Yoga Asanas: ಚಳಿಗಾಲದ ಸಮಯದಲ್ಲಿ ಹೊಳೆಯುವ ತ್ವಚೆಗಾಗಿ ಈ ಯೋಗ ಆಸನಗಳನ್ನು ಅಭ್ಯಾಸ ಮಾಡಿ
ನೀವು ಆರೋಗ್ಯವಾಗಿ ಹಾಗೂ ಸದೃಢರಾಗಿರಲು ಪ್ರತಿನಿತ್ಯ ವ್ಯಾಯಾಮ ಅಭ್ಯಾಸ ಮಾಡುವುದು ಉತ್ತಮ. ಚಳಿಗಾಲದ ಸಮಯದಲ್ಲಿ ನಿಮ್ಮ ತ್ವಚೆಯನ್ನು ಆರೋಗ್ಯವಾಗಿರಿಸಿಕೊಳ್ಳಲು ಈ ಕೆಲವು ಯೋಗ ಆಸನಗಳನ್ನು ಮಾಡುವ ಅಭ್ಯಾಸ ರೂಢಿಯಲ್ಲಿಟ್ಟುಕೊಳ್ಳಿ.
Updated on:Nov 26, 2021 | 2:54 PM

These yoga asanas for have a glowing skin check in kannada

These yoga asanas for have a glowing skin check in kannada

ನೀವು ನೇರವಾಗಿ ನಿಂತುಕೊಳ್ಳಿ. ಮುಂದಕ್ಕೆ ಬಾಗಿ ಎರಡೂ ಕೈಗಳನ್ನು ನೆಲಕ್ಕೆ ಇರಿಸಿ. ನಿಮ್ಮ ಕೈಗಳ ಹಸ್ತ ಮತ್ತು ಕಾಲುಗಳ ಮಾತ್ರ ನೆಲಕ್ಕೆ ತಾಗಿರಲಿ. ಸೊಂಟದ ಭಾಗವನ್ನು ಆದಷ್ಟು ಮೇಲಕ್ಕೆತ್ತಿ.

ಊರ್ಧ್ವ ಧನುರಾಸನ- ನೇರವಾಗಿ ನಿಂತುಕೊಳ್ಳಿ. ನೀವು ಹಿಂಭಾಗದಿಂದ ಪೂರ್ತಿಯಾಗಿ ನೆಲಕ್ಕೆ ಬಾಗಿ. ಬಳಿಕ ಎರಡೂ ಹಸ್ತಗಳನ್ನು ನೆಲದ ಮೇಲಿಡಿ. ಹೊಟ್ಟೆಯ ಭಾಗವನ್ನು ಆದಷ್ಟು ಮೇಲಕ್ಕೆತ್ತಿ. ಈ ಆಸನದಲ್ಲಿ ಸ್ವಲ್ಪ ಸಯಮ ಹಾಗೆಯೇ ಇರಿ. ಪ್ರತಿನಿತ್ಯ ಊರ್ಧ್ವ ಧನುರಾಸನ ಮಾಡುವ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಿ.

ವಜ್ರಾಸನ - ನೆಲದ ಮೇಲೆ ಮಂಡಿಯೂರಿ ಕುಳಿತುಕೊಳ್ಳಿ. ನಿಮ್ಮ ಸೊಂಟ, ಬೆನ್ನು, ಭುಜ ನೇರವಾಗಿರಲಿ. ಕುತ್ತಿ ಭಾಗವನ್ನು ನೇರವಾಗಿರಿಸಿ. ದೃಷ್ಟಿಯೂ ಸಹ ನೇರವಾಗಿರಲಿ. ಎರಡೂ ಕೈಗಳನ್ನು ನಿಮ್ಮ ತೊಡೆಯ ಮೇಲೆ ಚಾಚಿ ಕುಳಿತುಕೊಳ್ಳಿ. ನಿಧಾನವಾಗಿ ಉಸಿರಾಡಿ ಜೊತೆಗೆ ನಿಮ್ಮ ಉಸಿರಾಟವನ್ನು ಗಮನಿಸಿ. ಆದಷ್ಟು ಸಮಯದವರೆಗೆ ಈ ಆಸನದಲ್ಲಿ ಕುಳಿತುಕೊಳ್ಳಲು ಪ್ರಯತ್ನಿಸಿ.
Published On - 2:51 pm, Fri, 26 November 21




