ಧಾರವಾಡಕ್ಕೆ ಬಂದು ಹಳೆ ಗೆಳೆಯರ ಭೇಟಿಯಾದ ತೆಲುಗಿನ ಖ್ಯಾತ ನಟ ಶ್ರೀಕಾಂತ್
Actor Srikanth: ತೆಲುಗಿನ ಜನಪ್ರಿಯ ನಟ ಶ್ರೀಕಾಂತ್ ಹಠಾತ್ತನೆ ಧಾರವಾಡಕ್ಕೆ ಭೇಟಿ ನೀಡಿದ್ದರು. ಇಲ್ಲಿ ಬಂದು ಹಳೆಯ ಗೆಳೆಯರನ್ನು ಭೇಟಿಯಾಗಿ ಕೆಲ ಕಾಲ ಸಮಯ ಕಳೆದರು. ಅಂದಹಾಗೆ ಶ್ರೀಕಾಂತ್ ಹುಟ್ಟೂರು ಗಂಗಾವತಿ.
1 / 7
ತೆಲುಗು ಚಿತ್ರರಂಗದ ಜನಪ್ರಿಯ ಹಾಗೂ ಹಿರಿಯ ನಟ ಶ್ರೀಕಾಂತ್. ಪೋಷಕ ನಟನಾಗಿ, ನಾಯಕನಾಗಿ, ವಿಲನ್ ಆಗಿ ಎಲ್ಲ ರೀತಿಯ ಪಾತ್ರಗಳಲ್ಲಿಯೂ ಶ್ರೀಕಾಂತ್ ನಟಿಸಿ ಸೈ ಎನಿಸಿಕೊಂಡಿದ್ದಾರೆ.
2 / 7
ತೆಲುಗು ಚಿತ್ರರಂಗದಲ್ಲಿ ದಶಕಗಳಿಂದಲೂ ಕೆಲಸ ಮಾಡಿರುವ ಶ್ರೀಕಾಂತ್ಗೆ ಕರ್ನಾಟಕದೊಂದಿಗೆ ಅವಿನಾಭಾವ ಬಂಧವಿದೆ. ಅಸಲಿಗೆ ಈ ಶ್ರೀಕಾಂತ್ ಮೂಲತಃ ಕರ್ನಾಟಕದವರೇ.
3 / 7
ಶ್ರೀಕಾಂತ್ ಅಲಿಯಾಸ್ ಮೇಕ ಶ್ರೀಕಾಂತ್ ಹುಟ್ಟಿದ್ದು ಕರ್ನಾಟಕದ ಗಂಗಾವತಿಯಲ್ಲಿ. ಅವರ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ಶಿಕ್ಷಣಗಳೆಲ್ಲ ನಡೆದಿದ್ದು ಧಾರವಾಡದಲ್ಲಿಯೆ.
4 / 7
ಇದೀಗ ತಮ್ಮ ಹಳೆಯ ಗೆಳೆಯರನ್ನು ಭೇಟಿ ಆಗಲು ಶ್ರೀಕಾಂತ್ ಧಾರವಾಡಕ್ಕೆ ಬಂದಿದ್ದರು. ಧಾರವಾಡದ ಸಿಎಸ್‌ಐ ಕಾಲೇಜಿನಲ್ಲಿ ವಾಣಿಜ್ಯ ಪದವಿ ಪಡೆದಿದ್ದರು ನಟ ಶ್ರೀಕಾಂತ್.
5 / 7
ಕಾಲೇಜು ಕಲಿಯುವ ಸಮಯದಲ್ಲಿ ಶ್ರೀಕಾಂತ್ಗೆ ಧಾರವಾಡದಲ್ಲಿ ಹಲವು ಗೆಳೆಯರಿದ್ದರು, ಅವರನ್ನೆಲ್ಲ ಇಂದು ಶ್ರೀಕಾಂತ್ ಭೇಟಿಯಾದರು. ಅವರೊಟ್ಟಿಗೆ ಬಹಳ ಕಾಲ ಸಮಯವನ್ನು ಸಹ ಕಳೆದರು.
6 / 7
ಧಾರವಾಡದ ಗೆಳೆಯ ದಿನೇಶ ಶೆಟ್ಟಿ ಮನೆಯಲ್ಲಿ ಉಪಹಾರ ಸೇವನೆ ಮಾಡಿದರು ಶ್ರೀಕಾಂತ್, ದಿನೇಶ್ ಶೆಟ್ಟಿ ಉಪವನ ಹೊಟೇಲ್ ಮಾಲೀಕರಾಗಿದ್ದಾರೆ.
7 / 7
ಶ್ರೀಕಾಂತ್ ತಮ್ಮ ಹುಟ್ಟೂರಾದ ಗಂಗಾವತಿಗೆ ಹೋಗುವ ಸಮಯದಲ್ಲಿ ಧಾರವಾಡಕ್ಕೆ ಭೇಟಿ ನೀಡಿದ್ದರು. ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ಗಂಗಾವತಿಗೆ ತೆರಳಿದ ಶ್ರೀಕಾಂತ್.