AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Whatsapp Tricks: ಮೊಬೈಲ್ ಕಾಂಟ್ಯಾಕ್ಟ್ಸ್​ಗೆ ನಂಬರ್ ಸೇವ್ ಮಾಡದೇ ವಾಟ್ಸಾಪ್ ಮೆಸೇಜ್ ಕಳುಹಿಸುವುದು ಹೇಗೆ? ಇಲ್ಲಿವೆ ಒಂದೆರಡು ಟ್ರಿಕ್ಸ್

Ways to send Whatsappa message to mobile number without saving it in contacts: ಕಾಂಟ್ಯಾಕ್ಟ್ ಲಿಸ್ಟ್​ಗೆ ಸೇವ್ ಆಗಿಲ್ಲದ ಮೊಬೈಲ್ ನಂಬರ್​ಗೆ ವಾಟ್ಸಾಪ್ ಮೆಸೇಜ್ ಕಳುಹಿಸುವ ನೇರ ಆಯ್ಕೆ ಇಲ್ಲ. ಆದರೆ, ಪರೋಕ್ಷ ವಿಧಾನಗಳ ಮೂಲಕ ವಾಟ್ಸಾಪ್ ಚ್ಯಾಟ್ ಮೆಸೇಜ್ ಆರಂಭಿಸಬಹುದು. ಇಂಥ ಮೂರು ವಿಧಾನಗಳ ವಿವರ ಇಲ್ಲಿದೆ...

ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 29, 2024 | 3:08 PM

Share
ವಿಶ್ವಾದ್ಯಂತ ನೂರಾರು ಕೋಟಿ ಜನರು ವಾಪ್ಸಾಪ್ ಬಳಸುತ್ತಾರೆ. ಮೆಸೇಜಿಂಗ್ ಆ್ಯಪ್​ಗಳಲ್ಲಿ ವಾಟ್ಸಾಪ್ ನಂಬರ್ ಒನ್ ಆಗಿದೆ. ಕಾಲಕಾಲಕ್ಕೆ ವಾಟ್ಸಾಪ್ ಹೊಸ ಹೊಸ ಫೀಚರ್ ಬಿಡುಗಡೆ ಮಾಡುತ್ತಿರುತ್ತದೆ. ಹಳೆಯ ಫೀಚರ್​ಗಳನ್ನೂ ಅಪ್​ಡೇಟ್ ಮಾಡುತ್ತಿರುತ್ತದೆ. ಸುಲಭವಾಗಿ ಚ್ಯಾಟ್ ಮಾಡಲು ಸಾಧ್ಯವಾಗುವ ರೀತಿಯಲ್ಲಿ ಬದಲಾವಣೆ ಮಾಡುತ್ತಿರುತ್ತದೆ. ಇಷ್ಟಾದರೂ, ನೀವು ಒಬ್ಬರಿಗೆ ಮೊದಲ ಬಾರಿಗೆ ಮೆಸೇಜ್ ಕಳುಹಿಸಬೇಕಾದರೆ ಅವರ ನಂಬರ್ ಅನ್ನು ನಿಮ್ಮ ಫೋನ್ ಕಾಂಟ್ಯಾಕ್ಟ್​ಗೆ ಸೇರಿಸಿರಬೇಕಾಗುತ್ತದೆ. ಆದರೆ, ಈ ರೀತಿ ಕಾಂಟ್ಯಾಕ್ಟ್ ಸೇವ್ ಮಾಡದೆಯೇ ಒಂದು ಹೊಸ ನಂಬರ್​ಗೆ ಮೆಸೇಜ್ ಕಳುಹಿಸಲು ಕೆಲ ಟ್ರಿಕ್​ಗಳಿವೆ. ಅವುಗಳೇನು ಎಂಬ ವಿವರ ಮುಂದಿನ ಸ್ಲೈಡ್​ಗಳಲ್ಲಿದೆ.

1 / 5
ವಾಟ್ಸಾಪ್ ಅಪ್ಲಿಕೇಶನ್ ಓಪನ್ ಮಾಡಿರಿ. ನ್ಯೂ ಚ್ಯಾಟ್ ಬಟನ್ ಒತ್ತಿರಿ. ವಾಟ್ಸಾಪ್ ಕಾಂಟ್ಯಾಕ್ಟ್ಸ್ ಲಿಸ್ಟ್​ನಲ್ಲಿ ನಿಮ್ಮ ಹೆಸರನ್ನೂ ಕಾಣಬಹುದು. ಅದನ್ನು ಆಯ್ದುಕೊಳ್ಳಿ. ಅಲ್ಲಿ ನೀವು ಮೆಸೇಜ್ ಕಳುಹಿಸಬೇಕೆಂದಿರುವ ಮೊಬೈಲ್ ನಂಬರ್ ಅನ್ನು ಟೈಪಿಸಿ ಸೆಂಡ್ ಮಾಡಿ. ಈಗ ಮೆಸೇಜ್ ಬಾಕ್ಸ್​ನಲ್ಲಿ ಆ ಮೊಬೈಲ್ ನಂಬರ್ ಅನ್ನು ಒತ್ತಿರಿ. ಈಗ ಚ್ಯಾಟ್ ಮಾಡುವ ಆಯ್ಕೆ ಕಾಣುತ್ತದೆ. ಅದನ್ನು ಬಳಸಿ ಮೆಸೇಜ್ ಕಳುಹಿಸಬಹುದು.

