ಬೆಂಗಳೂರು/ಚಾಮರಾನಗರ: ದೇಶದಲ್ಲಿ ಒಗ್ಗಟ್ಟು ಮೂಡಿಸುವ ಅಭಿಲಾಷೆಯೊಂದಿಗೆ ತಮಿಳುನಾಡಿನ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ (Bharat Jodo Yatra)ಹೆಸರಿನಲ್ಲಿ ಪಾದಯಾತ್ರೆ ಕೈಗೊಂಡಿರುವ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರು 20 ದಿನಗಳ ಕಾಲ ಕೇರಳದಲ್ಲಿ ಯಾತ್ರೆ ನಡೆಸಿ ಇಂದು(ಸೆಪ್ಟೆಂಬರ್ 30) ಕರ್ನಾಟಕ ಪ್ರವೇಶಿಸಿದ್ದಾರೆ.
ರಾಜ್ಯಕ್ಕೆ ಆಗಮಿಸಿದ ರಾಹುಲ್ ಗಾಂಧಿ (Rahul Gandhi) ಅವರನ್ನು ಬಂಡೀಪುರದ ಬಳಿ ಸಿದ್ದರಾಮಯ್ಯ ಅವರು ಬರ ಮಾಡಿಕೊಂಡರು. ರಾಹುಲ್ ಗಾಂಧಿಯವರಿಗೆ ರೇಷ್ಮೆ ಹಾರ ಹಾಕುವ ಮೂಲಕ ಸ್ವಾಗತ ಕೋರಿದರು. ಜೋಡೋ ಯಾತ್ರೆ ನೇತೃತ್ವದ ವಹಿಸಿಕೊಂಡು ಕರ್ನಾಟಕಕ್ಕೆ ಆಗಮಿಸುತ್ತಿದ್ದಂತೆಯೇ ಇತ್ತ ಬಿಜೆಪಿ (BJP)ಐಟಿ ಸೆಲ್ ಹಾಗೂ ನಾಯಕರು ಸರಣಿ ಟ್ವೀಟ್ ಮೂಲಕ ವ್ಯಂಗ್ಯವಾಗಿ ಸ್ವಾಗತಿಸಿದ್ದಾರೆ.
ವ್ಯಂಗ್ಯವಾಗಿ ಸ್ವಾಗತಿಸಿದ ಬಿಜೆಪಿ
ಈ ಹಿಂದೆ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಆಗಮಿಸಿದ್ದಾಗ ಕಾಂಗ್ರೆಸ್ ಸಾಮಾಜಿ ಜಾಲತಾಣಗಳಲ್ಲಿ ವ್ಯಂಗ್ಯಭರತವಾಗಿ ಸ್ವಾಗತ ಮಾಡಿತ್ತು. ಇದೀಗ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮೂಲಕ ಕರ್ನಾಟಕಕ್ಕೆ ಆಮಿಸಿದ್ದು, ಇದಕ್ಕೆ ಬಿಜೆಪಿ ಸರಣಿ ಟ್ವೀಟ್ ಮೂಲಕ ವ್ಯಂಗ್ಯವಾಗಿ ಸ್ವಾಗತ ಕೋರಿದೆ.
ಇಂದು ರಾಜ್ಯದಲ್ಲಿ ರಾಹುಕಾಲ ಆರಂಭದ ಸಮಯ ಬೆಳಿಗ್ಗೆ 10.30. ಆದುದರಿಂದ ದಿನನಿತ್ಯದ ನೆಮ್ಮದಿ ಮತ್ತು ಶಾಂತಿಗಾಗಿ ರಾಹು ಸಂಬಂಧಿತವಾದ ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಳ್ಳುವಂತೆ ಜನಹಿತಕ್ಕಾಗಿ ಜಾರಿ ಎಂದು ಟ್ವೀಟ್ ಮಾಡಿದೆ.
ಇಂದು ರಾಜ್ಯದಲ್ಲಿ ರಾಹುಕಾಲ ಆರಂಭದ ಸಮಯ ಬೆಳಿಗ್ಗೆ 10.30. ಆದುದರಿಂದ ದಿನನಿತ್ಯದ ನೆಮ್ಮದಿ ಮತ್ತು ಶಾಂತಿಗಾಗಿ ರಾಹು ಸಂಬಂಧಿತವಾದ ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಳ್ಳುವಂತೆ ಜನಹಿತಕ್ಕಾಗಿ ಜಾರಿ.#Rahukaala#SonsOfTipu#BharatTodoYatra#GoBackRahul pic.twitter.com/V34xXY4d3u
— BJP Karnataka (@BJP4Karnataka) September 30, 2022
ಜಾಮೀನಿನ ಆಧಾರದಲ್ಲಿ ಜೈಲಿನಿಂದ ಹೊರಗಿದ್ದುಕೊಂಡು ಭಾರತ್ ಜೋಡೋ ಯಾತ್ರೆ ಮಾಡುತ್ತಿರುವ ಭ್ರಷ್ಟ ಪರಿವಾರದ ನಕಲಿ ಗಾಂಧಿ ಕುಡಿ ರಾಹುಲ್ ಗಾಂಧಿ ಅವರಿಗೆ ಕರ್ನಾಟಕಕ್ಕೆ ಆತ್ಮೀಯ ಸ್ವಾಗತ.
ಇದನ್ನೂ ಓದಿ: Bharat Jodo Yatra: ಭಾರತ ಜೋಡಿಸುತ್ತಿರುವ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷ ಜೋಡಿಸುವುದು ಯಾವಾಗ
ಭಯೋತ್ಪಾದಕರ ಬಗ್ಗೆ ಮೃದು ಧೊರಣೆ ಹೊಂದಿ, ದೇಶ ವಿಭಜಕರ ಜೊತೆ ಸಂಬಂಧ ಹೊಂದಿರುವ ರಾಹುಲ್ ಗಾಂಧಿ ಅವರಿಗೆ ಸ್ವಾಗತ.#Rahukaala#BharatTodoYatra pic.twitter.com/BE0hKdxQYn
— BJP Karnataka (@BJP4Karnataka) September 30, 2022
ಭಯೋತ್ಪಾದಕರ ಬಗ್ಗೆ ಮೃದು ಧೊರಣೆ ಹೊಂದಿ, ದೇಶ ವಿಭಜಕರ ಜೊತೆ ಸಂಬಂಧ ಹೊಂದಿರುವ ರಾಹುಲ್ ಗಾಂಧಿ ಅವರಿಗೆ ಸ್ವಾಗತ. ರಾಹುಲ್ ಗಾಂಧಿ ಮಾಡುತ್ತಿರುವುದು ಭಾರತ ಜೋಡೋ ಯಾತ್ರೆಯಲ್ಲ, ಎಐಸಿಸಿ ಮುಂದಿನ ಅಧ್ಯಕ್ಷ ಸ್ಥಾನವನ್ನು ನಕಲಿ ಗಾಂಧಿಗಳ ಕುಟುಂಬದಲ್ಲೇ ಇರಿಸಿಕೊಳ್ಳಲು ಮತ್ತು ನಿಯಂತ್ರಿಸಲು ನಡೆಸುತ್ತಿರುವ ಕಸರತ್ತು ಎಂದು ಟಾಂಗ್ ಕೊಟ್ಟಿದೆ.
ರಾಹುಲ್ ಗಾಂಧಿ ಮಾಡುತ್ತಿರುವುದು ಭಾರತ ಜೋಡೋ ಯಾತ್ರೆಯಲ್ಲ,
ಎಐಸಿಸಿ ಮುಂದಿನ ಅಧ್ಯಕ್ಷ ಸ್ಥಾನವನ್ನು ನಕಲಿ ಗಾಂಧಿಗಳ ಕುಟುಂಬದಲ್ಲೇ ಇರಿಸಿಕೊಳ್ಳಲು ಮತ್ತು ನಿಯಂತ್ರಿಸಲು ನಡೆಸುತ್ತಿರುವ ಕಸರತ್ತು.#Rahukaala#BharatTodoYatra pic.twitter.com/K1ykQb317Y
— BJP Karnataka (@BJP4Karnataka) September 30, 2022
ಅಪರಾಧ ಸೂಚ್ಯಂಕ: (NCRB Report)
√ ತಮಿಳುನಾಡು – 422.1
√ ಕೇರಳ – 401.4
√ ರಾಜಸ್ಥಾನ – 269.6
√ ಕರ್ನಾಟಕ – 172.8ಮಾನ್ಯ @RahulGandhi ಅವರೇ, ಅಪರಾಧ ಪ್ರಮಾಣ ಕಡಿಮೆ ಇರುವ ಕರ್ನಾಟಕಕ್ಕೆ ಸ್ವಾಗತ. ನಿಮ್ಮ ಶಾಂತಿಯ ಮಂತ್ರ ಕರುನಾಡಿಗೆ ಅಗತ್ಯವಿಲ್ಲ.#Rahukaala#BharatTodoYatra
— BJP Karnataka (@BJP4Karnataka) September 30, 2022
Cases Registered(CR) under Rape for Crime against Scheduled Tribes during 2020 (MHA Report)
ರಾಜಸ್ಥಾನ – 119
ಕರ್ನಾಟಕ – 29ಮಾನ್ಯ @RahulGandhi ಅವರೇ, ಪರಿಶಿಷ್ಟ ಪಂಗಡ ಸಮುದಾಯದವರು ಸುರಕ್ಷಿತವಾಗಿರುವ ಕರುನಾಡಿಗೆ ಸ್ವಾಗತ. #Rahukaala#BharatTodoYatra
— BJP Karnataka (@BJP4Karnataka) September 30, 2022
‘ಭಾರತ್ ಜೋಡೋ’ ಪಾದಯಾತ್ರೆ ಬಗ್ಗೆ ಜೋಶಿ ಟ್ವೀಟ್
ವಿಭಜನಕಾರಿ ಶಕ್ತಿಗಳೊಂದಿಗೆ ಭಾರತ್ ಜೋಡೋ ಚರ್ಚಿಸಿ. ಭಾರತ ಮಾತೆಗೆ ಅಪಮಾನಿಸುತ್ತ ಜಾತ್ರೆಯೊಂದಿಗೆ ಬಂದಿದ್ದೀರಿ. ಭಾರತ್ ಜೋಡೋ ಯಾತ್ರೆ ಎಂಬ ಜಾತ್ರೆ ಜೊತೆ ಬಂದಿದ್ದೀರಿ. ಭಾರತಮಾತೆಗೆ ಅಪಾರ ಗೌರವ ಕೊಡುವ ಜಾಗಕ್ಕೆ ಬಂದಿದ್ದೀರಿ. ಭಾರತಮಾತೆಗೆ ಗೌರವ ಕೊಡುವ ಕರ್ನಾಟಕಕ್ಕೆ ಬಂದಿದ್ದೀರಿ, ಇಲ್ಲಿ ನೀವು ಅಪಮಾನಿಸಲ್ಲ ಎಂಬ ಆಶಯದೊಂದಿಗೆ ಸ್ವಾಗತ. ಭಾರತಮಾತೆಗೆ ಅಪಮಾನಿಸಲ್ಲವೆಂಬ ಆಶಯದೊಂದಿಗೆ ಸ್ವಾಗತ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟ್ವೀಟ್ ಮಾಡಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:04 pm, Fri, 30 September 22