ಈಗಿನ ಕಾಲಘಟ್ಟದಲ್ಲಿ ದುಡ್ಡು ಬಹಳ ಅವಶ್ಯಕ. ಹಣವಿಲ್ಲದೆ ಕೆಲಸವಿಲ್ಲ. ಯಾವುದೇ ಸಣ್ಣ ವಸ್ತುವನ್ನು ಖರೀದಿಸಲು ಹಣದ ಅಗತ್ಯವಿದೆ. ಎಲ್ಲವೂ ಹಣಕ್ಕೆ ಸಂಬಂಧಿಸಿದೆ. ಹಣವಿದ್ದರೆ ಮಾತ್ರ ಸಮಾಜದಲ್ಲಿ ಗೌರವವಿದೆ. ಲಕ್ಷ್ಮಿ ದೇವಿಯ ಆಶೀರ್ವಾದ ಪಡೆದವರು ಹಣದ ಬಗ್ಗೆ ಹೆಚ್ಚು ಚಿಂತಿಸಬೇಕಾಗಿಲ್ಲ. ಆದರೆ ಹಣದ ವಿಚಾರದಲ್ಲಿ ಕೆಲವು ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ಅನೇಕ ಜನರು ದುಡ್ಡನ್ನು ಹೇಗೆಂದರೆ ಹಾಗೆ ಖರ್ಚು ಮಾಡುತ್ತಾರೆ.