Bilva Leaves: ಈ ಮಠದ ಆವರಣದಲ್ಲಿವೆ ನೂರಾರು ಶಿವಪ್ರಿಯ ಬಿಲ್ವಪತ್ರೆ ಮರಗಳು, ಈ ತ್ರಿದಳ ವನದ ಹಿಂದಿದೆ ರೋಚಕ ಕಥೆ

ಇಲ್ಲಿರುವ 800ಕ್ಕೂ ಅಧಿಕ ಬಿಲ್ವಪತ್ರೆ ಮರಗಳನ್ನು ಯಾರೂ ಕೂಡ ನೆಟ್ಟಿಲ್ಲ. ಒಂದೇ ಒಂದು ಸಸಿಯನ್ನೂ ನೆಡದೆ ಇಲ್ಲಿ ನೂರಾರು ಮರಗಳಿವೆ ಎಂಬುವುದೇ ವಿಶೇಷ.

TV9 Web
| Updated By: ಆಯೇಷಾ ಬಾನು

Updated on:Feb 18, 2023 | 3:27 PM

ತ್ರಿದಳಂ ತ್ರಿಗುಣಾಕಾರಂ ತ್ರಿನೇತ್ರಂ ಚ ತ್ರಿಯಾಯುಧಂ, ಜನ್ಮ ಪಾಪಸಂಹಾರಮ್ ಏಕಬಿಲ್ವಂ ಶಿವಾರ್ಪಣಂ. ಬಿಲ್ವಪತ್ರೆ ಅಂದ್ರೆ ಶಿವನ ಭಕ್ತರಿಗೆ ಎಲ್ಲಿಲ್ಲದ ಗೌರವ. ಸಾಕ್ಷಾತ್ ಶಿವನಿಗೂ ಕೂಡ. ಬಿಲ್ವ ಪತ್ರೆಯಲ್ಲೇ ಶಿವನನ್ನ ಪೂಜಿಸ್ಬೇಕು ಅನ್ನೋದು ಶಿವಭಕ್ತರ ಕನಸು.

1 / 11
ತಮ್ಮ ಕನಸನ್ನು ಈಡೇರಿಸಿಕೊಳ್ಳಲು ಸಸ್ಯ ರಾಶಿಯಲ್ಲೇ ಅಪರೂಪ ಹಾಗೂ ಆಧ್ಯಾತ್ಮಿಕವಾಗಿ ಪರಮ ಶ್ರೇಷ್ಠವಾದ ಬಿಲ್ವ ಪತ್ರೆಗಾಗಿ ಕಾಡು-ಮೇಡು ಅಲೆಯೋ ಭಕ್ತರೂ ಇದ್ದಾರೆ. ಆದ್ರೆ ಚಿಕ್ಕಮಗಳೂರಿನ ಕಡೂರು ತಾಲೂಕಿನ ಸಖರಾಯಪಟ್ಟಣದ ಕಲ್ಮುರುಡೇಶ್ವರ ಮಠದ ಆವರಣದಲ್ಲಿ ಸಾವಿರಾರು ಬಿಲ್ವಪತ್ರೆ ಮರಗಳು ತುಂಬಿ ತುಳುಕುತ್ತಿವೆ.

2 / 11
ಇಲ್ಲಿರುವ 800ಕ್ಕೂ ಅಧಿಕ ಬಿಲ್ವಪತ್ರೆ ಮರಗಳನ್ನು ಯಾರೂ ಕೂಡ ನೆಟ್ಟಿಲ್ಲ. ಒಂದೇ ಒಂದು ಸಸಿಯನ್ನೂ ನೆಡದೆ ಇಲ್ಲಿ ನೂರಾರು ಮರಗಳಿವೆ ಎಂಬುವುದೇ ವಿಶೇಷ. ಬಿಲ್ವಪತ್ರೆ ಶಿವನಿಗೆ ಪರಮಪ್ರಿಯವಾದ ಎಲೆ. ಬಿಲ್ವಪತ್ರೆಯಲ್ಲಿ ಶಿವಾರಾಧನೆ ಮಾಡಿದ್ರೆ ಶಿವ ಮೆಚ್ಚಿ ಭಕ್ತರ ಬೇಡಿಕೆ ಈಡೇರಿಸ್ತಾನೆ ಅನ್ನೋದು ಭಕ್ತರ ನಂಬಿಕೆ.

3 / 11
ಆದ್ರೆ, ಈ ಬಿಲ್ವಪತ್ರೆ ಎಲ್ಲೆಂದರಲ್ಲಿ ಸಿಗದಿರೋದೆ ಶಿವಭಕ್ತರ ಕೊರಗು. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಕ್ಕೆ ಹೊಂದಿಕೊಂಡಂತಿರೋ ಕಲ್ಮುರುಡೇಶ್ವರ ಸ್ವಾಮಿ ಮಠದ ಆವರಣದಲ್ಲಿ ಒಂದಲ್ಲ, ಎರಡಲ್ಲ, ಸಾವಿರಾರು ಅಧಿಕ ಬಿಲ್ವಪತ್ರೆ ಮರಗಳಿವೆ.

