Tech Tips: ಸ್ಮಾರ್ಟ್‌ಫೋನ್‌ಗಳಲ್ಲಿ ಮೂರು ಕ್ಯಾಮೆರಾಗಳು ಇರುವುದು ಯಾಕೆ ಗೊತ್ತೇ?, ಇದರ ಹಿಂದಿರುವ ಲೆಕ್ಕಾಚಾರ ತಿಳಿಯಿರಿ

ಮಾರುಕಟ್ಟೆಯಲ್ಲಿ ಇಂದು ಬಿಡುಗಡೆ ಆಗುವ ಬಹುತೇಕ ಎಲ್ಲ ಸ್ಮಾರ್ಟ್​ಫೋನ್​ಗಳು ಮೂರು ಕ್ಯಾಮೆರಾಗಳನ್ನು ಹೊಂದಿರುತ್ತವೆ. ಇದು ಏಕೆ ಎಂದು ನೀವು ಯೋಚಿಸಿದ್ದೀರಾ?. ಸ್ಮಾರ್ಟ್‌ಫೋನ್​ನಲ್ಲಿರುವ ಈ ಟ್ರಿಪಲ್ ಕ್ಯಾಮೆರಾಗಳ ಕೆಲಸ ಏನು?. ಇದರ ಹಿಂದೆ ಒಂದು ಕಾರಣವಿದೆ.

ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 07, 2024 | 2:42 PM

ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗೆ ಬರುವ ಸ್ಮಾರ್ಟ್‌ಫೋನ್‌ಗಳು ಒಂದಕ್ಕಿಂತ ಹೆಚ್ಚು ಕ್ಯಾಮೆರಾಗಳನ್ನು ಹೊಂದಿರುವುದು ಸಾಮಾನ್ಯವಾಗಿದೆ. ವಿಶೇಷವಾಗಿ ಮೂರು ಕ್ಯಾಮೆರಾಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಸಾಕಷ್ಟು ಜನಪ್ರಿಯವಾಗಿವೆ. ಈ ಫೋನ್‌ಗಳು ಅತ್ಯುತ್ತಮ ಛಾಯಾಗ್ರಹಣ ಮತ್ತು ವಿಡಿಯೋಗಳನ್ನು ಮಾಡಲು ಪ್ರಸಿದ್ಧಿ ಪಡೆದಿದೆ. ಹೆಚ್ಚಿನ ಸ್ಮಾರ್ಟ್‌ಫೋನ್ ಕಂಪನಿಗಳು ಟ್ರಿಪಲ್ ಕ್ಯಾಮೆರಾಗಳನ್ನು ಹೊಂದಿರುವ ಫೋನ್‌ಗಳನ್ನೇ ಬಿಡುಗಡೆ ಮಾಡುತ್ತವೆ. ಆದರೆ ಈ ಮೂರು ಕ್ಯಾಮೆರಾಗಳ ಕಾರ್ಯವೇನು ಗೊತ್ತಾ?.

1 / 7
ವಿವಿಧ ರೀತಿಯ ಫೋಟೋಗಳು- ಪ್ರತಿ ಕ್ಯಾಮೆರಾ ತನ್ನದೇ ಆದ ವಿಶೇಷ ಕಾರ್ಯವನ್ನು ನಿರ್ವಹಿಸುತ್ತದೆ. ಒಂದು ಕ್ಯಾಮೆರಾ ಸಾಮಾನ್ಯ ಫೋಟೋಗಳನ್ನು ತೆಗೆಯಲು, ಎರಡನೇ ಕ್ಯಾಮೆರಾ ಜೂಮ್ ಮಾಡಿದ ಫೋಟೋಗಳನ್ನು ತೆಗೆಯಲು ಮತ್ತು ಮೂರನೇ ಕ್ಯಾಮೆರಾ ವಿಶಾಲ ವ್ಯಾಪ್ತಿಯಲ್ಲಿ (ವೈಡ್-ಆ್ಯಂಗಲ್) ಫೋಟೋಗಳನ್ನು ತೆಗೆಯಲು ಬಳಸಲಾಗುತ್ತದೆ.

2 / 7
ಉತ್ತಮ ಛಾಯಾಗ್ರಹಣ - ಮೂರು ಕ್ಯಾಮೆರಾಗಳ ಸಹಾಯದಿಂದ ನೀವು ವಿವಿಧ ಸಂದರ್ಭಗಳಲ್ಲಿ ಉತ್ತಮ ಫೋಟೋಗಳನ್ನು ಸೆರೆಹಿಡಿಯಬಹುದು. ಉದಾಹರಣೆಗೆ, ನೀವು ಕಟ್ಟಡ ಅಥವಾ ದೊಡ್ಡ ಗ್ರೂಪ್ ಫೋಟೋ ತೆಗೆದುಕೊಳ್ಳಲು ಬಯಸಿದರೆ, ವೈಡ್ ಆ್ಯಂಗಲ್ ಕ್ಯಾಮೆರಾವನ್ನು ಬಳಸಬಹುದು.

