AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ವಿರುದ್ಧ ಸೇಡು ತೀರಿಸಿಕೊಳ್ಳಲು ಮತ್ತೆ ಯಡಿಯೂರಪ್ಪ ಮೊರೆ ಹೋದ ಬಿಜೆಪಿ, ಇಲ್ಲಿದೆ ಕೇಸರಿ ಪಡೆಯ ಪಕ್ಕಾ ಪ್ಲಾನ್

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ವಿರುದ್ಧ ಸೇಡು ತೀರಿಸಿಕೊಳ್ಳಲು ಬಿಜೆಪಿ ಮತ್ತೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ಮೊರೆ ಹೊಗಿದೆ.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ವಿರುದ್ಧ ಸೇಡು ತೀರಿಸಿಕೊಳ್ಳಲು ಮತ್ತೆ ಯಡಿಯೂರಪ್ಪ ಮೊರೆ ಹೋದ ಬಿಜೆಪಿ, ಇಲ್ಲಿದೆ ಕೇಸರಿ ಪಡೆಯ ಪಕ್ಕಾ ಪ್ಲಾನ್
ಕುಟುಂಬ ಸಮೇತ ಪ್ರವಾಸಕ್ಕೆ ತೆರಳಿದ್ದ ಮಾಜಿ ಸಿಎಂ ಬಿಎಸ್​ವೈ ಇಂದು ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು.
ರಮೇಶ್ ಬಿ. ಜವಳಗೇರಾ
|

Updated on:Jun 23, 2023 | 9:44 AM

Share

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Elections 2023) ಹೀನಾಯವಾಗಿ ಸೋಲುಕಂಡಿರುವ ಬಿಜೆಪಿ(BJP), ಲೋಕಸಭೆ ಚುನಾವಣೆಯಲ್ಲಿ(Lokasabha Elections 2024) ಕಾಂಗ್ರೆಸ್ ವಿರುದ್ಧ ಸೇಡು ತೀರಿಸಿಕೊಳ್ಳಲು ಹಂಬಲಿಸುತ್ತಿದೆ. ಇದಕ್ಕಾಗಿ ಲೋಕಸಭಾ ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ಕಾಂಗ್ರೆಸ್ (Congress) ವಿರುದ್ಧ ಸಿಡಿದೆದ್ದಿದೆ. ಇದಕ್ಕಾಗಿ ಮತ್ತೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yediyurappa) ಅವರನ್ನು ಬಳಸಿಕೊಳ್ಳಲು ಬಿಜೆಪಿ ಮುಂದಾಗಿದೆ. ಹೌದು.. ವಿಧಾನಮಂಡಲ‌ ಅಧಿವೇಶನದ ವೇಳೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಪ್ರತಿಭಟನೆಗೆ ಬಿಜೆಪಿ ತೀರ್ಮಾನಿಸಿದೆ. ಅಧಿವೇಶನ ಆರಂಭವಾಗುವುದರೊಳಗೆ ಗ್ಯಾರಂಟಿ ಘೋಷಣೆ ಜಾರಿಯಾಗದಿದ್ದಲ್ಲಿ ಪ್ರತಿಭಟನೆ ಮಾಡಲು ಬಿಜೆಪಿ ನಿರ್ಧರಿಸಿದ್ದು, ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಮಾಜಿ ಶಾಸಕರ ಜೊತೆ ಯಡಿಯೂರಪ್ಪ ಪ್ರತಿಭಟನೆಗಿಳಿಯಲಿದ್ದಾರೆ.

ಇದನ್ನೂ ಓದಿ: ಕೊನೆಗೂ ವಿರೋಧ ಪಕ್ಷ ನಾಯಕನ ಆಯ್ಕೆಗೆ ಕೂಡಿಬಂತು ಮುಹೂರ್ತ, ಬಿಜೆಪಿಯಲ್ಲಿ ಯಾರಾಗ್ತಾರೆ ಪ್ರತಿಪಕ್ಷದ ನಾಯಕ?

