ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾವೇ ನಂಬರ್ ಒನ್; ರಾಯಚೂರಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿಕೆ
ನಾವು ರೈತರು ಬೆಳೆ ಬೆಳೆಯುತ್ತೇವೆ. ನೀವು ಕಳೆ ಕಿತ್ಕೊಂಡುಹೋಗಿ. 50 ಆಕಳು ಕಟ್ಟಿದರೂ ಹೋರಿ ಕಟ್ಟೋರು ಒಂದನ್ನೇ. ಹಣ, ಊಟ ಕೊಟ್ಟು ಜನ ಕರೆಸುವುದು ಬಿಜೆಪಿ, ಕಾಂಗ್ರೆಸ್ ಸಂಸ್ಕೃತಿ ಎಂದರು.
ರಾಯಚೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ (Assembly Election) ನಾವೇ ನಂಬರ್ ಒನ್. ಬಿಜೆಪಿ ಸೆಕೆಂಡ್, ಕಾಂಗ್ರೆಸ್ ಪಕ್ಷ 3ನೇ ಸ್ಥಾನದಲ್ಲಿರಲಿದೆ ಎಂದು ರಾಯಚೂರಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ಹೇಳಿಕೆ ನೀಡಿದ್ದಾರೆ. ಎಲ್ಲಾ ಪಕ್ಷದವರು ಜೆಡಿಎಸ್ನವರನ್ನ ಕರೆದೊಯ್ಯುತ್ತಿದ್ದಾರೆ. ನಾವು ರೈತರು ಬೆಳೆ ಬೆಳೆಯುತ್ತೇವೆ. ನೀವು ಕಳೆ ಕಿತ್ಕೊಂಡುಹೋಗಿ. 50 ಆಕಳು ಕಟ್ಟಿದರೂ ಹೋರಿ ಕಟ್ಟೋರು ಒಂದನ್ನೇ. ಹಣ, ಊಟ ಕೊಟ್ಟು ಜನ ಕರೆಸುವುದು ಬಿಜೆಪಿ, ಕಾಂಗ್ರೆಸ್ ಸಂಸ್ಕೃತಿ ಎಂದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಜೆಡಿಎಸ್ ಸ್ಟ್ರಾಂಗ್ ಇಲ್ಲ, ವೀಕ್ ಇದೆ. ತಳಮಟ್ಟದಿಂದ ಪಕ್ಷ ಕಟ್ಟಬೇಕಾಗಿದೆ, ಜೆಡಿಎಸ್ ಪಕ್ಷ ಕಟ್ಟುತ್ತೇವೆ ಎಂದು ಮಾತನಾಡಿದ ಇಬ್ರಾಹಿಂ, ಬಿಬಿಎಂಪಿ ಚುನಾವಣೆಗೆ ‘ಸುಪ್ರೀಂ’ ಸೂಚಿಸಿದ್ದು ಒಳ್ಳೇದಾಯ್ತು. ಅಭ್ಯರ್ಥಿಗಳ ಆಯ್ಕೆ ಬಗ್ಗೆ ಸಭೆ ಸೇರಿ ತೀರ್ಮಾನ ಮಾಡುತ್ತೇವೆ. ಸಂಘ ಸಂಸ್ಥೆಗಳಿದ್ದರೆ ಜನಪ್ರತಿನಿಧಿಗಳು ಕೆಲಸ ಮಾಡಲು ಆಗುತ್ತದೆ. ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ನವರು ಖರ್ಚು ಮಾಡುವಷ್ಟು ನಮ್ಮಲ್ಲಿ ಹಣವಿಲ್ಲ. ಆದರೂ ಬೆಂಗಳೂರು ಜನ ನಮಗೆ ಸ್ಪಂದಿಸುತ್ತಾರೆನ್ನುವ ವಿಶ್ವಾಸವಿದೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಯುವಕರ ಬೈಕ್ ವೀಲಿಂಗ್, ಯುವಕರ ದುಸ್ಸಾಹಸಕ್ಕೆ ಪರದಾಡಿದ ವಾಹನ ಸವಾರರು
ಬಿಜೆಪಿಯವರು ಮಂಗಳಮುಖಿ: ಕಾಲುವೆ ಕಾಮಗಾರಿಯಲ್ಲಿ ಅವ್ಯವಹಾರ ವಿಚಾರದ ಬಗ್ಗೆ ಜೆಡಿಎಸ್ ಪ್ರತಿಕ್ರಿಯೆ ನೀಡದ ಬಗ್ಗೆ ಮಾತನಾಡಿದ ಇಬ್ರಾಹಿಂ, ಗಂಡಸರು ಹೊಡೆದಾಡಿದ್ರೆ, ಗಂಡಸರಿಗೆ ಕೇಳಿಸಬೇಕು. ಹೆಂಗಸರು ಹೊಡೆದಾಡಿದರೆ, ಹೆಂಗಸರಿಗೆ ಕೇಳಿಸಬೇಕು. ಮಂಗಳಮುಖಿಯರು ಹೊಡೆದಾಡಿದರೆ ಯಾರಿಗೆ ಕೇಳಿಸುತ್ತೆ? ಮಂಗಳಮುಖಿಯರು ಬಿಜೆಪಿಯವರೇ. ಬಿಎಸ್ವೈ ಮೆಕ್ ಅಪ್ ಮಾಡಿ ಸರ್ಕಾರ ತಂದಿದ್ದರು. ಪಾಪ ಬೊಮ್ಮಾಯಿಗೆ ಸಿಎಂ ಕೊಟ್ರು. ಸಚಿವ ಸಂಪುಟ ವಿಸ್ತರಣೆ ಮಾಡಲು ಬಿಡುತ್ತಿಲ್ಲ. ಈ ಗುಲಾಮಗಿರಿಯಿಂದ ಹೊರಬರಲು ಜನ ಪ್ರಾದೇಶಿಕ ಪಕ್ಷಕ್ಕೆ ಬೆಂಬಲಿಸುತ್ತಾರೆ ಎಂದು ಹೇಳಿದರು.
ಮೋದಿಗೆ ಟಾಂಗ್ ಕೊಟ್ಟ ಸಿಎಂ ಇಬ್ರಾಹಿಂ: ಪ್ರಧಾನಿ ಮೋದಿಗೆ ಟಾಂಗ್ ಕೊಟ್ಟ ಜೆಡಿಎಸ್ ರಾಜ್ಯಾಧ್ಯಕ್ಷ, ಮಮತಾ ಬ್ಯಾನರ್ಜಿ ನನ್ನನ್ನ ಕರೆದ್ರು. ಅಲ್ಲಿ ಒಂದು ನಂಬರ್ನಿಂದ ಎಣಿಸಬೇಕು. ಆದರೆ ಜೆಡಿಎಸ್ನಲ್ಲಿ 36 ನಂಬರ್ನಿಂದ ಎಣಿಸಬಹುದು. ನಮ್ಮ ರಾಜ್ಯದ ದೇವೇಗೌಡರು ಕೆಂಪುಕೋಟೆ ಹತ್ತಿದ್ರು. ನಮ್ಮ ದೇವರನ್ನ ನಾವ್ಯಾಕೆ ಕಡೆಗಣಿಸಬೇಕು. ಮೋದಿ ಹೇಳಿದ್ರು, ಗುಜರಾತ್ ಮಾದರಿ ಅಭಿವೃದ್ಧಿ ಅಂತ. ನಮ್ಮ ರಾಜ್ಯದಲ್ಲಿ ಪಾನಿಪುರಿ ಮಾರುತ್ತಿರುವವರು ಗುಜರಾತ್ನವರೇ ಎಂದರು.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:47 am, Sat, 21 May 22