2 / 5
ನಿಮ್ಮ ಮೊಬೈಲ್ ನಂಬರ್​ಗಳು ಮಾತ್ರವೇ ಸೇರ್ಪಡೆಯಾಗಿರುವ ಪ್ರತ್ಯೇಕ ವಾಟ್ಸಾಪ್ ಗ್ರೂಪ್​ವೊಂದನ್ನು ಆರಂಭಿಸಿ, ಅದರಲ್ಲಿ ಬೇಕಾದ ಮಾಹಿತಿಯನ್ನು ಸ್ಟೋರ್ ಮಾಡಿಟ್ಟುಕೊಳ್ಳಬಹುದು. ನೀವು ಮೆಸೇಜ್ ಕಳುಹಿಸಬೇಕೆಂದಿರುವ ಮೊಬೈಲ್ ನಂಬರ್ ಅನ್ನು ಆ ಗ್ರೂಪ್​ನ ಮೆಸೇಜ್ ಬಾಕ್ಸ್​ಗೆ ಹಾಕಿ, ಅದರ ಮೂಲಕವೂ ನೀವು ಆ ನಂಬರ್​ಗೆ ಮೆಸೇಜ್ ಶುರು ಮಾಡಬಹುದು.

3 / 5
ಬ್ರೌಸರ್ ಮೂಲಕವೂ ವಿಧಾನವೊಂದಿದೆ. ನಿಮ್ಮ ಮೊಬೈಲ್​ನಲ್ಲೋ ಅಥವಾ ಡೆಸ್ಕ್​ಟಾಪ್​ನಲ್ಲೋ ಅಡ್ರೆಸ್ ಬಾರ್​ನಲ್ಲಿ ಈ ಕೆಳಗಿನ ಯುಆರ್​ಎಲ್ ಅನ್ನು ಪೇಸ್ಟ್ ಮಾಡಿ: https://api.whatsapp.com/send?phone=xxxxxxxxxx. ಇಲ್ಲಿ ‘=’ ಆದ ಬಳಿಕ ಇರುವ xxxxxxxxxx ಬದಲು ಕಂಟ್ರಿ ಕೋಡ್ ಸಮೇತ ಮೊಬೈಲ್ ನಂಬರ್ ನಮೂದಿಸಿ ಎಂಟರ್ ಒತ್ತಿರಿ. ಉದಾಹರಣೆಗೆ, 91970809930. ಈಗ ವಾಟ್ಸಾಪ್ ಚ್ಯಾಟ್ ವಿಂಡೋದಲ್ಲಿ ‘ಕಂಟಿನ್ಯೂ ಟು ಚ್ಯಾಟ್’ ಅನ್ನು ಒತ್ತುವ ಮೂಲಕ ಮೆಸೇಜ್ ಕಳುಹಿಸುವುದನ್ನು ಆರಂಭಿಸಬಹುದು.

4 / 5
ನಂಬರ್ ಸೇವ್ ಮಾಡದೇ ಮೆಸೇಜ್ ಕಳುಹಿಸಲು ಟ್ರೂಕಾಲರ್ ಮೂಲಕವೂ ಅವಕಾಶ ಇದೆ. ನಿಮ್ಮ ಮೊಬೈಲ್​ಗೆ ಫೋನ್ ಕಾಲ್ ಬಂದಿದ್ದರೆ, ಟ್ರೂಕಾಲರ್ ಆ್ಯಪ್ ಓಪನ್ ಮಾಡಿ ಆ ನಂಬರ್ ಪಕ್ಕದಲ್ಲೇ ಕಾಣುವ ವಾಟ್ಸಾಪ್ ಐಕಾನ್ ಒತ್ತಿರಿ. ಈಗ ಆ ನಂಬರ್​ಗೆ ವಾಟ್ಸಾಪ್ ಚ್ಯಾಟ್ ತೆರೆದುಕೊಳ್ಳುತ್ತದೆ. ನೀವು ಮೆಸೇಜ್ ಕಳುಹಿಸಬಹುದು.

5 / 5
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us
ಕಣ್ಣು ಆಪರೇಷನ್​​ಗೆ ಕರೆದು ಕೇವಲ ಅನಸ್ತೇಷಿಯಾ ಕೊಟ್ಟು ಕಳುಹಿಸಿದ್ರು!

ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್​​ಗೆ ಸಂಕಷ್ಟ: ವಿಡಿಯೋ ನೋಡಿ

ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್

ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ

ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ

ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ

ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ

ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ

ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್

ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!