ಕಳೆದ 10 ವರ್ಷಗಳ ಪ್ರಧಾನಿ ಮೋದಿ ಆಡಳಿತವನ್ನು ‘ವಿನಾಶ ಕಾಲ‘ ಎಂದ ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ ತಮ್ಮ ಎಕ್ಸ್ನಲ್ಲಿ ‘ಹತ್ತು ವರ್ಷಗಳ ಅನ್ಯಾಯ ಕಾಲ’ ಎಂಬ ಪೋಸ್ಟ್ ಹಂಚಿಕೊಳ್ಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಹತ್ತು ವರ್ಷಗಲ ಆಡಳಿತವನ್ನು ಟೀಕಿಸಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಿ ಮೋದಿ ಮತ್ತು ಇತರೆ ಬಿಜೆಪಿ ನಾಯಕರು ಬಿಜೆಪಿಯ ಆಡಳಿತವನ್ನು 'ಅಮೃತ ಕಾಲ' ಎಂದು ಬಣ್ಣಿಸುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಇದು ‘ವಿನಾಶ ಕಾಲ’ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಬೆಂಗಳೂರು, ಫೆಬ್ರವರಿ 10: ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರೆ ಬಿಜೆಪಿ ನಾಯಕರು ಬಿಜೆಪಿಯ ಆಡಳಿತವನ್ನು ‘ಅಮೃತ ಕಾಲ’ ಎಂದು ಬಣ್ಣಿಸುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಅದು ‘ವಿನಾಶ ಕಾಲ’ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ವಾಗ್ದಾಳಿ ಮಾಡಿದ್ದಾರೆ. ಈ ಕುರಿಯಾಗಿ ಸಿಎಂ ಸಿದ್ದರಾಮಯ್ಯ ತಮ್ಮ ಎಕ್ಸ್ನಲ್ಲಿ ‘ಹತ್ತು ವರ್ಷಗಳ ಅನ್ಯಾಯ ಕಾಲ’ ಎಂಬ ಪೋಸ್ಟ್ ಹಂಚಿಕೊಂಡಿದ್ದು, ಕಳೆದ 10 ವರ್ಷಗಳು ದೇಶದ ರೈತರು, ಕಾರ್ಮಿಕರು, ಮಹಿಳೆಯರು, ಯುವಜನರು, ಶೋಷಿತರು ಮತ್ತು ಜನಸಾಮಾನ್ಯರ ಪಾಲಿಗೆ ಅನ್ಯಾಯದ ಕಾಲ. ಜನರ ಸಮಸ್ಯೆಗಳ ಬಗ್ಗೆ ಮಾತನಾಡಬೇಕಾದ ಪ್ರಧಾನಿಗಳು ಮೂಕರಾಗಿದ್ದಾರೆ, ಕಷ್ಟ ಕೇಳಬೇಕಾದ ಕೇಂದ್ರದ ಸಚಿವರುಗಳು ಕಿವುಡರಾಗಿದ್ದಾರೆ. ನರೇಂದ್ರ ಮೋದಿ ಅವರ ಉದ್ಯಮಮಿತ್ರರು ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಶರವೇಗದಲ್ಲಿ ಮುಂದಕ್ಕೆ ಹೋಗುತ್ತಿದ್ದರೆ, ಈ ದೇಶದ ಜನಸಾಮಾನ್ಯ ಕೇಂದ್ರ ಸರ್ಕಾರದ ದುರಾಡಳಿತ, ವೈಫಲ್ಯಗಳ ಭಾರ ಹೊತ್ತು ಕುಸಿದು ಬಿದ್ದಿದ್ದಾನೆ ಎಂದು ಕಿಡಿಕಾರಿದ್ದಾರೆ.
ಪ್ರಧಾನಿ ಮೋದಿಯವರು ನೀಡಿದ ಒಂದೇ ಒಂದು ಭರವಸೆಯನ್ನು ಇದುವರೆಗೆ ಸಂಪೂರ್ಣವಾಗಿ ಈಡೇರಿಸಿಲ್ಲ. ರೈತರ ಆದಾಯ ದ್ವಿಗುಣಗೊಳಿಸುವುದು, ಯುವಕರಿಗೆ ವಾರ್ಷಿಕ 2 ಕೋಟಿ ಉದ್ಯೋಗ, ಮಹಿಳೆಯರಿಗೆ ರಕ್ಷಣೆ, ಕಾರ್ಮಿಕರಿಗೆ ಉದ್ಯೋಗ ಭದ್ರತೆ, ಶೋಷಿತ ಸಮುದಾಯಗಳ ರಕ್ಷಣೆ.
