ಮಹಾರಾಷ್ಟ್ರ ಚುನಾವಣೆಯಲ್ಲಿ 5 ಹಂತದಲ್ಲಿ ಬಿಜೆಪಿ “ಮ್ಯಾಚ್ ಫಿಕ್ಸಿಂಗ್” ಮಾಡಿದೆ, ರಾಹುಲ್ ಆರೋಪ
ಕಾಂಗ್ರೆಸ್ ಪಕ್ಷದ ನಾಯಕ ಇದೀಗ ಮತ್ತೊಂದು ಹೇಳಿಕೆ ನೀಡುವ ಮೂಲಕ ಚರ್ಚೆಗೆ ಕಾರಣವಾಗಿದ್ದಾರೆ. ನವೆಂಬರ್ 2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಐದು ಹಂತದ ಮ್ಯಾಚ್ ಫಿಕ್ಸಿಂಗ್ ಮಾದರಿಯನ್ನು ಬಳಸಿದೆ ಎಂದು ಆರೋಪಿಸಿದೆ. ಆ 5 ಹಂತದ ಮ್ಯಾಚ್ ಫಿಕ್ಸಿಂಗ್ ಯಾವುದು ಎಂಬುದು ಇಲ್ಲಿದೆ ನೋಡಿ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಮಹಾರಾಷ್ಟ್ರ ಚುನಾವಣೆ (Maharashtra Election) ಬಗ್ಗೆ ಹೇಳಿಕೆ ನೀಡಿ, ಮತ್ತೆ ಚರ್ಚೆಗೆ ಕಾರಣರಾಗಿದ್ದಾರೆ. ನವೆಂಬರ್ 2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಬಗ್ಗೆ ಮಾತನಾಡಿದ್ದಾರೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ಗೆಲುವನ್ನು ಸಾಧಿಸಲು “ಮ್ಯಾಚ್ ಫಿಕ್ಸಿಂಗ್” ಕಾರ್ಯಾಚರಣೆ ಮಾಡಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿ, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಅಜಿತ್ ಪವಾರ್ ನೇತೃತ್ವದ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಒಳಗೊಂಡ ಮಹಾಯುತಿ ಮೈತ್ರಿಕೂಟವು 288 ವಿಧಾನಸಭಾ ಸ್ಥಾನಗಳಲ್ಲಿ 235 ಸ್ಥಾನಗಳನ್ನು ಗೆದ್ದಿದೆ. ಇದರಲ್ಲಿ ಬಿಜೆಪಿ ಮಾತ್ರ 132 ಸ್ಥಾನಗಳನ್ನು ಗಳಿಸಿದ್ದು, ರಾಜ್ಯದ ಇತಿಹಾಸದಲ್ಲಿ ಇದು ಅತ್ಯುತ್ತಮ ಪ್ರದರ್ಶನವಾಗಿದೆ.
ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಲು ಐದು ಹಂತದ ಮ್ಯಾಚ್ ಫಿಕ್ಸಿಂಗ್ ಮಾದರಿಯನ್ನು ಬಳಸಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಬರೆದ ಲೇಖನದಲ್ಲಿ ರಾಹುಲ್ ಗಾಂಧಿ ಹೇಳಿದ್ದಾರೆ.
ಒಂದನೇ ಹಂತ: ಎಲೆಕ್ಷನ್ ಕಮೀಷನ್ ಅಧಿಕಾರಿಗಳನ್ನು ರಿಗ್ಗಿಂಗ್ ಮಾಡಿದ್ದಾರೆ.
ಎರಡನೇ ಹಂತ: ಮತದಾರರ ಪಟ್ಟಿಗೆ ನಕಲಿ ಮತದಾರರ ಸೇರ್ಪಡೆಯಾಗಿದೆ.
ಮೂರನೇ ಹಂತ: ಶೇಕಡಾವಾರು ಮತದಾನವನ್ನು ಹೆಚ್ಚಿಸಿದ್ದಾರೆ.
ನಾಲ್ಕನೇ ಹಂತ: ಗೆಲುವ ಅವಶ್ಯಕತೆ ಇರುವ ಕಡೆ ಬಿಜೆಪಿ ಬೋಗಸ್ ವೋಟಿಂಗ್ ನಡೆದಿದೆ.
