Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿ ಅಧಿವೇಶನ: ಸೂಕ್ತ ಸಮಯಕ್ಕೆ ಬರುವ ಶಾಸಕರಿಗೆ ಕಾಫಿ ಕಪ್ ಗಿಫ್ಟ್, ಸ್ಪೀಕರ್ ಹೇಳಿದ್ದಿಷ್ಟು

Belagavi Winter Session: ಇಂದಿನಿಂದ ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಅಧಿವೇಶನದ ಸೂಕ್ತ ಸಮಯಕ್ಕೆ ಬರುವ ಶಾಸಕರುಗಳಿಗೆ ಉಡುಗೊರೆ ಕೊಡಲಾಗುತ್ತಿದೆ. ಇನ್ನು ಈ ಬಗ್ಗೆ ಸ್ಪೀಕರ್ ಯುಟಿ ಖಾದರ್ ಮಾತನಾಡಿದ್ದು, ಅದು ಈ ಕೆಳಗಿನಂತಿದೆ,

ಬೆಳಗಾವಿ ಅಧಿವೇಶನ: ಸೂಕ್ತ ಸಮಯಕ್ಕೆ ಬರುವ ಶಾಸಕರಿಗೆ ಕಾಫಿ ಕಪ್ ಗಿಫ್ಟ್, ಸ್ಪೀಕರ್ ಹೇಳಿದ್ದಿಷ್ಟು
ಸ್ಪೀಕರ್ ಯುಟಿ ಖಾದರ್
Follow us
Anil Kalkere
| Updated By: ರಮೇಶ್ ಬಿ. ಜವಳಗೇರಾ

Updated on: Dec 04, 2023 | 9:29 AM

ಬೆಳಗಾವಿ, (ಡಿಸೆಂಬರ್ 04): ಬೆಳಗಾವಿಯ ಸುವರ್ಣ ಸೌಧದಲ್ಲಿ  ಚಳಿಗಾಲದ ಅಧಿವೇಶನ (Belagavi Session)ಇಂದಿನಿಂದ ಆರಂಭವಾಗಲಿದೆ. ಬೆಳಗ್ಗೆ 11ಗಂಟೆಗೆ ಅಧಿವೇಶನ ಆರಂಭಗೊಳ್ಳಲಿದೆ. ಇದಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು,ಇತ್ತ ಸುವರ್ಣಸೌಧದ ಹೊರಗೆ, ಪ್ರತಿಭಟನಾ ಸ್ಥಳ ಸೇರಿದಂತೆ ಎಲ್ಲೆಡೆ ಸಿಸಿಟಿವಿ ಕಣ್ಗಾವಲು ಇರಿಸಲಾಗಿದೆ. ಇನ್ನು ಅಧಿವೇಶನಕ್ಕೆ ಸೂಕ್ತ ಸಮಯಕ್ಕೆ ಆಗಮಿಸುವ ಶಾಸಕರುಗಳಿಗೆ ಕಾಫಿ ಕಪ್ ಗಿಫ್ಟ್​  (Gift)ಕೊಡಲಾಗುತ್ತಿದೆ. ಈ ಬಗ್ಗೆ ಸ್ವೀಕರ್ ಯುಟಿ ಖಾದರ್ (UT Khadar) ಮಾಹಿತಿ ನೀಡಿದ್ದಾರೆ.

ಇನ್ನು ಈ ಬಗ್ಗೆ ಟಿವಿ9ಗೆ ಪ್ರತಿಕ್ರಿಯಿಸಿರುವ ಯು ಖಾದರ್, ಕಳೆದ ಅಧಿವೇಶದನಲ್ಲಿ ಮೊದಲ ಬೇಗ ಬಂದವರ ಹೆಸರನ್ನ ಕೂಗಿ ಹೇಳುತ್ತೇವೆ ಎಂದು ಹೇಳಿದ್ವಿ. ಅಂತಿಮವಾಗಿ ಯಾರು ಎಷ್ಟು ದಿನ‌ ಬಂದಿದ್ದಾರೆ ಅವರಿಗೆ ಗಿಫ್ಟ್ ಕೊಡುವುದಾಗಿ ಹೇಳಿದ್ವಿ. ಕಳೆದ ಅಧಿವೇಶನದಲ್ಲಿ‌ ಕೆಲವರು ಒಂದು ದಿನ, ಮತ್ತೆ ಕೆಲವರು ಐದು ದಿನ, ಹಲವರು ಹತ್ತು ದಿನವೂ ಬಂದಿದ್ದಾರೆ. ಇದಕ್ಕೆ ಅನುಗುಣವಾಗಿ ಇವರಿಗೆ ಪ್ರೋತ್ಸಾಹ ನೀಡಲು, ಗುರುತಿಸಿಕೊಳ್ಳಲು ಪ್ರಶಸ್ತಿ ನೀಡುತ್ತಿದ್ದೇವೆ. ತಡವಾಗಿ ಬರುವವರಿಗೆ ಶಿಕ್ಷೆ ವಿಧಿಸುವುದಕ್ಕಿಂತ ಈ ರೀತಿ ಉಡುಗೊರೆ ಕೊಟ್ಟು ಬೇಗ ಬರುವಂತೆ ಪ್ರೇರಣ ಮಾಡುತ್ತೇವೆ ಎಂದರು.