3 / 7
ನೀವು ದೂರದ ವಸ್ತುವನ್ನು ಜೂಮ್ ಮಾಡಲು ಮತ್ತು ಫೋಟೋವನ್ನು ಕ್ಲಿಕ್ ಮಾಡಲು ಬಯಸಿದರೆ, ಜೂಮ್ ಕ್ಯಾಮೆರಾವನ್ನು ಬಳಸಬಹುದು. ಅದೇ ಸಮಯದಲ್ಲಿ, ಪ್ರಾಥಮಿಕ ಕ್ಯಾಮೆರಾವನ್ನು ಬಳಸಿಕೊಂಡು ನೀವು ಹತ್ತಿರದ ಫೋಟೋಗಳನ್ನು ಉತ್ತಮವಾಗಿ ಕ್ಲಿಕ್ ಮಾಡಬಹುದು.

4 / 7
ಉತ್ತಮ ವಿಡಿಯೋಗಳು - ಮೂರು ಕ್ಯಾಮೆರಾಗಳು ಉತ್ತಮ ಫೋಟೋಗಳನ್ನು ಮಾತ್ರವಲ್ಲದೆ ಉತ್ತಮ ವೀಡಿಯೊಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ನೀವು ಜೂಮ್ ಮಾಡುವ ಮೂಲಕ ವಿಡಿಯೋವನ್ನು ಮಾಡಬಹುದು ಅಥವಾ ವೈಡ್ ಆಂಗಲ್ ಮತ್ತು ಪ್ರೈಮರಿ ಕ್ಯಾಮೆರಾವನ್ನು ಬಳಸಿಕೊಂಡು ವಿಡಿಯೋವನ್ನು ರೆಕಾರ್ಡ್ ಮಾಡಬಹುದು. ಇದರಲ್ಲಿ ಹೆಚ್​ಡಿ, 4ಕೆ ಎಂಬ ಆಯ್ಕೆ ಕೂಡ ಇರುತ್ತದೆ.

5 / 7
ಛಾಯಾಗ್ರಹಣ ಸಾಮರ್ಥ್ಯ - ಮೂರು ಕ್ಯಾಮೆರಾ ಹೊಂದಿರುವುದು ಸ್ಮಾರ್ಟ್‌ಫೋನ್‌ಗಳು ಫೋಟೋಗ್ರಫಿಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ನೀವು ವಿಭಿನ್ನ ಪರಿಸ್ಥಿತಿಗಳಲ್ಲಿ ಉತ್ತಮ ಫೋಟೋಗಳು ಮತ್ತು ವಿಡಿಯೋಗಳನ್ನು ತೆಗೆದುಕೊಳ್ಳಬಹುದು. ವಿಭಿನ್ನ ಕ್ಯಾಮೆರಾಗಳನ್ನು ಬಳಸುವ ಮೂಲಕ ನೀವು ಉತ್ತಮ ಗುಣಮಟ್ಟದ ಫೋಟೋಗಳನ್ನು ಕ್ಲಿಕ್ ಮಾಡಬಹುದು.

6 / 7
 ಪ್ರಾಥಮಿಕ ಕ್ಯಾಮೆರಾ ಇರುವುದು ನಾವು ಹೆಚ್ಚು ಬಳಸುವ ಮುಖ್ಯ ಕ್ಯಾಮೆರಾ. ಇದು ಸಾಮಾನ್ಯ ಫೋಟೋಗಳನ್ನು ತೆಗೆಯುವುದಕ್ಕಾಗಿದೆ. ಹಾಗೆಯೆ ಟೆಲಿಫೋಟೋ ಕ್ಯಾಮೆರಾವನ್ನು ಜೂಮ್ ಮಾಡುವ ಮೂಲಕ ಚಿತ್ರಗಳನ್ನು ತೆಗೆದುಕೊಳ್ಳಲು ಬಳಸಲಾಗುತ್ತದೆ. ಇದರೊಂದಿಗೆ ನೀವು ದೂರದ ವಸ್ತುಗಳನ್ನು ಸಹ ಹತ್ತಿರದಿಂದ ನೋಡಬಹುದು. ಅಲ್ಟ್ರಾ ವೈಡ್ ಕ್ಯಾಮೆರಾ ವಿಶಾಲ ವ್ಯಾಪ್ತಿಯಲ್ಲಿ ಚಿತ್ರಗಳನ್ನು ತೆಗೆಯಲು ಸಹಾಯ ಮಾಡುತ್ತದೆ. ಇದರೊಂದಿಗೆ ನೀವು ಒಂದೇ ಚೌಕಟ್ಟಿನಲ್ಲಿ ಅನೇಕ ವಿಷಯಗಳನ್ನು ಸೆರೆಹಿಡಿಯಬಹುದು.

7 / 7
Follow us