ಹತ್ತು ದಿನಗಳ ಕಾಲ ಸದನದ ಒಳಗೆ ಹಾಲಿ ಬಿಜೆಪಿ ಶಾಸಕರು ಹಾಗೂ ಸದನದ ಹೊರಗೆ ಬಿಜೆಪಿಯ ಮಾಜಿ ಶಾಸಕರು ಪ್ರತಿಭಟನೆ ಮಾಡಬೇಕೆಂದು ಬಿಜೆಪಿ ನಾಯಕರು ಪ್ಲಾನ್ ಮಾಡಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ಫ್ಯಾಕ್ಟರ್ ಬಗ್ಗೆ ಬಿಜೆಪಿ ಅರಿತುಕೊಂಡಿದೆ. ಹಾಗಾಗಿ ಲೋಕಸಭಾ ಚುನಾವಣಾ ದೃಷ್ಟಿಯಿಂದ ‌ಮತ್ತೆ ಯಡಿಯೂರಪ್ಪ ಮೂಲಕವೇ ಹೋರಾಟ ರೂಪಿಸಲು ಸಿದ್ಧತೆ ನಡೆಸಿದೆ. ಅಧಿವೇಶನದ ವೇಳೆ ಸದನದ ಹೊರಗೆ ಯಡಿಯೂರಪ್ಪ ಧರಣಿ ಕುಳಿತರೆ ಸರ್ಕಾರ ತ್ವರಿತವಾಗಿ ಸ್ಪಂದಿಸಲೇಬೇಕು. ಆಗ ವಿಪಕ್ಷವಾಗಿ ಒತ್ತಡ ಹಾಕಿ ಗ್ಯಾರಂಟಿ ಜಾರಿ ಮಾಡಿಸಿದಂತಾಗುತ್ತದೆ ಎನ್ನುವುದು ಬಿಜೆಪಿ ನಾಯಕರ ಲೆಕ್ಕಾಚಾರವಾಗಿದೆ. ಅಲ್ಲದೇ ಈ ಮೂಲಕ ಯಡಿಯೂರಪ್ಪ ಅವರನ್ನು ಪಕ್ಷ ದೂರ ಮಾಡಿಲ್ಲ ಎಂಬ ಸಂದೇಶ ರವಾನಿಸುವ ಜೊತೆಗೆ ಪಕ್ಷದಿಂದ ದೂರಾದಂತಿರುವ ಲಿಂಗಾಯತ ಸಮುದಾಯವನ್ನು ಮತ್ತೆ ಸೆಳೆಯಲು ಬಿಜೆಪಿ ಯೋಜನೆ ರೂಪಿಸಿದೆ.

ಇನ್ನು ಯಡಿಯೂರಪ್ಪ ಬೆಂಬಲಿಗರನ್ನೂ ಲೋಕಸಭಾ ಚುನಾವಣೆಗೆ ಆಕ್ಟೀವ್ ಆಗಿಸಬಹುದು ಎನ್ನುವ ಲೆಕ್ಕಾಚಾರಗಳು ಸಹ ಅಡಗಿವೆ. ಹೀಗಾಗಿ ಈ ಎಲ್ಲಾ ಪಕ್ಕಾ ಪ್ಲಾನ್​ಗಳೊಂದಿಗೆ ಮತ್ತೆ ಯಡಿಯೂರಪ್ಪ ಮುಂದಿಟ್ಟುಕೊಂಡು ಬಿಜೆಪಿ, ಕಾಂಗ್ರೆಸ್ ವಿರುದ್ಧ ಹೋರಾಟಕ್ಕೆ ಧುಮುಕಲು ಮುಂದಾಗಿದೆ. ಈಗಾಗಲೇ ಲೋಕಸಭಾ ಚುನಾವಣೆಗೆ ನಿನ್ನೆಯಿಂದ ಆರಂಭವಾಗಿರುವ ಏಳು ತಂಡಗಳ ಪೈಕಿ ಮೊದಲ ತಂಡದ ನೇತೃತ್ವ ವಹಿಸಿ ಯಡಿಯೂರಪ್ಪ ಅವರು ಪ್ರವಾಸ ಆರಂಭಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 9:43 am, Fri, 23 June 23