ಬಿಜೆಪಿ ಅಭ್ಯರ್ಥಿಗಳ 7ನೇ ಪಟ್ಟಿ ಪ್ರಕಟ, ಚಿತ್ರದುರ್ಗ ಹಾಲಿ ಎಂಪಿಗೆ ಕೊಕ್, ಬಿಎಸ್​ವೈ ಆಪ್ತನಿಗೆ ಮಣೆ

| Updated By: ರಮೇಶ್ ಬಿ. ಜವಳಗೇರಾ

Updated on: Mar 27, 2024 | 7:34 PM

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಏಳನೇ ಪಟ್ಟಿ ಪ್ರಕಟವಾಗಿದ್ದು, ಬಾಕಿ ಉಳಿಸಿಕೊಂಡಿದ್ದ ಕರ್ನಾಟಕದ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಇದರೊಂದಿಗೆ ಕರ್ನಾಟಕದ ಎಲ್ಲಾ 28 ಕ್ಷೇತ್ರಗಳಿಗೂ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದಂತಾಗಿದೆ.

ಬಿಜೆಪಿ ಅಭ್ಯರ್ಥಿಗಳ 7ನೇ ಪಟ್ಟಿ ಪ್ರಕಟ, ಚಿತ್ರದುರ್ಗ ಹಾಲಿ ಎಂಪಿಗೆ ಕೊಕ್, ಬಿಎಸ್​ವೈ ಆಪ್ತನಿಗೆ ಮಣೆ
ಗೋವಿಂದ ಕಾರಜೋಳ, ನಾರಾಯಣ ಸ್ವಾಮಿ
Follow us on

ಬೆಂಗಳೂರು, (ಮಾರ್ಚ್ 27): ಲೋಕಸಭಾ ಚುನಾವಣೆ (Loksabha Elections 2024) ಹಿನ್ನೆಲೆಯಲ್ಲಿ ಬಿಜೆಪಿ ಏಳನೇ ಪಟ್ಟಿ ಪ್ರಕಟವಾಗಿದ್ದು, ಬಾಕಿ ಉಳಿಸಿಕೊಂಡಿದ್ದ ಕರ್ನಾಟಕದ ಚಿತ್ರದುರ್ಗ ಲೋಕಸಭಾ (Chitradurga Loksabha) ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಹಾಲಿ ಸಂಸದ, ಕೇಂದ್ರ ಸಚಿವರಾಗಿದ್ದ ನಾರಾಯಣಸ್ವಾಮಿ (narayanaswamy) ಅವರಿಗೆ ಕೊಕ್ ನೀಡಲಾಗಿದ್ದು, ಬಿಎಸ್ ಯಡಿಯೂರಪ್ಪನವರ ಆಪ್ತ, ಮಾಜಿ ಉಪಮುಖ್ಯಮಂತ್ರಿ ಗೋವಿಂದ್ ಕಾರಜೋಳ(govind karjol )ಅವರಿಗೆ ಬಿಜೆಪಿ ಹೈಕಮಾಂಡ್​ ಮಣೆ ಹಾಕಿದೆ. ಇದರೊಂದಿಎಗ ಕರ್ನಾಟಕದ ಎಲ್ಲಾ 28 ಕ್ಷೇತ್ರಗಳಿಗೂ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದಂತಾಗಿದೆ.

