ಕರ್ನಾಟಕದಲ್ಲಿಯೂ ಗುಜರಾತ್ ಮಾದರಿಯಲ್ಲಿ ಸಚಿವ ಸಂಪುಟ ರಚನೆಯಾಗಲಿ: ಎಂಪಿ ರೇಣುಕಾಚಾರ್ಯ

ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆ ಮಕ್ಕಳಾಟವಾಗಿದೆ. ಮಕ್ಕಳಿಗೆ ಜಾತ್ರೆ ಕಾರು ಕೊಡಿಸಿದಂತೆ ನನಗೆ ಕಾರು ಕೊಟ್ಟಿದ್ದಾರೆ. ಮನೆ ಕೊಟ್ಟಿದ್ದಾರೆ, ಜನಪರ ಕೆಲಸ ಮಾತ್ರ ಮಾಡಲು ಆಗುತ್ತಿಲ್ಲ ಎಂದು ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.

ಕರ್ನಾಟಕದಲ್ಲಿಯೂ ಗುಜರಾತ್ ಮಾದರಿಯಲ್ಲಿ ಸಚಿವ ಸಂಪುಟ ರಚನೆಯಾಗಲಿ: ಎಂಪಿ ರೇಣುಕಾಚಾರ್ಯ
ಎಂ.ಪಿ ರೇಣುಕಾಚಾರ್ಯ (ಸಂಗ್ರಹ ಚಿತ್ರ)

ದಾವಣಗೆರೆ: ಕರ್ನಾಟಕದಲ್ಲಿಯೂ ಗುಜರಾತ್ ಮಾದರಿಯಲ್ಲಿ ಸಚಿವ ಸಂಪುಟ ರಚನೆಯಾಗಲಿ. ರಾಜ್ಯದಲ್ಲಿಯೂ ಅದೇ ರೀತಿ ಸಚಿವ ಸಂಪುಟ ರಚನೆಯಾಗಲಿ. ನಮ್ಮಲ್ಲಿ ಕೆಲ ನಾಯಕರು ಮತ್ತೆ ಮತ್ತೆ ಸಚಿವರಾಗುತ್ತಿದ್ದಾರೆ. ಈ ವಿಚಾರವಾಗಿ ನಾವೇನೂ ರೆಸಾರ್ಟ್‌ ರಾಜಕೀಯ ಮಾಡಲ್ಲ. ಸಿಎಂ ಸ್ಥಾನ ಬಿಟ್ಟು ಉಳಿದವರಿಗೆ ಗುಜರಾತ್ ಮಾದರಿ ಇರಲಿ ಎಂದು ದಾವಣಗೆರೆಯಲ್ಲಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ.

ನನ್ನ ಆಗ್ರಹ ಅಂದ್ರೆ ಗುಜರಾತ್ ಮಾದರಿಯಲ್ಲಿ ರಾಜ್ಯ ಸಚಿವ ಸಂಪುಟ ರಚನೆ ಆಗಬೇಕು. ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನ ರಾಜೀನಾಮೆ ಕೊಡಲ್ಲ‌. ಬಿಜೆಪಿ ಸರ್ಕಾರವೆಲ್ಲ ಅಧಿಕಾರಕ್ಕೆ ಬಂದಾಗ ಸಚಿವರಾದವರು ಪಕ್ಷ ಸಂಘಟನೆಗೆ ಹೋಗಬೇಕು. ಪಕ್ಷ ಅಧಿಕಾರಕ್ಕೆ ಬರಬೇಕು. ಈಗ ಸಿಎಂ ಬಸವರಾಜ ಬೊಮ್ಮಾಯಿ ಬಿಟ್ಟು ಉಳಿದವರಿಗೆ ಗುಜರಾತ್ ಮಾದರಿ ಅನುಸರಿಬೇಕು ಎಂದು ಹೊನ್ನಾಳಿ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ.

ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ಸಿಎಂ ರಾಜಕೀಯ ಕಾರ್ಯದರ್ಶಿಯಿಂದಲೇ ಅಸಮಾಧಾನ ವ್ಯಕ್ತವಾಗಿದೆ. ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆ ಮಕ್ಕಳಾಟವಾಗಿದೆ ಎಂದು ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ. ಮಕ್ಕಳಿಗೆ ಜಾತ್ರೆ ಕಾರು ಕೊಡಿಸಿದಂತೆ ನನಗೆ ಕಾರು ಕೊಟ್ಟಿದ್ದಾರೆ. ಮನೆ ಕೊಟ್ಟಿದ್ದಾರೆ, ಜನಪರ ಕೆಲಸ ಮಾತ್ರ ಮಾಡಲು ಆಗುತ್ತಿಲ್ಲ. ನನಗೆ ಸಚಿವ ಸ್ಥಾನ ನೀಡಿ ಎಂದು ಈಗಾಗಲೇ ಕೇಳಿದ್ದೇನೆ. ಶಾಸಕಾಂಗ ಸಭೆಯಲ್ಲಿ ಸಹ ಈ ವಿಚಾರವನ್ನು ಹೇಳಿದ್ದೇನೆ ಎಂದು ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.

