿಳಿಯಲಿದೆ ಟಾಟಾ ಸಫಾರಿ ಗೋಲ್ಡ್​

Tata Safari Gold: ನಮ್ಮ ಪ್ರಮುಖ ಎಸ್‌ಯುವಿ ಸಫಾರಿ ಪ್ರಾರಂಭವಾದ 5 ತಿಂಗಳಲ್ಲಿ, ನಾವು 10,000 ಯೂನಿಟ್‌ಗಳ ಮಾರಾಟ ಮಾಡಿದ್ದೇವೆ. ಇದೀಗ ನಮ್ಮ ಗ್ರಾಹಕರ ಪ್ರೀತಿಯನ್ನು ಗಮನದಲ್ಲಿಟ್ಟುಕೊಂಡು, ನಾವು ಹೊಸ ಪ್ರತಿಷ್ಠಿತ ಎಸ್‌ಯುವಿ ಟಾಟಾ ಸಫಾರಿ ಗೋಲ್ಡ್ ಎಡಿಶನ್ ಬಿಡುಗಡೆ ಮಾಡುತ್ತಿದ್ದೇವೆ

1/5
ಟಾಟಾ ಮೋಟಾರ್ಸ್ ತನ್ನ ಜನಪ್ರಿಯ ಎಸ್‌ಯುವಿ ಟಾಟಾ ಸಫಾರಿಯ ನೆಕ್ಸ್ಟ್​ ಜೆನ್ ಆವೃತ್ತಿ ಬಿಡುಗಡೆಯಾಗಿದೆ. ಟಾಟಾ ಕಂಪೆನಿಯ ಈ ಪ್ರೀಮಿಯಂ ಎಸ್‌ಯುವಿ ಎರಡು ಬಣ್ಣಗಳ ಆಯ್ಕೆಗಳೊಂದಿಗೆ ಖರೀದಿಗೆ ಲಭ್ಯವಿರಲಿದ್ದು, ಐಪಿಎಲ್ ಸಮಯದಲ್ಲಿ ಈ ಹೊಸ ಎಸ್‌ಯುವಿಯನ್ನು ದುಬೈನಲ್ಲಿ ಪ್ರದರ್ಶಿಸಲಾಗುತ್ತದೆ. ಹಾಗಾದರೆ ಟಾಟಾ ಸಫಾರಿ ಗೋಲ್ಡ್​ ಎಸ್‌ಯುವಿಯ ವೈಶಿಷ್ಟ್ಯಗಳೇನು ತಿಳಿದುಕೊಳ್ಳೋಣ.

2/5
ಅದ್ಭುತ ವಿನ್ಯಾಸ: ಕಂಪನಿಯು ಈ ಎಸ್‌ಯುವಿಯ ವೈಟ್ ಗೋಲ್ಡ್ ರೂಪಾಂತರವನ್ನು ಫ್ರಾಸ್ಟ್ ವೈಟ್ ಬಣ್ಣದೊಂದಿಗೆ ಮ್ಯಾಚ್ ಮಾಡಿದೆ. ಇದರ ಹೊರತಾಗಿ, ಈ ಎಸ್‌ಯುವಿಯ ಮೇಲ್ಛಾವಣಿಗೆ ಕಪ್ಪು ಬಣ್ಣ ನೀಡಿರುವುದು ವಾಹನವನ್ನು ಆಕರ್ಷಕವಾಗಿದೆ. ಒಳಭಾಗದಲ್ಲಿರುವ ಮಾಂಟ್ ಕಪ್ಪು ಮಾರ್ಬಲ್ ಫಿನಿಶ್ ಪ್ಯಾಡ್ ಟಾಟಾ ಸಫಾರಿಯ ಒಳಾಂಗಣದ ಲುಕ್​ನ್ನು ಹೆಚ್ಚಿಸುತ್ತದೆ.

