ಕಲಬುರಗಿ: ಬಿಜೆಪಿ ಅಧಿಕಾರ ಹಿಡಿಯಲು ಜೆಡಿಎಸ್ ಸಹಕಾರ ಕೇಳುತ್ತಿದ್ದೇವೆ: ರವಿಕುಮಾರ್

Kalaburagi Municipality Elections 2021: ಕಲಬುರಗಿಗೆ ಸಚಿವಸ್ಥಾನ ನೀಡಿದ್ದರೆ ಹೆಚ್ಚು ಸ್ಥಾನ ಗೆಲ್ಲುತ್ತಿದ್ದೆವು. ಕಲಬುರಗಿ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ. ಪಕ್ಷೇತರ ಸದಸ್ಯ ಬಿಜೆಪಿ ಬೆಂಬಲಿಸುವುದಾಗಿ ಹೇಳಿದ್ದಾರೆ ಎಂದು ಬಿಜೆಪಿ ಎಂಎಲ್​ಸಿ ರವಿಕುಮಾರ್​ ಹೇಳಿದ್ದಾರೆ.

ಕಲಬುರಗಿ: ಬಿಜೆಪಿ ಅಧಿಕಾರ ಹಿಡಿಯಲು ಜೆಡಿಎಸ್ ಸಹಕಾರ ಕೇಳುತ್ತಿದ್ದೇವೆ: ರವಿಕುಮಾರ್
ರವಿಕುಮಾರ್ (ಸಂಗ್ರಹ ಚಿತ್ರ)
Follow us
TV9 Web
| Updated By: ganapathi bhat

Updated on: Sep 06, 2021 | 7:39 PM

ಕಲಬುರಗಿ: ಇಲ್ಲಿನ ಪಾಲಿಕೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತವಿಲ್ಲ. ಅಧಿಕಾರ ಹಿಡಿಯಲು ಜೆಡಿಎಸ್ ಸಹಕಾರ ಕೇಳುತ್ತಿದ್ದೇವೆ. ಶುಕ್ರವಾರ ಮತದಾನವಾಗಿದ್ದರಿಂದ ಪಕ್ಷಕ್ಕೆ ಹಿನ್ನಡೆಯಾಗಿದೆ. ಬೇರೆ ದಿನ ಮತದಾನವಾಗಿದ್ದರೆ ಬಿಜೆಪಿ ಇನ್ನೂ 4- 5 ಸ್ಥಾನ ಗೆಲ್ಲುತ್ತಿತ್ತು ಎಂದು ಕಲಬುರಗಿಯಲ್ಲಿ ಬಿಜೆಪಿ ಎಂಎಲ್​ಸಿ ರವಿಕುಮಾರ್​ ಹೇಳಿಕೆ ನೀಡಿದ್ದಾರೆ. ಕಲಬುರಗಿ ನಗರದ ಜನತೆ ಕಾಂಗ್ರೆಸ್​ಗೆ ತಕ್ಕ ಪಾಠ ಕಲಿಸಿದ್ದಾರೆ. ಕಾಂಗ್ರೆಸ್ ಭದ್ರಕೋಟೆ ಕಲಬುರಗಿಯಲ್ಲಿ ಕಮಲ ಅರಳಿದೆ. ಉತ್ತರ ಕರ್ನಾಟಕ ಭಾಗದ ಜನರು ಬಿಜೆಪಿ ಪರವಾಗಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕಲಬುರಗಿಗೆ ಸಚಿವಸ್ಥಾನ ನೀಡಿದ್ದರೆ ಹೆಚ್ಚು ಸ್ಥಾನ ಗೆಲ್ಲುತ್ತಿದ್ದೆವು. ಕಲಬುರಗಿ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ. ಪಕ್ಷೇತರ ಸದಸ್ಯ ಬಿಜೆಪಿ ಬೆಂಬಲಿಸುವುದಾಗಿ ಹೇಳಿದ್ದಾರೆ. ಕಾಂಗ್ರೆಸ್, ಎಐಎಂಐಎಂ ಒಂದೇ ನಾಣ್ಯದ ಎರಡು ಮುಖ ಎಂದು ಬಿಜೆಪಿ ಎಂಎಲ್​ಸಿ ರವಿಕುಮಾರ್​ ಹೇಳಿದ್ದಾರೆ.

ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಪಾಲಿಕೆಯ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷೆ ಮೀರಿದ ಸಾಧನೆ ಮಾಡಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಬಿಜೆಪಿ ಅಧಿಕಾರದ ಸಮೀಪ ಕೂಡ ಹೋಗಿರಲಿಲ್ಲ. ಕಳೆದ ಬಾರಿ ಕೇವಲ 7 ಸ್ಥಾನದಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಆದರೆ, ಈ ಬಾರಿ 23 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕಲಬುರಗಿ ಪಾಲಿಕೆ ಮೇಯರ್​ ಸ್ಥಾನ ಬಿಜೆಪಿಗೆ ಸಿಗುತ್ತದೆ. ಸರ್ಕಾರದ ಯೋಜನೆ ಬೆಂಬಲಿಸಿ ಬಿಜೆಪಿಗೆ ಮತ ಹಾಕಿದ್ದಾರೆ ಎಂದು ಕಲಬುರಗಿಯಲ್ಲಿ ಶಾಸಕ ರಾಜಕುಮಾರ ಪಾಟೀಲ್ ತಿಳಿಸಿದ್ದಾರೆ.

ಬೆಲೆ ಏರಿಕೆ ಪಾಲಿಕೆ ಚುನಾವಣೆ ಮೇಲೆ ಪರಿಣಾಮ ಬೀರಲ್ಲ ಎಂದು ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ್ ಹೇಳಿಕೆ ನೀಡಿದ್ದಾರೆ. ಬೆಲೆ ಏರಿಕೆಯಿಂದ ಜನರು ಊಟ ಮಾಡುವುದನ್ನು ಬಿಡಲ್ಲ. ಶುಕ್ರವಾರ ಮತದಾನ ಆಗಿದ್ದರಿಂದ ನಮಗೆ ಹಿನ್ನಡೆಯಾಗಿದೆ ಅಷ್ಟೇ. ಬಿಜೆಪಿಗೆ ಜೆಡಿಎಸ್​ ಬೆಂಬಲ ನೀಡುತ್ತೆ ಎಂಬ ವಿಶ್ವಾಸವಿದೆ. ನಮ್ಮ ಅಭ್ಯರ್ಥಿಯನ್ನು ಮೇಯರ್​ ಮಾಡಲು ಶ್ರಮಿಸುತ್ತೇವೆ. ಬಿಜೆಪಿ ಅಧಿಕಾರ ಹಿಡಿಯಲು ನಾವೆಲ್ಲ ಒಗ್ಗಟ್ಟಾಗಿ ಶ್ರಮಿಸ್ತೇವೆ ಎಂದು ಕಲಬುರಗಿ ನಗರದಲ್ಲಿ ಶಾಸಕ ದತ್ತಾತ್ರೇಯ ಪಾಟೀಲ ಹೇಳಿದ್ದಾರೆ.

ಇದನ್ನೂ ಓದಿ: ಕಲಬುರಗಿ ಪಾಲಿಕೆ ಚುನಾವಣೆ: ಸ್ಪಷ್ಟ ಬಹುಮತ ನೀಡದ ಮತದಾರ; ಟಿಕೆಟ್ ಹಂಚಿಕೆ, ಕಾರ್ಯಕರ್ತರ ಅಸಮಾಧಾನ ಕಾರಣ

ಇದನ್ನೂ ಓದಿ: ಕಲಬುರಗಿ ಪಾಲಿಕೆ ಚುನಾವಣೆ: ಯಾರಿಗೂ ಸ್ಪಷ್ಟ ಬಹುಮತ ಇಲ್ಲ; ಜೆಡಿಎಸ್ ಕಿಂಗ್ ಮೇಕರ್- ಗೆದ್ದ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