ಈ ಹಿಂದೆ ರೆಸಾರ್ಟ್ ರಾಜಕೀಯ ಮಾಡಿದ್ದೆ, ಈಗ ಮಾಡಲ್ಲ. ನನ್ನ ಮೇಲೆ ಇದೊಂದು ಕಪ್ಪು ಚುಕ್ಕೆ ಇದೆ. ಇನ್ಮುಂದೆ ನನ್ನ ವಾದವನ್ನು 4 ಗೋಡೆ ನಡುವೆ ಹೇಳುತ್ತೇನೆ. ನಾನು ಹುಲಿ, ಸಿಂಹ, ಆನೆ ಅಲ್ಲ ಜನ ಆ ರೀತಿ ಕರೆಯುತ್ತಾರಷ್ಟೇ ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ.

ಉತ್ತರ ಪ್ರಾಂತ್ಯದ RSS ಪ್ರಮುಖ ಅರವಿಂದರಾವ್ ದೇಶಪಾಂಡೆ ಭೇಟಿಯಾದ ರಮೇಶ್ ಜಾರಕಿಹೊಳಿ‌

ಉತ್ತರ ಪ್ರಾಂತ್ಯದ RSS ಪ್ರಮುಖ ಅರವಿಂದರಾವ್ ದೇಶಪಾಂಡೆ ಅವರನ್ನು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ‌ ಭೇಟಿಯಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿಯ ಅರವಿಂದರಾವ್ ನಿವಾಸದಲ್ಲಿ ಭೇಟಿ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಚರ್ಚೆ ನಡೆಸಲಾಗಿದೆ. ಅರವಿಂದರಾವ್ ಅವರ ಮಾರ್ಗದರ್ಶನ ಪಡೆಯಲು ಬಂದಿದ್ದೆ. ನಾನು ಯಾವುದೇ ಸಚಿವ ಸ್ಥಾನಕ್ಕಾಗಿ ಪ್ರಯತ್ನ ಮಾಡುತ್ತಿಲ್ಲ. ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧ ಎಂದು ಅರವಿಂದರಾವ್ ಭೇಟಿ ಬಳಿಕ ರಮೇಶ್ ಜಾರಕಿಹೋಳಿ ಹೇಳಿಕೆ ನೀಡಿದ್ದಾರೆ.

ಶಾಸಕ ಮಹೇಶ್ ಕುಮಟಳ್ಳಿಗೆ ಸಚಿವ ಸ್ಥಾನ ನೀಡದ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಕೆಲವು ವಿಚಾರ ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಿವೆ. ಎಲ್ಲವನ್ನೂ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಮಹೇಶ್ ಕುಮಟಳ್ಳಿಗೆ ಶೀಘ್ರದಲ್ಲೇ ಒಳ್ಳೆಯದಾಗಲಿದೆ ಎಂದು ತಿಳಿಸಿದ್ದಾರೆ. ಸಂಕ್ರಾಂತಿ ಬಳಿಕ ಮುಖ್ಯಮಂತ್ರಿ ಬದಲಾವಣೆಯ ವಿಚಾರವಾಗಿ ಮಾತನಾಡಿದ, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ. ಬೊಮ್ಮಾಯಿಯವರ ನೇತೃತ್ವದಲ್ಲಿಯೇ ಮುಂದಿನ ಚುನಾವಣೆ ನಡೆಯಲಿದೆ ಎಂದು ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಇದನ್ನೂ ಓದಿ: ಸಿಎಂ ಹೊರತುಪಡಿಸಿ ಕೆಲವರ ಬದಲಾವಣೆ ಆಗಬೇಕು, ಅದೇ ಮುಖ ನೋಡಿ ನೋಡಿ ಜನರಿಗೆ ಸಾಕಾಗಿದೆ: ರೇಣುಕಾಚಾರ್ಯ

ಇದನ್ನೂ ಓದಿ: ಡಿಕೆಶಿ ಅಣ್ಣ ಹೊನ್ನಾಳಿ ಕೋಟೆ ಭೇದಿಸೋಕೆ ಸಾಧ್ಯವೇ ಇಲ್ಲ, ನಾನು ರಾಜಕೀಯಕ್ಕೋಸ್ಕರ ಜಾತ್ರೆ ಮಾಡಲಿಲ್ಲ- ಶಾಸಕ ರೇಣುಕಾಚಾರ್ಯ

Published On - 3:00 pm, Sat, 15 January 22

Click on your DTH Provider to Add TV9 Kannada