ಬಿಎಸ್‌ವೈ ಅವರ ಸುದೀರ್ಘ ಅನುಭವ, ರಾಜಕೀಯ ಹೋರಾಟಕ್ಕೆ ಸಿಕ್ಕಿದ ಮನ್ನಣೆ: ಸಂತಸ ವ್ಯಕ್ತಪಡಿಸಿದ ಬೊಮ್ಮಾಯಿ
ಇದು ಸುದೀರ್ಘ ಅನುಭವ, ರಾಜಕೀಯ ಹೋರಾಟಕ್ಕೆ ಸಿಕ್ಕಿದ ಮನ್ನಣೆ. ಬಿಎಸ್‌ವೈಗೆ ಜವಾಬ್ದಾರಿ ನೀಡಿದ್ದಕ್ಕೆ ಹೈಕಮಾಂಡ್‌ಗೆ ಧನ್ಯವಾದಗಳು ಎಂದ ಬೊಮ್ಮಾಯಿ ಇದು ದೂರದೃಷ್ಟಿಯ ತೀರ್ಮಾನ ಎಂದು ಹೇಳಿದ್ದಾರೆ.
ಬೆಂಗಳೂರು: ಬಿಜೆಪಿ ಸಂಸದೀಯ ಮಂಡಳಿ, ಚುನಾವಣಾ ಸಮಿತಿಗೆ ಆಯ್ಕೆ ಬಿಎಸ್ ಯಡಿಯೂರಪ್ಪ(BS Yediyurappa) ಆಯ್ಕೆ ಹಿನ್ನೆಲೆಯಲ್ಲಿ ಇಂದು ಬಿಎಸ್‌ವೈ ಅವರ ಕಾವೇರಿ ನಿವಾಸದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai), ಬಿಎಸ್ ಯಡಿಯೂರಪ್ಪ ಅವರಿಗೆ ಅತ್ಯಂತ ಉನ್ನತ ಸ್ಥಾನ ನೀಡಿದ್ದಕ್ಕೆ ಸಂತಸವಾಗಿದೆ. ಇದು ಸುದೀರ್ಘ ಅನುಭವ, ರಾಜಕೀಯ ಹೋರಾಟಕ್ಕೆ ಮನ್ನಣೆ ಎಂದಿದ್ದಾರೆ. ಬಿಎಸ್‌ವೈಗೆ ಜವಾಬ್ದಾರಿ ನೀಡಿದ್ದಕ್ಕೆ ಹೈಕಮಾಂಡ್‌ಗೆ ಧನ್ಯವಾದಗಳು ಎಂದ ಬೊಮ್ಮಾಯಿ ಇದು ದೂರದೃಷ್ಟಿಯ ತೀರ್ಮಾನ ಎಂದಿದ್ದಾರೆ. ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ಬಹಳ ಸಕ್ರಿಯರಾಗಿದ್ದರು. ಯಡಿಯೂರಪ್ಪ ಮಾರ್ಗದರ್ಶನದಲ್ಲೇ ನಾನು ನಡೆಯುತ್ತಿದ್ದೇನೆ. ಇದನ್ನು ನಾನು ಸಿಎಂ ಸ್ಥಾನ ಸ್ವೀಕರಿಸಿದಾಗಲೇ ಹೇಳಿದ್ದೇನೆ. ರಾಜ್ಯ ಹಾಗೂ ದಕ್ಷಿಣ ಭಾರತದಲ್ಲಿ ಪಕ್ಷಕ್ಕೆ ಮತ್ತಷ್ಟು ಬಲ ಸಿಕ್ಕಿದೆ. ಬಿಎಸ್‌ವೈಗೆ ಜವಾಬ್ದಾರಿ ನೀಡಿದ್ದರಿಂದ ನಮ್ಮ ಉತ್ಸಾಹ ಹೆಚ್ಚಾಗಿದೆ. 2023ರಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರೋದು ಶತಃಸಿದ್ಧ. ವಿಪಕ್ಷಗಳ ಸರ್ವೆ ಯಾವ ರೀತಿ ಮಾಡಿದ್ದಾರೆಂದು ನಮಗೆ ಗೊತ್ತಿದೆ. ಹೀಗಾಗಿ ಮತ್ತೆ ಅಧಿಕಾರಕ್ಕೆ ಬರೋದು ನೂರಕ್ಕೆ ನೂರರಷ್ಟು ಖಚಿತ. ಬಿಎಸ್‌ವೈಗೆ ಹುದ್ದೆ ನೀಡಿದ್ದು ಪ್ರಮೋಷನ್ ಅಲ್ಲ, ಡಿಮೋಷನ್ ಅಲ್ಲ. ಯಡಿಯೂರಪ್ಪಗೆ ಹೊಣೆ ನೀಡಿದ್ದು ಮಿಷನ್ ದಕ್ಷಿಣ ಭಾಗ ಮತ್ತು ಕರ್ನಾಟಕದಲ್ಲಿ ಹೆಚ್ಚು ಸ್ಥಾನ ಬರಬೇಕು ಎಂಬುದರ ಎರಡೂ ಭಾಗ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನ ‘ಕಾವೇರಿ’ ನಿವಾಸದಲ್ಲಿ ಬಿಎಸ್‌ವೈಗೆ ಸಿಹಿ ತಿನ್ನಿಸಿ ಸಂಭ್ರಮ
ಬಿಜೆಪಿ ಸಂಸದೀಯ ಮಂಡಳಿ, ಚುನಾವಣಾ ಸಮಿತಿಯಲ್ಲಿ ಯಡಿಯೂರಪ್ಪ ಅವರಿಗೆ ಸ್ಥಾನ ಸಿಕ್ಕಿದ್ದಕ್ಕೆ ಬೆಂಗಳೂರಿನ ‘ಕಾವೇರಿ’ ನಿವಾಸದಲ್ಲಿ ಬಿಎಸ್‌ವೈಗೆ ಸಿಹಿ ತಿನ್ನಿಸಿ ಸಂಭ್ರಮಾಚರಣೆ ಮಾಡಲಾಗಿದೆ. ಸಚಿವರು, ಶಾಸಕರು ಯಡಿಯೂರಪ್ಪ ಅವರಿಗೆ ಹೂಗುಚ್ಛ ನೀಡಿ ಅಭಿನಂದಿಸಿದರು.
Published On - 5:53 pm, Wed, 17 August 22