3/5
ವೈಶಿಷ್ಟ್ಯಗಳು:  ಈ ಎಸ್‌ಯುವಿಯ ಒಳಭಾಗಕ್ಕೆ ಉತ್ತಮ ವೈಶಿಷ್ಟ್ಯಗಳಾದ ಸಿಂಪಿ ವೈಟ್ ಡೈಮಂಡ್ ಕ್ವಿಲ್ಟೆಡ್ ಲೆದರ್ ಸೀಟ್, ವೈರ್‌ಲೆಸ್ ಚಾರ್ಜರ್, ಏರ್ ಪ್ಯೂರಿಫೈಯರ್, ವೆಂಟಿಲೇಷನ್ ಮೊದಲ ಮತ್ತು ಎರಡನೇ ಸಾಲಿನಲ್ಲಿ ನೀಡಲಾಗಿದೆ. ಇದರ ಹೊರತಾಗಿ, ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್ಪ್ಲೇ ವೈಫೈ ಒದಗಿಸಲಾಗಿದೆ.

4/5
ಎಂಜಿನ್ ಮತ್ತು ಕಾರ್ಯಕ್ಷಮತೆ:  ಫ್ಲ್ಯಾಗ್​ಶಿಪ್​ ಹ್ಯಾರಿಯರ್ ಆಧಾರಿತ ಈ ಎಸ್‌ಯುವಿ 6 ಮತ್ತು 7 ಆಸನಗಳನ್ನು ಹೊಂದಿದೆ. ಇದನ್ನು ಒಮೆಗಾರ್ಕ್ ಆರ್ಕಿಟೆಕ್ಚರ್​ ಮೇಲೆ ನಿರ್ಮಿಸಲಾಗಿದೆ. ಇದೇ ವಿನ್ಯಾಸವು ಲ್ಯಾಂಡ್ ರೋವರ್ ಡಿ 8 ಪ್ಲಾಟ್‌ಫಾರ್ಮ್​ನಲ್ಲೂ ಕಾಣಬಹುದು. ಎಸ್‌ಯುವಿಯು 2.0-ಲೀಟರ್ ಡೀಸೆಲ್ ಎಂಜಿನ್‌ ಹೊಂದಿದ್ದು, ಇದು  170 ಪಿಎಸ್ ಪವರ್ ಮತ್ತು 350 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಹಾಗೆಯೇ ಟಾಟಾ ಸಫಾರಿ ಗೋಲ್ಡ್​ ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ಖರೀದಿಗೆ ಲಭ್ಯವಿದೆ.

5/5
ನಮ್ಮ ಪ್ರಮುಖ ಎಸ್‌ಯುವಿ ಸಫಾರಿ ಪ್ರಾರಂಭವಾದ 5 ತಿಂಗಳಲ್ಲಿ, ನಾವು 10,000 ಯೂನಿಟ್‌ಗಳ ಮಾರಾಟ ಮಾಡಿದ್ದೇವೆ. ಇದೀಗ  ನಮ್ಮ ಗ್ರಾಹಕರ ಪ್ರೀತಿಯನ್ನು ಗಮನದಲ್ಲಿಟ್ಟುಕೊಂಡು, ನಾವು ಹೊಸ ಪ್ರತಿಷ್ಠಿತ ಎಸ್‌ಯುವಿ ಟಾಟಾ ಸಫಾರಿ ಗೋಲ್ಡ್ ಎಡಿಶನ್ ಬಿಡುಗಡೆ ಮಾಡುತ್ತಿದ್ದೇವೆ ಎಂದು ಟಾಟಾ ಮೋಟಾರ್ಸ್‌ನ ಮಾರ್ಕೆಟಿಂಗ್, ಪ್ಯಾಸೆಂಜರ್ ಮತ್ತು ಎಲೆಕ್ಟ್ರಿಕ್ ವೆಹಿಕಲ್ ಬ್ಯುಸಿನೆಸ್ ಯೂನಿಟ್‌ನ ಮುಖ್ಯಸ್ಥ ವಿವೇಕ್ ಶ್ರೀವಾತ್ಸ್ ತಿಳಿಸಿದ್ದಾರೆ. ಅಂದಹಾಗೆ ಟಾಟಾ ಸಫಾರಿ ಗೋಲ್ಡ್ ಎಡಿಷನ್ ಎಸ್‌ಯುವಿ ಬೆಲೆ 21.89 ಲಕ್ಷ ರೂ. (ಎಕ್ಸ್ ಶೋ ರೂಂ, ದೆಹಲಿ)

Click on your DTH Provider to Add TV9 Kannada