AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Prakash Hukkeri: ನಾನೇನು ಫುಟ್ಬಾಲೇ? ಸ್ವಪಕ್ಷದ ವಿರುದ್ಧವೇ ಕಾಂಗ್ರೆಸ್ ಎಂಎಲ್​ಸಿ ಪ್ರಕಾಶ್​ ಹುಕ್ಕೇರಿ ಆಕ್ರೋಶ

ಲೋಕಸಭೆ ಚುನಾವಣೆಯಲ್ಲಿ ಚಿಕ್ಕೋಡಿ ಕ್ಷೇತ್ರದಿಂದ ಸ್ಪರ್ಧಿಸಲು ಶಿಫಾರಸು ಮಾಡಿರುವ ವಿಚಾರವಾಗಿ ಕಾಂಗ್ರೆಸ್ ಎಂಎಲ್​​ಸಿ ಪ್ರಕಾಶ್ ಹುಕ್ಕೇರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ. ಎಂಎಲ್​ಸಿ ಆಗಿಯೇ ಮುಂದುವರಿಯುತ್ತೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸಿಎಂ ಹೇಳಿದರೂ, ಹೈಕಮಾಂಡ್ ಹೇಳಿದರೂ ಸ್ಪರ್ಧಿಸುವುದಿಲ್ಲ ಎಂದು ಅವರು ಖಡಕ್ ಆಗಿ ಹೇಳಿದ್ದಾರೆ.

Prakash Hukkeri: ನಾನೇನು ಫುಟ್ಬಾಲೇ? ಸ್ವಪಕ್ಷದ ವಿರುದ್ಧವೇ ಕಾಂಗ್ರೆಸ್ ಎಂಎಲ್​ಸಿ ಪ್ರಕಾಶ್​ ಹುಕ್ಕೇರಿ ಆಕ್ರೋಶ
ಪ್ರಕಾಶ್​ ಹುಕ್ಕೇರಿ
TV9 Web
| Updated By: Ganapathi Sharma|

Updated on:Feb 02, 2024 | 11:44 AM

Share

ಬೆಳಗಾವಿ, ಫೆಬ್ರವರಿ 2: ಲೋಕಸಭಾ ಚುನಾವಣೆಗೆ (Lok Sabha Elections) ಮತ್ತೆ ಕಾಂಗ್ರೆಸ್​ ಎಂಎಲ್​ಸಿ (Congress MLC) ಪ್ರಕಾಶ್​ ಹುಕ್ಕೇರಿ (Prakash Hukkeri) ಹೆಸರು ಪ್ರಸ್ತಾಪವಾಗಿರುವುದು ಅವರ ಆಕ್ರೋಶಕ್ಕೆ ಕಾರಣವಾಗಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೆರೂರ ಗ್ರಾಮದಲ್ಲಿ ಮಾತನಾಡಿದ ಅವರು, ಸ್ವಪಕ್ಷದ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಒತ್ತಡ ವಿಚಾರವಾಗಿ ಕೋಪಗೊಂಡ ಅವರು, ನಾನು ಏನಾದರೂ ಫುಟ್ಬಾಲಾ? ಈ ಹಿಂದೆ ನನ್ನನ್ನು ದೆಹಲಿಗೆ ಹೋಗಿ ಎಂದು ಒಗೆದರು. ಈಗ 2ನೇ ಬಾರಿ ಒದೆಯಲು ನಿಂತಿದ್ದಾರೆ, ಮತ್ತೆ ದಿಲ್ಲಿಗೆ ಹೋಗಿ ಬೀಳಬೇಕು. ನಾನೇನು ಫುಟ್ಬಾಲಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿಕ್ಷಕರ ಸೇವೆ ಮಾಡಲು ನನ್ನನ್ನು ಆಯ್ಕೆ ಮಾಡಿದ್ದಾರೆಯೇ ವಿನಹ ಚುನಾವಣೆಗೆ ನಿಲ್ಲಲು ನನ್ನನ್ನು ಆಯ್ಕೆ ಮಾಡಿಲ್ಲ. ವರ್ಷ, ಒಂದೂವರೆ ವರ್ಷಕ್ಕೊಮ್ಮೆ ಒದೆಯುತ್ತಾರೆ? ಇದೇನು ಫುಟ್ಬಾಲ್​ ಮ್ಯಾಚಾ? ನನ್ನ ಅವಧಿ ಇನ್ನೂ 5 ವರ್ಷ ಇದೆ, ಸಾಕಷ್ಟು ಕೆಲಸ ಮಾಡಿದ್ದೇನೆ. ಶಿಕ್ಷಕರ ಸಾಕಷ್ಟು ಬೇಡಿಕೆಗಳು ಈಡೇರಿಸಬೇಕಿದೆ. ಅದಕ್ಕಾಗಿ ಇಲ್ಲೇ ಕೆಲಸ ಮಾಡುವೆ ಎಂದು ಪ್ರಕಾಶ್​ ಹುಕ್ಕೇರಿ ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯಗೆ ಬರೆದುಕೊಟ್ಟಿಲ್ಲ: ಹುಕ್ಕೇರಿ

ಚುನಾವಣೆಗೆ ಸ್ಪರ್ಧಿಸುವಂತೆ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರಂತೆ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನೇನು ಅವರಿಗೆ ಬರೆದಿಕೊಟ್ಟಿದ್ದೇನೆಯೇ ಎಂದು ಮರು ಪ್ರಶ್ನೆ ಮಾಡಿದರು. ಚುನಾವಣೆಯಲ್ಲಿ ಸ್ಪರ್ಧಿಸುವಂತೆ ನಾನೇನೂ ಸಿಎಂ ಅವರಿಗೆ ಮಾತು ಕೊಟ್ಟಿಲ್ಲ. ಶಿಕ್ಷಕರ ಬೇಡಿಕೆಗಳ ಈಡೇರಿಕೆಗೇ ಕೆಲಸ ಮಾಡುವೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಮುದ್ದಹನುಮಗೌಡರ ಪರ ಮತಬೇಟೆ ಈಗಿಂದಲೇ ಆರಂಭಿಸಿದ ಸಚಿವ ರಾಜಣ್ಣ, ಟಿಕೆಟ್ ಸಿಗೋದು ಗ್ಯಾರಂಟಿಯೇ?

ಹೈಕಮಾಂಡ್ ಹೇಳಿದರೂ ಒಪ್ಪಲ್ಲ: ಪ್ರಕಾಶ್ ಹುಕ್ಕೇರಿ

ಚಿಕ್ಕೋಡಿ ಕ್ಷೇತ್ರದಿಂದ ಯಾರು ಸ್ಪರ್ಧೆ ಮಾಡಲಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹೈಕಮಾಂಡ್​ ಬಳಿ ವಿಚಾರಿಸಿ ಎಂದು ಹೇಳಿದ್ದಾರೆ. ನೀವು ಬೇಕಾದರೆ ಶಿಫಾರಸು ಮಾಡಿ. ಯಾವುದೇ ಸಂದರ್ಭದಲ್ಲಿ ಎಷ್ಟೇ ಒತ್ತಡ ಬಂದರೂ ಸಹ ನಾನು ಸ್ಪರ್ಧೆ ಮಾಡಲ್ಲ ಎಂದು ಅವರು ಹೇಳಿದ್ದಾರೆ. ಈ ಮೂಲಕ, ಹೈಕಮಾಂಡ್ ಹೇಳಿದರೂ ಒಪ್ಪಲ್ಲ ಎಂಬ ಸಂದೇಶವನ್ನು ಪರೋಕ್ಷವಾಗಿ ರವಾನಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:18 am, Fri, 2 February 24