ಶ್ರೀಮಂತರ ಶ್ರೀಮಂತಿಕೆ ಹೆಚ್ಚುತ್ತಿದೆ, ಭಾರತದ ಆರ್ಥಿಕತೆಗೇನೂ ಉಪಯೋಗ ಆಗುತ್ತಿಲ್ಲ: ವಿರಲ್ ಆಚಾರ್ಯ

Updated on: Sep 04, 2024 | 12:13 PM

ನವದೆಹಲಿ, ಸೆಪ್ಟೆಂಬರ್ 4: ದೇಶದಲ್ಲಿ ಶ್ರೀಮಂತರ ಶ್ರೀಮಂತಿಕೆ ಹೆಚ್ಚುತ್ತಲೇ ಇದೆ. ಅವರ ಬೆಳವಣಿಗೆಯ ಫಲ ಕೆಳಗಿನವರೆಗೂ ತಲುಪಿಲ್ಲ. ಬ್ಯಾಂಕ್ ಖಾತೆಯಲ್ಲಿ ಭರ್ತಿಯಾದ ಹಣವನ್ನು ಹಣಕಾಸು ಆಸ್ತಿಗಳತ್ತ ಹಾಕುತ್ತಿದ್ದಾರೆ. ಇದರಿಂದ ದೇಶದ ಅನುಭೋಗವೇನೂ ಹೆಚ್ಚುತ್ತಿಲ್ಲ ಎಂದು ಆರ್ಥಿಕ ತಜ್ಞ ಹಾಗು ಮಾಜಿ ಆರ್​ಬಿಐ ಡೆಪ್ಯುಟಿ ಗವರ್ನರ್ ವಿರಲ್ ಆಚಾರ್ಯ ಅಭಿಪ್ರಾಯಪಟ್ಟಿದ್ದಾರೆ.

1 / 5
ಭಾರತದ ಆರ್ಥಿಕತೆಯ ಅಮೂಲಾಗ್ರ ಅಭಿವೃದ್ಧಿಗೆ ಶ್ರೀಮಂತ ವ್ಯಕ್ತಿಗಳ ಮೇಲೆ ಅವಲಂಬಿತರಾಗುವುದು ತರವಲ್ಲ. ಶ್ರೀಮಂತರ ಮೂಲಕ ಪ್ರಗತಿಯನ್ನು ಸಾಧಿಸುತ್ತಾ ಆರ್ಥಿಕತೆಯೂ ಪ್ರಗತಿ ಹೊಂದಬೇಕೆಂದು ನಿರೀಕ್ಷಿಸಲು ಆಗುವುದಿಲ್ಲ ಎಂದು ಆರ್​ಬಿಐನ ಮಾಜಿ ಡೆಪ್ಯುಟಿ ಗವರ್ನರ್ ವಿರಲ್ ಆಚಾರ್ಯ ಅಭಿಪ್ರಾಯಪಟ್ಟಿದ್ದಾರೆ. ಇಲಾರ ಕ್ಯಾಪಿಟಲ್ ಸಂಸ್ಥೆ ಮೊನ್ನೆ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ವಿರಲ್ ಆಚಾರ್ಯ, ಭಾರತ ಆರ್ಥಿಕ ಪ್ರಗತಿ ಸಾಧಿಸಿದರೂ ಆ ಪ್ರಗತಿಯ ಫಲ ಕೆಳಗಿನವರೆಗೂ ತಲುಪಿಲ್ಲ ಎಂದಿದ್ದಾರೆ.

2 / 5

‘ಪ್ರಗತಿಯ ಲಾಭವು ಕೆಳಗೆ ಪ್ರವಹಿಸುತ್ತದೆ ಎಂದಾದರೆ ಇಷ್ಟರಲ್ಲಾಗಲೇ ಅದು ಆಗಬೇಕಿತ್ತು. ಆದರೆ ಹಾಗೇನೂ ಆಗಿಲ್ಲ. ಶ್ರೀಮಂತರ ಶ್ರೀಮಂತಿಗೆ ಹೆಚ್ಚಾಗುತ್ತಲೇ ಇದೆ,’ ಎಂದು ವಿರಲ್ ಆಚಾರ್ಯ ಹೇಳಿದ್ದಾರೆ.