4 / 11
ದೇಶದಲ್ಲೇ ಅಪರೂಪದ ತಾಣ ಎಂಬ ಹೆಗ್ಗಳಿಕೆಗೂ ಪಾತ್ರವಾಗಿರೋ ಈ ಬಿಲ್ವಪತ್ರೆ ವನದ ಸೊಬಗನ್ನ ಸವಿಯಲು ರಾಜ್ಯದ ಮೂಲೆ, ಮೂಲೆಗಳಿಂದ ಸಾವಿರಾರು ಭಕ್ತರು ಆಗಮಿಸ್ತಾರೆ. ಮಠಕ್ಕಾಗಮಿಸೋ ನೂರಾರು ಭಕ್ತರು ತಣ್ಣೀರು ಸ್ನಾನ ಮಾಡಿ ಬಿಲ್ವಪತ್ರೆ ಎಲೆ ಕೊಯ್ದು ಭಕ್ತಿಯಿಂದ ಇಲ್ಲಿನ ಕಲ್ಮುರುಡೇಶ್ವರನಿಗೆ ಮುಡಿಸೋದು ವಾಡಿಕೆ. ಹೀಗೆ ಮಾಡೋದ್ರಿಂದ ಭಕ್ತರ ಇಷ್ಟಾರ್ಥಗಳು ನೆರವೇರುತ್ವೆ ಅನ್ನೋದು ಅವ್ರ ನಂಬಿಕೆ.

5 / 11
ಪ್ರತಿನಿತ್ಯ ಈಶ್ವರ ಪ್ರತಿರೂಪ ಕಲ್ಮುರುಡೇಶ್ವರನಿಗೆ ಬಿಲ್ವಪತ್ರೆ ಹಾಗೂ ತುಂಬೆ ಹೂವಿನಿಂದ ಪೂಜೆ ಮಾಡೋದು ಇಲ್ಲಿನ ವಿಶೇಷ. ಇತ್ತೀಚಿನ ದಿನಗಳಲ್ಲಿ ಅಪರೂಪದಲ್ಲೂ ಅತ್ಯಂತ ವಿರಳವಾಗಿರೋ ಬಿಲ್ವಪತ್ರೆಯ ಒಂದು ಮರ ಕಂಡ್ರೆನೆ ಶಿವಭಕ್ತರು ನಾನೇ ಧನ್ಯ ಅಂತಾರೆ.

6 / 11
ಅಂತದ್ರಲ್ಲಿ ನೂರಾರು ಮರಗಳನ್ನ ಇಲ್ಲಿಗೆ ತಂದು ನೆಟ್ಟೋರ್ಯಾರು ಅನ್ನೋ ಪ್ರಶ್ನೆಗೆ ಉತ್ತರವಿಲ್ಲ. ಆದ್ರೆ, ಈ ಪ್ರಶ್ನೆಗೆ ಸ್ಥಳೀಯರು ಹತ್ತಾರು ಪುರಾಣದ ಕಥೆ ಹೇಳ್ತಾರೆ. ಸುಮಾರು 800 ವರ್ಷಗಳ ಹಿಂದೆ ಮರುಳಸಿದ್ದೇಶ್ವರನೆಂಬ ಸನ್ಯಾಸಿಯೊಬ್ಬ ಇಲ್ಲಿ ತಪಸ್ಸು ಮಾಡ್ತಿದ್ರಂತೆ.

7 / 11
ಆ ವೇಳೆ ಅವ್ರು ರುದ್ದಾಕ್ಷಿಯನ್ನು ಮಠದ ಸುತ್ತಲೂ ಚೆಲ್ಲಿದ್ದರಿಂದ ಈ ಮರಗಳು ಬೆಳೆದಿವೆ. ಮರಗಳನ್ನು ಯಾರು ಬೆಳೆಸಿಲ್ಲ. ಶಿವನ ಶಕ್ತಿಯಿಂದ ನೈಸರ್ಗಿಕವಾಗಿ ಬೆಳೆದು ನಿಂತಿವೆ ಅನ್ನೋದು ಭಕ್ತರ ನಂಬಿಕೆಯಾದ್ರೆ ಹಲವರು ಕಲ್ಮುರುಡೇಶ್ವರ ಸ್ವಾಮಿ ತನ್ನ ಪೂಜೆಗೆಂದು ತಾನೇ ಬೆಳೆಸಿಕೊಂಡಿದ್ದಾನೆ. ಇದು ದೈವದ ಶಕ್ತಿ ಅಂತಾರೆ.

8 / 11
ಆದ್ರೆ, ಹೀಗೆ ಒಂದೇ ಜಾಗದಲ್ಲಿ ಇಷ್ಟೊಂದು ಬಿಲ್ವ ಪತ್ರೆ ಮರಗಳಿರೋದು ದೇಶದಲ್ಲಿ ಎರಡರಿಂದ ಮೂರು ಭಾಗದಲ್ಲಿ ಮಾತ್ರ. ಅದರಲ್ಲಿ ಈ ಜಾಗವೂ ಒಂದು.

9 / 11
ಒಟ್ಟಾರೆ, ಈ ವನದಲ್ಲಿ ಬಿಲ್ವಪತ್ರೆ ಹೊರತುಪಡಿಸಿ ಬೇರ್ಯಾವ ಮರಗಿಡಗಳಿಲ್ಲ. ಸುಮಾರು ಎರಡೂವರೆ ಎಕ್ರೆ ಪ್ರದೇಶದಲ್ಲಿ ಎಗ್ಗಿಲ್ಲದೆ ಬೆಳೆದಿರೋ ಈ ಮರಗಳು ಭಕ್ತರ ಪಾಲಿಗೆ ಸಾಕ್ಷಾತ್ ಶಿವನ ರೂಪ. ಹತ್ತಾರು ಎಕರೆಯಲ್ಲಿದ್ದ ಬಿಲ್ವಪತ್ರೆ ವನ ಸೂಕ್ತ ನಿರ್ವಹಣೆ ಇಲ್ದೆ ಸೊರಗಿದೆ.

10 / 11
ಸ್ಥಳೀಯ ದಾನಿಯೊಬ್ಬರ ಸಹಾಯದಿಂದ ಮಠ ನಡೆಯುತ್ತಿದ್ದು, ಸರ್ಕಾರದಿಂದ ಯಾವುದೇ ಅನುದಾನವಿಲ್ಲ. ಮಠಕ್ಕಿರೋ ಅಲ್ಪ ಅದಾಯದಿಂದ ಈ ವನದ ರಕ್ಷಣೆ ಮಾಡಲಾಗ್ತಿದೆ. ರಾಜ್ಯದಲ್ಲಿ ಬೇರೆಲ್ಲೂ ಸಿಗದ ಈ ಅಪರೂಪದ ಸಸ್ಯ ಸಂಪತ್ತಿನತ್ತ ಸರ್ಕಾರ ಗಮನ ಹರಿಸಬೇಕೆಂದು ಸ್ಥಳೀಯರ ಆಗ್ರಹವಾಗಿದೆ. ವರದಿ: ಅಶ್ವಿತ್, TV9 ಚಿಕ್ಕಮಗಳೂರು

11 / 11

Published On - 3:27 pm, Sat, 18 February 23

Follow us
ಬಾಡೇ ನಮ್ಮ ಮನೆ ಗಾಡು:ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರದ ಬಾಡೂಟ ಜೋರು

ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್

ಕಾರಿನಡಿ ಸಿಲುಕಿದ ಕರುವನ್ನು ಕಾಪಾಡಲು ರಸ್ತೆಯಲ್ಲಿ ಅಡ್ಡ ನಿಂತ ಹಸುಗಳು

ಪ್ರಿಯಕರನ ಜೊತೆ ಇದ್ದಾಗ ದಿಢೀರನೇ ಮನೆಗೆ ಎಂಟ್ರಿ ಕೊಟ್ಟ ಗಂಡ; ಮುಂದೆನಾಯಿತು?

ಕುವೈತ್‌ನ ಬಯಾನ್ ಅರಮನೆಯಲ್ಲಿ ಪ್ರಧಾನಿ ಮೋದಿಗೆ ಗಾರ್ಡ್ ಆಫ್ ಆನರ್ ಪ್ರದಾನ

ಪ್ರತ್ಯೇಕ ಸಚಿವಾಲಯ: ಕಲ್ಯಾಣ ಕರ್ನಾಟಕಕ್ಕೆ ಸಿಹಿ ಸುದ್ದಿ ನೀಡಿದ ಸಿಎಂ

‘ಯುಐ’ ನೋಡಿ ಉಪೇಂದ್ರ ಆಧುನಿಕ ಬುದ್ಧ ಎಂದ ಆರ್ ಚಂದ್ರು

ಬಿಗ್​ಬಾಸ್ ಮನೆಯಲ್ಲಿ ಕಸದ ಬುಟ್ಟಿ: ಚೈತ್ರಾ ಕಸಕ್ಕೆ ಸಮಾನವೆ?

ಮಂಡ್ಯ: ಸಾಹಿತ್ಯ ಸಮ್ಮೇಳನದಲ್ಲಿ ಚಲುವರಾಯಸ್ವಾಮಿ ಭರ್ಜರಿ ಡ್ಯಾನ್ಸ್​

ಬಾಕ್ಸಿಂಗ್ ಡೇ ಟೆಸ್ಟ್​ಗಾಗಿ ಬೆವರಿಳಿಸಿದ ಟೀಮ್ ಇಂಡಿಯಾ ಬೌಲರ್​ಗಳು