ಚಿತ್ರದುರ್ಗ ಹಾಲಿ ಬಿಜೆಪಿ ಸಂಸದ ನಾರಾಯಣಸ್ವಾಮಿ ಅವರು ಸಹ ಈ ಬಾರಿ ಮತ್ತೊಮ್ಮೆ ಸ್ಪರ್ಧಿಸಲು ಸಿದ್ಧರಾಗಿದ್ದರು. ಇದರ ಜೊತೆಗೆ ಜನಾರ್ದನ ಸ್ವಾಮಿ ಅವರಿಗೆ ಟಿಕೆಟ್ ನೀಡಲಾಗುತ್ತೆ ಎನ್ನುವ ಸುದ್ದಿ ಇತ್ತು. ಅಲ್ಲದೇ ಪ್ರಮುಖವಾಗಿ ಬಿಜೆಪಿಯಿಂದ ಮಾದಾರ ಚೆನ್ನಯ್ಯ ಸ್ವಾಮಿ ಅವರು ಈ ಬಾರಿ ಚಿತ್ರದುರ್ಗದಿಂದ ಕಣಕ್ಕಿಳಿಯುತ್ತಾರೆ ಎನ್ನುವ ಚರ್ಚೆಗಳು ನಡೆದಿದ್ದವು. ಇದೀಗ ಅಂತಿಮವಾಗಿ ಅಚ್ಚರಿ ಎಂಬಂತೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಹಿರಿಯ ನಾಯಕ ಬಾಗಲಕೋಟೆ ಮೂಲದ ಗೋವಿಂದ ಕಾರಜೋಳ ಅವರಿಗೆ ಚಿತ್ರದುರ್ಗ ಟಿಕೆಟ್ ನೀಡಲಾಗಿದೆ.

ಇದನ್ನೂ ಓದಿ: ಚಾಮರಾಜನಗರ ಕ್ಷೇತ್ರದ ಟಿಕೆಟ್ ಫೈನಲ್: ಮತ್ತೋರ್ವ ಸಚಿವರ ಪುತ್ರನಿಗೆ ಕಾಂಗ್ರೆಸ್ ಮಣೆ

ಗೋವಿಂದ ಕಾರಜೋಳ ಅವರು ಬಾಗಲಕೋಟೆಯ ಮುಧೋಳ್ ವಿಧಾನಸಭಾ ಕ್ಷೇತ್ರದಿಂ ಸ್ಪರ್ಧಿಸಿ ಕಾಂಗ್ರೆಸ್​ನ ಆರ್​ಬಿ ತಿಮ್ಮಾಪುರ ಅವರ ವಿರುದ್ಧ ಸೋಲುಕಂಡಿದ್ದರು. ಹೀಗಾಗಿ ಅವರು ಈ ಬಾರಿ ವಿಜಯಪುರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಇಂಗಿತ ವ್ಯಕ್ತಪಡಿಸಿದ್ದರು. ಎಸ್​ಸಿ ಮೀಸಲು ಕ್ಷೇತ್ರವಾಗಿರುವ ವಿಜಯಪುರದ ಟಕೆಟ್ ಈ ಬಾರಿ  ಹಾಲಿ ಸಂಸದ ರಮೇಶ್ ಜಿಗಜಿಣಗಿ ಅವರಿಗೆ ಸಿಗುವುದು ಅನುಮಾನವಾಗಿತ್ತು. ಈ ಹಿನ್ನೆಲೆಯಲ್ಲಿ ಗೋವಿಂದ ಕಾರಜೋಳ ಅವರು ವಿಜಯಪುರ ಟಿಕೆಟ್​ಗಾಗಿ ಕಸರತ್ತು ನಡೆಸಿದ್ದರು. ಆದ್ರೆ, ಹೈಕಮಾಂಡ್​ ಮತ್ತೊಮ್ಮೆ ವಿಜಯಪುರ ಟಿಕೆಟ್​ ರಮೇಶ್ ಜಿಗಜಿಣಗೆ ಅವರಗೆ ನೀಡಿದ್ದು,  ಇದೀಗ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಟಿಕೆಟ್​ ಗೋವಿಂದ ಕಾರಜೋಳ ಅವರಿಗೆ ನೀಡಲಾಗಿದೆ.

ಇನ್ನು ಕಾಂಗ್ರೆಸ್​ನಿಂದ ಬಿಎನ್‌ ಚಂದ್ರಪ್ಪ ಕಣದಲ್ಲಿದ್ದಾರೆ. ಇದರಿಂದ ಎಸ್​​ಸಿ ಮೀಸಲ ಕ್ಷೇತ್ರವಾಗಿ ಚಿತ್ರದುರ್ಗದಲ್ಲಿ ಈ ಬಾರಿ ಗೋವಿಂದ್ ಕಾರಜೋಳ ಮತ್ತು ಚಂದ್ರಪ್ಪ ನಡುವೆ ಪೈಪೋಟಿ ನಡೆಯಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:08 pm, Wed, 27 March 24