ಇದನ್ನೂ ಓದಿ: ಬೆಳಗಾವಿ ಅಧಿವೇಶನ: ಇಂದಿನಿಂದ ಚಳಿಗಾಲದ ಅಧಿವೇಶನ ಶುರು, ಸರ್ಕಾರಕ್ಕೆ ಚಳಿ ಬಿಡಿಸಲು ಪ್ರತಿಪಕ್ಷ ಸಜ್ಜು

ಜಮೀರ್ ಹೇಳಿಕೆ ಹಾಗೂ ಇತರೆ ಅಂಶಗಳ ಕುರಿತು ಪ್ರತಿಪಕ್ಷಗಳ ಪ್ರತಿಭಟನೆ ಬಗ್ಗೆ ಮಾತನಾಡಿದ ಸ್ಪೀಕರ್, ಚುನಾವಣೆ ಸಂದರ್ಭದಲ್ಲಿ ರಾಜಕೀಯವಾಗಿ ಹೇಳಿದ್ದಕ್ಕೆ ನಾನು ಉತ್ತರ ಕೊಟ್ಟಿದ್ದೇನೆ. ಪ್ರತಿಪಕ್ಷವಾಗಿ ಅವರೂ ಅವರ ಹೇಳಿಕೆಯನ್ನ ಕೊಟ್ಟಿದ್ದಾರೆ. ವಿಧಾನಸಭೆಯ ಒಳಗೆ ಸಿಕ್ಕಿದ 10 ದಿನಗಳ ಅವಧಿಯಲ್ಲಿ ಬೆಳಗಾವಿ, ರಾಜ್ಯದ ಜನರ ಪ್ರಗತಿ ವಿಚಾರವಾಗಿ ಚರ್ಚೆಗಳು ಮಾಡಲಿ. ಜನರಿಗೆ ಬೇಸರವಾಗುವ ವಿಚಾರಗಳ ಬಗ್ಗೆ ಚರ್ಚೆಸುವುದು ಬೇಡ ಎಂದರು.

ಬೇರೆ ಬೇರೆ ಚಾನಲ್ ಗಳಿವೆ, ಮ್ಯೂಸಿಕ್ ಮೋಡ್, ಮನರಂಜನೆ ಚಾನಲ್, ನ್ಯೂಸ್ ಚಾನಲ್ ಗಳಂತ ಇವೆ. ಶಾಂಪಿಂಗ್ ಚಾನಲ್ ಗಳು ಅಂತ ಸ್ವಿಚ್ ಗಳನ್ನ ಬದಲಿಸುತ್ತಾ ಇರುತ್ತೇವೆ. ಈಗ ಎಲೆಕ್ಷನ್ ಮೋಡ್ ಮುಗಿದಿದೆ, ಕಳೆದ 3 ತಿಂಗಳಿಂದ ಎಲ್ಲರೂ ಎಲೆಕ್ಷನ್ ಚಾನಲ್ ಮೋಡ್ ನಲ್ಲಿ ಇದ್ದರು. ರಾಜಕೀಯ ಚಾನಲ್ ಸಹ ಇತ್ತು, ಈಗ ರಾಜಕೀಯ ಮತ್ತು ಎಲೆಕ್ಷನ್ ಚಾನಲ್ ಬಿಟ್ಟು ಅಭಿವೃದ್ಧಿ ಚಾನಲ್ ಗೆ ಎಲ್ಲ ಶಾಸಕರು ಬರಬೇಕು. ಸುವರ್ಣ ಸೌಧದ ಮೆಟ್ಟಿಲುಗಳನ್ನ ಹತ್ತಿ ಬರುವಾಗ ತಮ್ಮ ಚಾನಲ್ ಮೋಡನ್ನ ಬದಲಿಸಿ ಬರುತ್ತಾರೆ ಎಂದು ತಿಳಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ
ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!
ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!