Updated on: Jan 22, 2022 | 3:52 PM
ಸೋಶಿಯಲ್ ಮೀಡಿಯಾ ಜಗತ್ತಿನಲ್ಲಿ ಯಾರು ಬೇಕಾದರೂ ಫೇಮಸ್ ಆಗಬಹುದು. ಅಪರಿಚಿತರಾಗಿದ್ದವರು ರಾತ್ರೋರಾತ್ರಿ ಸ್ಟಾರ್ ಆಗಿ ಬಿಡಬಹುದು.
ಅದೇ ರೀತಿ ಟ್ರೋಲ್ ಕಾಟಕ್ಕೂ ಗುರಿಯಾಗಿ ನೆಗೆಟಿವ್ ಕಮೆಂಟ್ಗಳು ಕೂಡ ಬರಬಹುದು.
ಬಿಗ್ ಬಾಸ್ಮನೆಗೆ ತೆರಳಿದ್ದ ನಟಿ ಊರ್ಫಿ ಜಾವೇದ್ ಅವರ ಪರಿಸ್ಥಿತಿ ಕೂಡ ಹಾಗೆಯೇ ಆಗಿದೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಎಷ್ಟು ಫೇಮಸ್ ಆಗಿದ್ದಾರೋ ಅಷ್ಟೇ ಪ್ರಮಾಣದಲ್ಲಿ ಟ್ರೋಲ್ ಕೂಡ ಆಗುತ್ತಿದ್ದಾರೆ.
ಅಷ್ಟಕ್ಕೂ ಅವರು ಜನರಿಂದ ಟ್ರೋಲ್ ಆಗುತ್ತಿರುವುದು ಯಾಕೆ? ಬಟ್ಟೆಗಳ ಕಾರಣಕ್ಕೆ!
ತಮ್ಮ ಮನಸ್ಸಿಗೆ ಬಂದಂತೆ ಕಾಸ್ಟ್ಯೂಮ್ ಡಿಸೈನ್ ಮಾಡಿಕೊಳ್ಳುವ ಅವರು ಚಿತ್ರ-ವಿಚಿತ್ರ ಬಟ್ಟೆ ಧರಿಸುತ್ತಾರೆ. ಸಖತ್ ಬೋಲ್ಡ್ ಆಗಿ ಕ್ಯಾಮೆರಾಗೆ ಪೋಸ್ ನೀಡುತ್ತಾರೆ.
ಹಾಗಾಗಿ ಅವರನ್ನು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.
ಈಗ ಅವರು ಮಾಡಿರುವ ರೀಲ್ಸ್ ಎಲ್ಲರ ಗಮನ ಸೆಳೆಯುತ್ತಿದೆ.
ಊರ್ಫಿ ಜಾವೇದ್ ಅವರ ಇನ್ಸ್ಟಾಗ್ರಾಮ್ ಖಾತೆಗೆ ಹೋಗಿ ನೋಡಿದರೆ ಎಲ್ಲವೂ ತಿಳಿಯುತ್ತದೆ. ಬಟ್ಟೆಗಳ ಬಗ್ಗೆ ಅವರಿಗೆ ಇರುವಂಥ ಕ್ರೇಜ್ ಎಂಥದ್ದು ಎಂಬುದು ಗೊತ್ತಾಗುತ್ತದೆ. ಆಗಾಗ ಅವರು ಬಗೆಬಗೆಯ ಕಾಸ್ಟ್ಯೂಮ್ ಧರಿಸಿ ಫೋಟೋಶೂಟ್ ಮಾಡಿಸುತ್ತಾರೆ. ಅವುಗಳಿಗೆ ಬರುವುದು ಬಹುತೇಕ ನೆಗೆಟಿವ್ ಕಮೆಂಟ್ಗಳೇ.