
1. ಒಂದು ವೇಳೆ ನೀವು ಮನೆಯಿಂದ ಹೊರಗೆ ಹೊರಟಾಗ ಗೋ ಮಾತೆ ಕಣ್ಣಿಗೆ ಬಿದ್ದರೆ ಅದೂ ಸಹ ಶುಭದ ಸಂಕೇತವಾಗಲಿದೆ. ಶಾಸ್ತ್ರಗಳ ಪ್ರಕಾರ ಮುಕ್ಕೋಟಿ ದೇವರುಗಳ ವಾಸಸ್ಥಾನವಾಗಿರುವ ಹಸುವನ್ನು ದಾರಿಯಲ್ಲಿ ಕಂಡು ನಮಸ್ಕರಿಸಿದರೆ ನಿಮ್ಮ ಕೆಲಸ ಕಾರ್ಯಗಳಲ್ಲಿ ಯಾವುದೇ ವಿಘ್ನಗಳು ಬರುತ್ತಿದ್ದರೂ ಅದೆಲ್ಲಾ ನಿವಾರಣೆಯಾಗಿ ಸೂಕ್ತ ಪರಿಹಾರ ಕಾಣಲಿರುವಿರಿ (cow).

2. ರಸ್ತೆಯಲ್ಲಿ ನಾಣ್ಯ, ಹಣ ಸಿಕ್ಕಿದರೆ ಅದೂ ಸಹ ಶುಭದ ಸಂಕೇತ. ರಸ್ತೆಯಲ್ಲಿ ಕೆಳಗೆ ಬಿದ್ದಿರುವ ನಾಣ್ಯವನ್ನು ತೆಗೆದುಕೊಂಡರೆ ಅದರಿಂದ ನಿಮ್ಮ ಪೂರ್ವಜರ ಆಶೀರ್ವಾದವು ನಿಮ್ಮ ಮೇಲೆ ಲಭಿಸಲಿದೆ. ಮುಂದುವರಿದು ಹೇಳುವುದಾರದೆ ಹಾಗೆ ನೀವು ದಾರಿಯಲ್ಲಿ ಕಂಡ ಹಣವನ್ನು ತೆಗೆದುಕೊಂಡಿದ್ದೇ ಆದರೆ ನೀವು ಶ್ರಮವಹಿಸಿ ಯಾವುದೇ ಕೆಲಸ ಮಾಡುವಾಗ ಅದರಿಂದ ನಿಮಗೆ ಸಾಫಲ್ಯ ಸಿಗುವುದು ಖಚಿತ ಎಂದರ್ಥ (coin).

3. ನೀವು ಯಾವುದಾದರೂ ಶುಭ ಕಾರ್ಯದ ನಿಮಿತ್ತ ಮನೆಯಿಂದ ಹೊರಟಾಗ ಭಿಕ್ಷುಕ ಎದುರಿಗೆ ಬಂದರೆ ಆ ಭಿಕ್ಷಕುನಿಗೆ ಏನದಾರೂ ಕೊಟ್ಟು ಮುಂದೆ ನಡೆಯರಿ. ರಸ್ತೆಯಲ್ಲಿ ಭಿಕಾರಿಯನ್ನು ಕಾಣುವುದು ಶುಭದಾಯಕ. ಅಂದರೆ ಇದರಿಂದ ನಿಮಗೆ ಶೀಘ್ರವೇ ಖರ್ಚುಗಳಿಂದ ಮುಕ್ತಿ ದೊರೆಯಲಿದೆ ಎಂದರ್ಥ (beggar).

4. ಮನೆಯಿಂದ ನೀವು ಹೊರಗೆ ಹೊರಟಾಗ ನೀವು ಶವವನ್ನು ನೋಡಿದರೆ ಅದನ್ನು ಶುಭದ ಸಂಕೇತ ಎಂದು ಪರಿಗಣಿಸಬಹುದು. ಆಗ ನೀವು ಆ ಶವಕ್ಕೆ/ ಆತ್ಮಕ್ಕೆ ನಮಸ್ಕಾರ ಮಾಡಬೇಕು. ಸ್ವಲ್ಪ ನಿಂತು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತಾ ಮೃತ ಆತ್ಮಕ್ಕೆ ಸದ್ಗತಿ ದೊರಕಲಿ, ಮುಕ್ತಿ ಸಿಗಲಿ ಎಂದು ಬೇಡಿಕೊಳ್ಳಬೇಕು. ಇಲ್ಲಿರುವ ಸರಳ ಸತ್ಯ, ನಂಬಿಕೆ ಎನೆಂದರೆ ಹೀಗೆ ಮೃತ ವ್ಯಕ್ತಿಯ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಪ್ರಾರ್ಥನೆ ಮಾಡುವುದರಿಂದ ಆ ಆತ್ಮವು ನಿಮ್ಮ ದುಃಖವನ್ನೂ ಸಹ ತನ್ನೊಂದಿಗೆ ತೆಗೆದುಕೊಂಡು ಹೋಗುತ್ತದೆ. ಇದರಿಂದ ನೀವು ಆ ದುಃಖವನ್ನು ಕಳೆದುಕೊಂಡು ಹಗುರವಾಗಬಹುದು (coffin).
Published On - 6:06 am, Thu, 16 December 21