- Kannada News Photo gallery These food not only effect your stomach but also has negative impact on Mental Health Tips here
Health Tips: ಈ 5 ರುಚಿಕರ ಆಹಾರಗಳು ಹೊಟ್ಟೆಗೆ ಮಾತ್ರವಲ್ಲ ಮಾನಸಿಕ ಆರೋಗ್ಯಕ್ಕೂ ಹಾನಿಕಾರಕ
ಕೆಲವು ಆಹಾರದ ಕೆಟ್ಟ ಪರಿಣಾಮ ನಮ್ಮ ಹೊಟ್ಟೆಯ ಮೇಲೆ ಮಾತ್ರವಲ್ಲದೆ ನಮ್ಮ ಮಾನಸಿಕ ಆರೋಗ್ಯದ ಮೇಲೂ ಉಂಟಾಗುತ್ತದೆ. ಈ ವಿಷಯವು ಸ್ವಲ್ಪ ವಿಚಿತ್ರವಾಗಿ ಕಾಣಿಸಬಹುದು, ಆದರೆ ಇದು ಅನೇಕ ಸಂಶೋಧನೆಗಳಲ್ಲಿ ಹೇಳಲ್ಪಟ್ಟಿದೆ. ಮಾನಸಿಕ ಆರೋಗ್ಯಕ್ಕೆ ಹಾನಿ ಮಾಡುವ ಇಂತಹ ಆಹಾರಗಳ ಬಗ್ಗೆ ಎಚ್ಚರವಾಗಿರಿ.
Updated on: Mar 02, 2022 | 9:41 AM

ಜಂಕ್ ಫುಡ್: ಈ ಆಹಾರಗಳಲ್ಲಿ ರಿಫೈನ್ಡ್ ಸಕ್ಕರೆ ಮತ್ತು ಕೊಬ್ಬು ಹೆಚ್ಚಾಗಿರುತ್ತದೆ. ಈ ಕಾರಣದಿಂದಾಗಿ, ಇದು ಹೊಟ್ಟೆಯನ್ನು ಮಾತ್ರವಲ್ಲದೆ ನಮ್ಮ ಮೆದುಳಿನ ಮೇಲೂ ಪರಿಣಾಮ ಬೀರುತ್ತದೆ. ಜಂಕ್ ಫುಡ್ ಅನ್ನು ನಿರಂತರವಾಗಿ ಸೇವಿಸಿದರೆ, ಮಾನಸಿಕ ಕಾಯಿಲೆಗಳು ನಮಗೆ ಸಮಸ್ಯೆ ತಂದೊಡ್ಡಬಹುದು.

ಕೆಫೀನ್: ಟೀ ಅಥವಾ ಕಾಫಿ ಇಲ್ಲದೆ ಯಾರೊಬ್ಬರ ದಿನವೂ ಇರುವುದಿಲ್ಲ. ಆದರೆ ಅವುಗಳಲ್ಲಿ ಇರುವ ಕೆಫೀನ್ ಅಸಿಡಿಟಿ ಅಥವಾ ಗ್ಯಾಸ್ ಸಮಸ್ಯೆಗಳನ್ನು ಉಂಟುಮಾಡಬಹುದು. ಅದು ನಿದ್ರಾಹೀನತೆಗೆ ಕೂಡ ಕಾರಣವಾಗಬಹುದು. ತಜ್ಞರ ಪ್ರಕಾರ, ನಾವು ಕೆಫೀನ್ ಅನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು.

ಸಿಹಿತಿಂಡಿಗಳು: ಸಾಮಾನ್ಯವಾಗಿ ಎಲ್ಲರೂ ಸಿಹಿ ತಿನ್ನಲು ಇಷ್ಟಪಡುತ್ತಾರೆ, ಆದರೆ ಇದರಲ್ಲಿರುವ ಸಕ್ಕರೆ ನಮ್ಮ ದೇಹಕ್ಕೆ ಮಾತ್ರವಲ್ಲದೆ ಮನಸ್ಸಿಗೂ ಹಾನಿ ಮಾಡುತ್ತದೆ. ಸಕ್ಕರೆಯು ಕೆಲವರ ಮೆದುಳಿನ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ.

ಉಪ್ಪು: ಹೆಚ್ಚಿನ ಪ್ರಮಾಣದಲ್ಲಿ ಉಪ್ಪು ಸೇವನೆಯು ರಕ್ತದ ಗುಣಮಟ್ಟದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತದೆ. ರಕ್ತದಲ್ಲಿನ ಸಮಸ್ಯೆಗಳು ದೇಹ ಮತ್ತು ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ. ನೀವು ತಿನ್ನುವ ಪದಾರ್ಥಗಳಲ್ಲಿ ಉಪ್ಪನ್ನು ಸೀಮಿತ ಪ್ರಮಾಣದಲ್ಲಿ ಅಂದರೆ ರುಚಿಗೆ ತಕ್ಕಷ್ಟೇ ಸೇರಿಸಲು ಪ್ರಯತ್ನಿಸಿ.

Alcohol Sale restricted in these areas of Bangalore from April 11 to April 14 know details here