3 / 5

‘ಶ್ರೀಮಂತರ ಬ್ಯಾಂಕ್ ಖಾತೆ ದೊಡ್ಡದಾಗುತ್ತಾ ಬರುತ್ತಿದೆ. ಹಣಕಾಸು ಆಸ್ತಿಗಳಲ್ಲಿ ಹೂಡಿಕೆ ಮಾಡಲು ಎದುರು ನೋಡುತ್ತಾರೆ. ಭಾರತ ಒಂದು ರೀತಿಯಲ್ಲಿ ಮುಚ್ಚಿದ ಮಾರುಕಟ್ಟೆ. ಇಲ್ಲಿಂದ ಹಣ ಹೊರಗೆ ಹೋಗುವುದು ಅಷ್ಟು ಸುಲಭವಲ್ಲ. ಹೀಗಾಗಿ, ದೇಶದಲ್ಲಿರುವ ಸೀಮಿತಿ ಹಣಕಾಸು ಆಸ್ತಿಗಳೇ ಈ ಶ್ರೀಮಂತರಿಗೆ ಇರುವ ಆಯ್ಕೆ. ಆ ಕ್ಷೇತ್ರದಲ್ಲಿ ಬೆಲೆ ಸಾಕ್ಟು ಏರಿದೆಯಾದರೂ ಅದರಿಂದ ಭಾರತದ ಕನ್ಸಂಪ್ಷನ್​ಗೆ (ಬಳಕೆ ಅಥವಾ ಅನುಭೋಗ) ಉಪಯೋಗ ಏನೂ ಇಲ್ಲ,’ ಎಂದು 2016ರಲ್ಲಿ ರಿಸರ್ವ್ ಬ್ಯಾಂಕ್​ನ ಡೆಪ್ಯೂಟಿ ಗವರ್ನ್ ಆಗಿದ್ದ ವಿರಲ್ ಆಚಾರ್ಯ ವಾದಿಸಿದ್ದಾರೆ.

4 / 5

ಇಲ್ಲಿ ಹಣಕಾಸು ಆಸ್ತಿಗಳೆಂದರೆ ಷೇರು, ಮ್ಯೂಚುವಲ್ ಫಂಡ್, ಬಾಂಡುಗಳು, ನಗದು ಹಣ, ಬ್ಯಾಂಕ್ ಡೆಪಾಸಿಟ್ ಮುಂತಾದವು. ವಿರಲ್ ಆಚಾರ್ಯ ಪ್ರಸ್ತಾಪಿಸಿರುವ ಹಣಕಾಸು ಆಸ್ತಿ ಷೇರು ಮಾರುಕಟ್ಟೆಯಲ್ಲಿನ ಹೂಡಿಕೆಗಳಿರಬಹುದು.

5 / 5

ಅಮೆರಿಕದ ನ್ಯೂಯಾರ್ಕ್ ಯೂನಿವರ್ಸಿಟಿಯ ಬಿಸಿನೆಸ್ ಸ್ಕೂಲ್​ನಲ್ಲಿ ಎಕನಾಮಿಕ್ಸ್ ಪ್ರೊಫೆಸರ್ ಆಗಿರುವ ವಿರಲ್ ಆಚಾರ್ಯ ಪ್ರಕಾರ ಭಾರತದ ಅನುಭೋಗ ಮತ್ತು ಜಿಡಿಪಿ ಬೆಳವಣಿಗೆಯು ಕೋವಿಡ್ ಮುಂಚಿನ ಮಟ್ಟಕ್ಕೆ ಏರಲು ಕಷ್ಟಪಡುತ್ತಿವೆ. ಗ್ರಾಮೀಣ ಭಾಗ ಹೆಚ್ಚು ಹಿಂದೆ ಬಿದ್ದಿದೆ. ನಗರ ಮತ್ತು ಗ್ರಾಮೀಣ ಭಾಗಗಳ ಮಧ್ಯೆ ಈ ಬೆಳವಣಿಗೆ ಅಸಮಾನತೆಯು ಒಟ್ಟಾರೆ ಪ್ರಗತಿಯನ್ನು ಕುಂಠಿಗೊಳಿಸಿದೆ. ಜೊತೆಗೆ ಸರ್ಕಾರದಿಂದ ವೆಚ್ಚ ಕಡಿಮೆ ಆಗಿರುವುದು, ಹೂಡಿಕೆ ಕಡಿಮೆ ಆಗಿರುವುದು ಇದಕ್ಕೆ ಇಂಬು ಕೊಟ್ಟಿದೆ ಎಂಬುದು ಅವರ ವಾದ.

Published On - 12:00 pm, Wed, 4 September 24

Loading...
Unable to load recommendations.
Follow Us