Ugadi Yearly Horoscope 2022: ಯುಗಾದಿ ವರ್ಷ ಭವಿಷ್ಯ: ಮೇಷದಿಂದ ಮೀನರಾಶಿಯ ತನಕ ದ್ವಾದಶ ರಾಶಿ ಫಲ
Ugadi Varshaphal 2022: 2022ರ ಏಪ್ರಿಲ್ 2ರಂದು (ಶನಿವಾರ) ಶುಭಕೃತ್ನಾಮ ಸಂವತ್ಸರ ಆರಂಭವಾಗುತ್ತದೆ. ಇದನ್ನು ನಾವೆಲ್ಲ ಯುಗಾದಿ ಎನ್ನುತ್ತೇವೆ. ಆ ದಿನದ ವಿಶೇಷ ಏನೆಂದರೆ, ಪಂಚಾಂಗ ಶ್ರವಣ. ಪಂಚಾಂಗವನ್ನು ಕೇಳುವುದು ಅಂತ ಇದರ ಅರ್ಥ. ಹೇಗೆ ಒಂದು ಹಣಕಾಸು ವರ್ಷ ಅಂದಾಗ ಆಯಾ ಕಂಪೆನಿ ಅಥವಾ ಸಂಸ್ಥೆಗೆ ಅನುಗುಣವಾಗಿ ಇಂಥ ತಿಂಗಳಿಂದ ಈ ತಿಂಗಳು ಅಂತ ನಿರ್ಧಾರ ಆಗಿರುತ್ತದೋ ಅದೇ ರೀತಿ ಯುಗಾದಿಯಿಂದ ಮತ್ತೊಂದು ಯುಗಾದಿ ತನಕ ಒಂದು ಸಂವತ್ಸರ ಆಗುತ್ತದೆ. ಜನ್ಮ ರಾಶಿಗೆ ಅನುಗುಣವಾಗಿ ಏನು ಫಲ ದೊರೆಯುತ್ತದೆ, ಗೋಚಾರ ಫಲಗಳು ಏನು ಹೇಳುತ್ತವೆ ಎಂದು ತಿಳಿಯಲಾಗುತ್ತದೆ. ಆದಾಯ- ವ್ಯಯ, ಆರೋಗ್ಯ-ಅನಾರೋಗ್ಯ, ಸುಖ-ದುಃಖ ಇತ್ಯಾದಿಗಳ ಚಿಂತನೆಯನ್ನೂ ಹಾಗೂ ಪ್ರಥಮ, ದ್ವಿತೀಯ ಹಾಗೂ ತೃತೀಯ ಎಂಬ ವಿಂಗಡಣೆ ಮಾಡಿ, ಕಂದಾಯ ಫಲವನ್ನೂ ಚಿಂತನೆ ಮಾಡಲಾಗುತ್ತದೆ. ಗೋಚಾರದಲ್ಲಿನ ಪ್ರಮುಖ ಗ್ರಹಗಳನ್ನು ಆಧಾರವಾಗಿ ಇಟ್ಟುಕೊಂಡು, ಈ ಫಲವನ್ನು ತಿಳಿಸಲಾಗುತ್ತದೆ. ಏನಿದು ಪ್ರಮುಖ ಗ್ರಹಗಳು? ಹೀಗೆ ಆಲೋಚಿಸಿದ ತಕ್ಷಣ ನೆನಪಾಗುವುದು ಗುರು- ಶನಿಯಾದರೆ, ಆ ಮೇಲೆ ರಾಹು-ಕೇತು ನೆನಪಾಗುತ್ತವೆ. ಇದೀಗ ಶುಭಕೃತ್ನಾಮ ಸಂವತ್ಸರದಲ್ಲಿ ಮೇಷದಿಂದ ಮೀನದ ತನಕ ಹನ್ನೆರಡು ರಾಶಿಗಳ ಮೇಲೆ ಫಲಗಳೇನು ಎಂಬುದನ್ನು ತಿಳಿಯೋಣ.
Published On - 8:00 am, Wed, 30 March 22