ಐದನೇ ಹಂತ: ಸಾಕ್ಷ್ಯವನ್ನು ಮುಚ್ಚಿಡುವ ಕೆಲಸ ಮಾಡಿದ್ದಾರೆ.
2024 ರ ಚುನಾವಣೆಯಲ್ಲಿ, ಬಿಜೆಪಿ ಭರ್ಜರಿ ಜಯ ಸಾಧಿಸಿದರೆ, ಇದಕ್ಕೆ ವ್ಯತಿರಿಕ್ತವಾಗಿ, ಕಾಂಗ್ರೆಸ್ ರಚಿಸಿದ ವಿರೋಧ ಪಕ್ಷ ಮಹಾ ವಿಕಾಸ್ ಅಘಾಡಿ (ಎಂವಿಎ), ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) ಮತ್ತು ಶರದ್ ಪವಾರ್ ಅವರ ಎನ್‌ಸಿಪಿ (ಎಸ್‌ಪಿ) ಕೇವಲ 50 ಸ್ಥಾನಗಳಿಗೆ ಇಳಿದವು. ಇದಕ್ಕೂ ಮೊದಲು ತಮ್ಮ ಪಕ್ಷಗಳು ಮತ್ತು ಚಿಹ್ನೆಗಳ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದ ಉದ್ಧವ್ ಠಾಕ್ರೆ ಮತ್ತು ಶರದ್ ಪವಾರ್ ಅವರಿಗೆ, ಫಲಿತಾಂಶವು ಭಾರಿ ಹೊಡೆತವಾಗಿತ್ತು.
ನಾನು ಸಣ್ಣ ಪ್ರಮಾಣದ ವಂಚನೆಯ ಬಗ್ಗೆ ಮಾತನಾಡುತ್ತಿಲ್ಲ, ಆದರೆ ನಮ್ಮ ರಾಷ್ಟ್ರೀಯ ಸಂಸ್ಥೆಗಳನ್ನು ವಶಪಡಿಸಿಕೊಳ್ಳುವ ಕೈಗಾರಿಕಾ ಪ್ರಮಾಣದ ರಿಗ್ಗಿಂಗ್ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ರಾಹುಲ್ ಗಾಂಧಿ ಈ ಲೇಖನದಲ್ಲಿ ಹೇಳಿದ್ದಾರೆ. ಈ ಲೇಖನದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು 2023 ರಲ್ಲಿ ಚುನಾವಣಾ ಆಯುಕ್ತರ ನೇಮಕಾತಿ ಕಾಯ್ದೆಯ ಮೂಲಕ ತಂದ ಬದಲಾವಣೆಗಳ ಮೇಲೆ ಕೇಂದ್ರಿಕರಿಸಲಾಗಿದೆ. ಈ ಕಾಯ್ದೆಯು ಭಾರತದ ಮುಖ್ಯ ನ್ಯಾಯಮೂರ್ತಿಯನ್ನು ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ತೆಗೆದು ಹಾಕಿ, ಕೇಂದ್ರ ಸಚಿವರನ್ನು ಇದಕ್ಕೆ ನೇಮಿಸಲಾಗಿದೆ. ಇದು ಕಾರ್ಯಾಂಗಕ್ಕೆ ನೀಡಿದ ದೊಡ್ಡ ಪೆಟ್ಟು ಎಂದು ಹೇಳಿದ್ದಾರೆ.
ಆಯ್ಕೆ ಸಮಿತಿಯಲ್ಲಿ ಮುಖ್ಯ ನ್ಯಾಯಮೂರ್ತಿಗಳ ಬದಲಿಗೆ ಕ್ಯಾಬಿನೆಟ್ ಸಚಿವರನ್ನು ನೇಮಿಸುವ ನಿರ್ಧಾರ ಮಾಡುವ ಮೂಲಕ ಪ್ರಜಾಪ್ರಭುತ್ವಕ್ಕೆ ನೀಡಿ ದೊಡ್ಡ ಹೊಡೆತ. ನಿಮ್ಮನ್ನು ಕೇಳಿಕೊಳ್ಳಿ, ಒಂದು ಪ್ರಮುಖ ಸಂಸ್ಥೆಯಲ್ಲಿ ತಟಸ್ಥ ಮಧ್ಯಸ್ಥಗಾರನನ್ನು ತೆಗೆದುಹಾಕಲು ಯಾರಾದರೂ ಏಕೆ ಪ್ರಯತ್ನಿಸುತ್ತಾರೆ? ಪ್ರಶ್ನೆ ಕೇಳುವುದು ಎಂದರೆ ಉತ್ತರವನ್ನು ತಿಳಿದುಕೊಳ್ಳುವುದು ಎಂದು ರಾಹುಲ್ ಹೇಳಿದ್ದಾರೆ. ಚುನಾವಣಾ ಆಯೋಗವು ತನ್ನ ಕಾರ್ಯಚಟುವಟಿಕೆಯು ಸ್ವಾಯತ್ತವಾಗಿ ಉಳಿದಿದೆ ಮತ್ತು ಅದು ಸಾಂವಿಧಾನಿಕ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಇದನ್ನೂ ಓದಿ: ನನ್ನ ಶಿಫ್ಟ್ ಮುಗಿಯಿತು, ಅರ್ಧದಲ್ಲಿ ಬಿಟ್ಟು ಹೋದ ಪೈಲಟ್, ಡಿಸಿಎಂ ಏಕನಾಥ್ ಶಿಂಧೆ ವಿಮಾನ ನಿಲ್ದಾಣದಲ್ಲಿ ಬಾಕಿ
ರಾಹುಲ್ ಗಾಂಧಿ ಅವರ ಈ ಹೇಳಿಕೆಯನ್ನು ಬಿಜೆಪಿ ನಾಚಿಕೆಗೇಡು ಇದು ಎಂದು ಹೇಳಿದೆ. ರಾಹುಲ್ ಗಾಂಧಿ ದೇಶದ ಸಂಸ್ಥೆಗಳನ್ನು ಕೀಳಾಗಿ ನೋಡುತ್ತಿದ್ದಾರೆ, ಇದೀಗ ಅವರ ಮನಸ್ಸಿನಲ್ಲಿ ಮತ್ತೆ ಅನುಮಾನದ ವರ್ತನೆ ಶುರುವಾಗಿದೆ ಎಂದು ಹೇಳಿದೆ. ಈ ವಿಷಯಗಳನ್ನು ಚುನಾವಣಾ ಆಯೋಗವು ಪದೇ ಪದೇ ಸಂಪೂರ್ಣ ವಿವರವನ್ನು ನೀಡಿದೆ ಎಂದು ಬಿಜೆಪಿಯ ತುಹಿನ್ ಸಿನ್ಹಾ ಹೇಳಿದ್ದಾರೆ.
ರಾಹುಲ್ ಗಾಂಧಿಯವರ ಪ್ರಕಾರ, ಮಹಾರಾಷ್ಟ್ರದಲ್ಲಿ ನೋಂದಾಯಿತ ಮತದಾರರ ಸಂಖ್ಯೆ 2019 ರ ವಿಧಾನಸಭಾ ಚುನಾವಣೆಯಲ್ಲಿ 8.98 ಕೋಟಿಯಿಂದ 2024 ರ ಲೋಕಸಭಾ ಚುನಾವಣೆಯಲ್ಲಿ 9.29 ಕೋಟಿಗೆ ಏರಿದೆ, ಇದು ಐದು ವರ್ಷಗಳಲ್ಲಿ 31 ಲಕ್ಷದ ಹೆಚ್ಚಳವಾಗಿದೆ. ಆದರೆ ಮುಂದಿನ ಐದು ತಿಂಗಳಲ್ಲಿ, ನವೆಂಬರ್ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ, ಈ ಸಂಖ್ಯೆ ಇನ್ನೂ 41 ಲಕ್ಷದಷ್ಟು ಏರಿಕೆಯಾಗಿ 9.70 ಕೋಟಿಗೆ ತಲುಪುದು ಎಂದು ಹೇಳಿದ್ದಾರೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








