
ಅಕ್ಕಿನೇನಿ ನಾಗಾರ್ಜುನ ಮಗ ಅಖಿಲ್ ವಿವಾಹಕ್ಕೆ ಯಶ್ ಅವರಿಗೆ ವಿಶೇಷ ಆಹ್ವಾನ ಇತ್ತು. ಅವರು ಮಿಸ್ ಮಾಡದೇ ಈ ವಿವಾಹಕ್ಕೆ ಆಗಮಿಸಿದರು. ಈ ಸಂದರ್ಭದ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಯಶ್ ಅವರ ಹೊಸ ಲುಕ್ ಗಮನ ಸೆಳೆದಿದೆ. ಅವರು ರಾಯಲ್ ಲುಕ್ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಅವರ ಫೋಟೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಅವರದ್ದು ಬೇರೆಯದೇ ರೀತಿಯ ಗತ್ತು ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ.

ಯಶ್ ಅವರು ಸದ್ಯ ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇದರ ಜೊತೆಗೆ ಅವರು ಈ ರೀತಿಯ ವಿಶೇಷ ಕಾರ್ಯಕ್ರಮಗಳಿಗೆ ಭೇಟಿ ನೀಡುತ್ತಾ ಇರುತ್ತಾರೆ. ಈ ಮೊದಲು ಯಡಿಯೂರಪ್ಪ ಅವರ ಮೊಮ್ಮೊಗನ ವಿವಾಹಕ್ಕೂ ತೆರಳಿದ್ದರು.

ಇನ್ನು, ಕಿಚ್ಚ ಸುದೀಪ್ ಅವರು ಪತ್ನಿ ಪ್ರಿಯಾ ಜೊತೆ ಈ ಆರತಕ್ಷತೆ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಸುದೀಪ್ ಅವರು ಖಡಕ್ ಲುಕ್ನಲ್ಲಿ ಗಮನ ಸೆಳೆದಿದ್ದಾರೆ. ಹೈದರಾಬಾದ್ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಈ ಆರತಕ್ಷತೆ ನೆರವೇರಿದೆ.

ಟಾಲಿವುಡ್ನ ಖ್ಯಾತ ನಾಮರು ಈ ರಿಸೆಪ್ಶನ್ನಲ್ಲಿ ಭಾಗಿ ಆಗಿದ್ದರು. ರಾಮ್ ಚರಣ್, ಮಹೇಶ್ ಬಾಬು, ಸಿತಾರಾ ಸೇರಿ ಟಾಲಿವುಡ್ನ ಅನೇಕ ದಿಗ್ಗಜರು ಈ ರಿಸೆಪ್ಷನ್ನಲ್ಲಿ ಭಾಗಿ ಆಗಿ ನವ ಜೋಡಿಗಳಿಗೆ ಶುಭ ಹಾರೈಸಿದರು.