175 ಜನರನ್ನು ಬಲಿ ಪಡೆದ ಒಂದು ಸೋಲು; ಸಂಘಟಕರ ನಿರ್ಲಕ್ಷ್ಯವೇ ಹಿಂಸಾಚಾರಕ್ಕೆ ಕಾರಣವಾಯ್ತ?

TV9kannada Web Team

TV9kannada Web Team | Edited By: pruthvi Shankar

Updated on: Oct 02, 2022 | 3:49 PM

Indonesia stampede: ಫುಟ್ಬಾಲ್ ಪಂದ್ಯದ ನಂತರ ಇಂಡೋನೇಷ್ಯಾದ ಸ್ಟೇಡಿಯಂನಲ್ಲಿ ನಡೆದ ಭಯಾನಕ ಘಟನೆ ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದೆ. ಈ ಹಿಂಸಾಚಾರದಲ್ಲಿ ಸುಮಾರು 175 ಮಂದಿ ಸಾವನ್ನಪ್ಪಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ.

Oct 02, 2022 | 3:49 PM
ಫುಟ್ಬಾಲ್ ಪಂದ್ಯದ ನಂತರ ಇಂಡೋನೇಷ್ಯಾದ ಸ್ಟೇಡಿಯಂನಲ್ಲಿ ನಡೆದ ಭಯಾನಕ ಘಟನೆ ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದೆ. ಈ ಹಿಂಸಾಚಾರದಲ್ಲಿ ಸುಮಾರು 175 ಮಂದಿ ಸಾವನ್ನಪ್ಪಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ. ಈಗ ಈ ಹಿಂಸಾಚಾರದ ವಿಡಿಯೋಗಳು ಮತ್ತು ಭಯಾನಕ ಚಿತ್ರಗಳು ಪ್ರಪಂಚದಾದ್ಯಂತ ವೈರಲ್ ಆಗುತ್ತಿವೆ.

1 / 6
ಫುಟ್ಬಾಲ್ ಪಂದ್ಯದ ನಂತರ ನಡೆದ ಹಿಂಸಾಚಾರದಲ್ಲಿ ಈ ಸಾವು ನೋವು ಸಂಭವಿಸಿದೆ ಎಂಬುದು ಎಲ್ಲರಿಗೂ ತಿಳಿದಿತ್ತು. ಆದರೆ ಇಷ್ಟು ಮಂದಿ ಹೇಗೆ ಸತ್ತರು ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಮೂಡುತ್ತಿದೆ. ಹಿಂಸಾಚಾರದಲ್ಲಿ ಇಷ್ಟೊಂದು ಮಂದಿ ಸಾವಿಗೀಡಾಗಲು ಸಂಘಟಕರು, ಆಡಳಿತ ನಿರ್ವಹಣೆಯ ನಿರ್ಲಕ್ಷ್ಯವೇ ಕಾರಣ ಎಂಬುದು ಪ್ರಾಥಮಿಕ ವರದಿಯಲ್ಲಿ ತಿಳಿದುಬರುತ್ತಿದೆ.

2 / 6
ಅರೆಮಾ ಎಫ್​ಸಿ ಮತ್ತು ಪೆರ್​ಸೆಬಯಾ ಸುರಬಯ ಫುಟ್​ಬಾಲ್ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಸೋತ ತಂಡದ ಬೆಂಬಲಿಗರು ಏಕಾಏಕಿ ಕ್ರೀಡಾಂಗಣಕ್ಕೆ ನುಗ್ಗಿದರು.

3 / 6
ಮೈದಾನಕ್ಕೆ ನುಗ್ಗಿದ ಅಭಿಮಾನಿಗಳನ್ನು ಹಿಮ್ಮೆಟ್ಟಿಸಲು ಪೊಲೀಸರು ಅಶ್ರುವಾಯು ಶೆಲ್ ಸಿಡಿಸಿದರು. ಇದರಿಂದ ಕಾಲ್ತುಳಿತ ಉಟಾಗಿದ್ದು, ಇದರಲ್ಲಿ ಹಲವರು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಮೃತರಲ್ಲಿ 5 ವರ್ಷದ ಮಗುವೂ ಸೇರಿದೆ ಎಂದು ವರದಿಯಾಗಿದೆ.

4 / 6
ಈ ಲಾಠಿ ಚಾರ್ಜ್​ನಿಂದ ತಪ್ಪಿಸಿಕೊಳ್ಳಲು ಜನರು ಒಂದೇ ಗೇಟ್‌ನಲ್ಲಿ ಜಮಾಯಿಸಿದ್ದಾರೆ. ಆದರೆ ಗೇಟ್‌ನಲ್ಲಿ ಜನಜಂಗುಳಿ ಹೆಚ್ಚಾಗಿದ್ದರಿಂದ ಆಮ್ಲಜನಕದ ಕೊರತೆಯಿಂದ ಕೆಲವರು ಗೇಟ್ ಬಳಿಯೇ ಸಾವನ್ನಪ್ಪಿದ್ದಾರೆ.

5 / 6
ಈ ಅವಘಡಕ್ಕೆ ಮತ್ತೊಂದು ಪ್ರಮುಖ ಕಾರಣವೆಂದರೆ, ಈ ಪಂದ್ಯಕ್ಕೆ 42 ಸಾವಿರ ಟಿಕೆಟ್‌ಗಳು ಮಾರಾಟವಾಗಿವೆ. ಆದರೆ ವಾಸ್ತವವಾಗಿ ಕ್ರೀಡಾಂಗಣದಲ್ಲಿ ಕೇವಲ 38 ಸಾವಿರ ಮಂದಿಗೆ ಮಾತ್ರ ಆಸನ ವ್ಯವಸ್ಥೆ ಇದೆ. ಹೀಗಾಗಿ  ಜನಸಂದಣಿಯನ್ನು ನಿಯಂತ್ರಿಸಲೂ ಸಂಘಟಕರಿಗೆ ಸಾಧ್ಯವಾಗಿಲ್ಲ. ಈ ನಿರ್ಲಕ್ಷ್ಯವೇ ಅವಘಡಕ್ಕೆ ಪ್ರಮುಖ ಕಾರಣವೆಂಬುದು ತಿಳಿದುಬಂದಿದೆ.

6 / 6

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada