ಪ್ರಚಾರ ಭಾಷಣದಲ್ಲಿ ಹಣ ನೀಡುವ ಆಮಿಷ ಒಡ್ಡಿದ ಆರೋಪ; ಕಾಂಗ್ರೆಸ್ನ ಯೂಸುಫ್ ಷರೀಫ್ ಬಾಬು ವಿರುದ್ಧ ದೂರು ದಾಖಲು
ಅಷ್ಟೇ ಅಲ್ಲದೆ, ಚುನಾವಣಾ ಕಣದಿಂದ ಯೂಸುಫ್ ವಜಾಗೊಳಿಸಲು ಮನವಿ ಮಾಡಲಾಗಿದೆ. ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಲಾಗಿದೆ. SC ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ದೂರು ನೀಡಿದ್ದಾರೆ.
ಬೆಂಗಳೂರು: ಕರ್ನಾಟಕದಲ್ಲಿ 25 ಸ್ಥಾನಗಳಿಗೆ ವಿಧಾನಪರಿಷತ್ ಚುನಾವಣೆ ಡಿಸೆಂಬರ್ 10ರಂದು ನಡೆಯಲಿದೆ. ಈ ಮಧ್ಯೆ, ಇಂದು (ಡಿಸೆಂಬರ್ 1) ಬೆಂಗಳೂರು ನಗರ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಯೂಸುಫ್ ಷರೀಫ್ ಬಾಬು ವಿರುದ್ಧ ದೂರು ದಾಖಲು ಮಾಡಲಾಗಿದೆ. ಚುನಾವಣಾ ಆಯೋಗಕ್ಕೆ ಬಿಜೆಪಿ ಮುಖಂಡರಿಂದ ದೂರು ಸಲ್ಲಿಸಲಾಗಿದೆ. ಪ್ರಚಾರ ಭಾಷಣದಲ್ಲಿ ಹಣ ನೀಡುವ ಆಮಿಷ ಒಡ್ಡಿದ ಆರೋಪದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ದೂರು ದಾಖಲಾಗಿದೆ.
ಅಷ್ಟೇ ಅಲ್ಲದೆ, ಚುನಾವಣಾ ಕಣದಿಂದ ಯೂಸುಫ್ ವಜಾಗೊಳಿಸಲು ಮನವಿ ಮಾಡಲಾಗಿದೆ. ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಲಾಗಿದೆ. SC ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ದೂರು ನೀಡಿದ್ದಾರೆ.
ಯೂಸುಫ್ ಬಾಬು ಚುನಾವಣಾ ಕಣದಿಂದ ನಿವೃತ್ತಿಗೊಳಿಸಲಿ. ಯೂಸುಫ್ ಬಾಬು ವಿರುದ್ಧ ಆಯೋಗಕ್ಕೆ ದೂರು ನೀಡಿದ್ದೇವೆ. ಬಿಜೆಪಿ ವಿರುದ್ಧ ಆರೋಪ ಮಾಡುವುದನ್ನ ಕಾಂಗ್ರೆಸ್ ನಿಲ್ಲಿಸಲಿ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ಗೆ ಸಂವಿಧಾನದ ಬಗ್ಗೆ ಗೌರವ ಇದ್ದರೆ ಕೂಡಲೇ ಅಭ್ಯರ್ಥಿ ಯೂಸುಫ್ ಬಾಬು ನಿವೃತ್ತಿಗೊಳಿಸಲಿ. ಯೂಸುಫ್ ವಿರುದ್ಧ ಕಾಂಗ್ರೆಸ್ ಪಕ್ಷ ಕ್ರಮ ತೆಗೆದುಕೊಳ್ಳಲಿ. ಯೂಸುಫ್ ಬಾಬುವನ್ನು ಪಕ್ಷದಿಂದ ವಜಾಗೊಳಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಆಗ್ರಹ ವ್ಯಕ್ತಪಡಿಸಿದ್ದಾರೆ.
ನಾನು ಡಿಕೆಶಿ ಅವರ ಶಿಷ್ಯ, ಅವರಿಗಾಗಿ ಪ್ರಾಣ ಕೊಡುವವನು: ಯೂಸುಫ್ ಬಾಬು ಕೆಜಿಎಫ್ ಬಾಬು ಬಹಳ ನೊಂದುಕೊಂಡಿದ್ದಾರೆ. ಅವರ ಫ್ಯಾಮಿಲಿ ವಿಚಾರದಲ್ಲಿ ಮಂತ್ರಿಗಳು ಮಾತಾಡಿದ್ದಾರೆ. ರಾಜಕಾರಣದಲ್ಲಿ ಕುಟುಂಬಗಳನ್ನ ತರಬಾರದು ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಬಾಬು ಮಾನಸಿಕವಾಗಿ ನೊಂದಿದ್ದಾರೆ, ಸ್ವಲ್ಪ ನೋವಾಗಿದೆ. ಚುನಾವಣೆಯನ್ನ ಎದುರಿಸುತ್ತಾರೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ನಾನು ಡಿಕೆಶಿ ಅವರ ಶಿಷ್ಯ, ಅವರಿಗಾಗಿ ಪ್ರಾಣ ಕೊಡುವವನು. ಡಿಕೆಶಿ ನನ್ನ ನಂಬಿ ಟಿಕೆಟ್ ನೀಡಿದ್ದಾರೆ, ನಂಬಿಕೆ ಉಳಿಸುತ್ತೇನೆ. ಮತದಾರರ ಕಾಲು ಬೇಕಾದ್ರೂ ಹಿಡಿದು ಗೆಲ್ಲುವೆ ಎಂದು ಪರಿಷತ್ ಕಾಂಗ್ರೆಸ್ ಅಭ್ಯರ್ಥಿ ಯೂಸುಫ್ ಬಾಬು ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿ ವಿರುದ್ಧ ಟೀಕೆ ಮಾಡಿದ ಮುಸ್ಲಿಂ ನಾಯಕ ಎ ಅನ್ವರ್ ರಾಜಾರನ್ನು ಪಕ್ಷದಿಂದ ಹೊರಹಾಕಿದ ಎಐಎಡಿಎಂಕೆ
ಇದನ್ನೂ ಓದಿ: ರಂಗೇರಿದೆ ವಿಜಯಪುರ- ಬಾಗಲಕೋಟೆ ಪರಿಷತ್ ಚುನಾವಣೆ ಅಖಾಡ; ಕಾಂಗ್ರೆಸ್ಗೆ ಬಂಡಾಯದ ಬಿಸಿ, ಬಿಜೆಪಿಗೆ ಗೆಲ್ಲೋ ತವಕ
Published On - 9:17 pm, Wed, 1 December 21