ಇದನ್ನೂ ಓದಿ: ಮೋದಿಯವರ ನಾಯಕತ್ವದಲ್ಲಿ ಇದು ಅತ್ಯಂತ ಯಶಸ್ವಿ ಅಧಿಕಾರಾವಧಿ: ಪ್ರಲ್ಹಾದ್ ಜೋಶಿ
ಕೈಗೆಟಕುವ ಬೆಲೆಯಲ್ಲಿ ಅಗತ್ಯ ವಸ್ತುಗಳನ್ನು ಒದಗಿಸುವುದು ಮುಂತಾದ ವರ್ಣರಂಜಿತ ಭರವಸೆಗಳು ಮೋದಿಯವರು ಚುನಾವಣೆಯಲ್ಲಿ ಗೆಲ್ಲಿಸಿತ್ತು. ಆದರೆ ಗೆದ್ದ ನಂತರ ಜನರಿಗೆ ನೀಡಿದ ಭರವಸೆಗಳನ್ನು ಮರೆತು ದೇವರು, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಿ ಕೈಗಾರಿಕೋದ್ಯಮಿಗಳ ಓಲೈಕೆಯಲ್ಲಿ ಮಗ್ನರಾಗಿದ್ದಾರೆ.
ಪ್ರಧಾನಿ ಮೋದಿ ಆಡಳಿತ ಕುರಿತಾಗಿ ಸಿಎಂ ಸಿದ್ದರಾಮಯ್ಯ ಟ್ವೀಟ್
Over the past ten years, Prime Minister @narendramodi and other BJP leaders have been describing the BJP’s governance as the ‘Amrit Kaal’.
In reality, this has been a period of ‘Vinasha Kaal’. During this time, the hardships and sufferings of the country’s farmers, workers,… pic.twitter.com/GXw8EeCgae
— Siddaramaiah (@siddaramaiah) February 10, 2024
ನರೇಂದ್ರ ಮೋದಿಯವರು ಕಳೆದ ಹತ್ತು ವರ್ಷಗಳ ಅನ್ಯಾಯದ ವಿವರಗಳನ್ನು ದತ್ತಾಂಶ ಸಹಿತ ಕರ್ನಾಟಕದ ಜನತೆಯ ಮುಂದೆ ಇಡುತ್ತಿದ್ದೇನೆ. ಅಮೃತ ಕಾಲೋ ಅಥವಾ ವಿನಾಶ ಕಾಲವೋ ಎಂದು ಜನ ನಿರ್ಧರಿಸಲಿ ಎಂದು ಹೇಳಿದ್ದಾರೆ.
ಕಾರ್ಮಿಕರಿಗೆ ಕಾಲ್ನಡಿಗೆಯ ಅನ್ಯಾಯ
ಕಾರ್ಮಿಕರಿಗೆ, ನೌಕರರಿಗೆ ಉದ್ಯೋಗ ಭದ್ರತೆ ಕೊಡುವ ಬದಲು ಗುತ್ತಿಗೆ ಆಧಾರದ ಅಭದ್ರ ಉದ್ಯೋಗ ಸೃಷ್ಟಿಸಲಾಗುತ್ತಿದೆ. ಸೂಕ್ತ ಮುನ್ನೋಟವಿಲ್ಲದ ದಿಢೀರ್ ಲಾಕ್ಡೌನ್ ಘೋಷಣೆಯಿಂದ 4 ಕೋಟಿ ವಲಸಿಗ ಕಾರ್ಮಿಕರು ಕುಟುಂಬ ಸಮೇತ ಕಾಲ್ನಡಿಗೆಯಿಂದ ಪರದಾಡಬೇಕಾಯಿತು.
ಇದನ್ನೂ ಓದಿ: ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಸುಳಿವು ನೀಡಿದ ಜಗದೀಶ್ ಶೆಟ್ಟರ್: ಕ್ಷೇತ್ರ ಯಾವುದು ಗೊತ್ತಾ?
ಕೋಟ್ಯಧಿಪತಿ ಉದ್ದಿಮೆದಾರರಿಗಷ್ಟೇ ನೆರವು ನೀಡಿದ ಸರ್ಕಾರ, ಕಾರ್ಮಿಕರು ಮತ್ತು ಸಣ್ಣ ಉದ್ದಿಮೆದಾರರಿಗೆ ಆತ್ಮನಿರ್ಭರತೆಯ ಉಪದೇಶವನ್ನಷ್ಟೇ ನೀಡಿತು ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:03 pm, Sat, 10 February 24