ಜನರನ್ನು ವಂಚಿಸುವುದಕ್ಕಾಗಿ ಗಾಂಧಿ ಎಂದು ಹೆಸರಿಟ್ಟುಕೊಂಡಿದ್ದಾರೆ: ಸಿಟಿ ರವಿ ಕಿಡಿ

ಮಹಾತ್ಮ ಗಾಂಧಿಗೂ, ಸೋನಿಯಾ ಗಾಂಧಿಗೂ ಸಂಬಂಧ ಇದೆಯಾ? ಜನರನ್ನು ವಂಚಿಸುವುದಕ್ಕಾಗಿ ಗಾಂಧಿ ಎಂದು ಹೆಸರು ಇಟ್ಕೊಂಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಾಗ್ದಾಳಿ ಮಾಡಿದರು.

ಜನರನ್ನು ವಂಚಿಸುವುದಕ್ಕಾಗಿ ಗಾಂಧಿ ಎಂದು ಹೆಸರಿಟ್ಟುಕೊಂಡಿದ್ದಾರೆ: ಸಿಟಿ ರವಿ ಕಿಡಿ
ಸಿ.ಟಿ.ರವಿImage Credit source: thesouthfirst.com
Follow us
ಗಂಗಾಧರ​ ಬ. ಸಾಬೋಜಿ
|

Updated on:Mar 12, 2023 | 9:32 PM

ಕೊಪ್ಪಳ: ಮಹಾತ್ಮ ಗಾಂಧಿಗೂ, ಸೋನಿಯಾ ಗಾಂಧಿಗೂ (Sonia Gandhi) ಸಂಬಂಧ ಇದೆಯಾ? ಜನರನ್ನು ವಂಚಿಸುವುದಕ್ಕಾಗಿ ಗಾಂಧಿ ಎಂದು ಹೆಸರು ಇಟ್ಕೊಂಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (CT Ravi) ವಾಗ್ದಾಳಿ ಮಾಡಿದರು. ಜಿಲ್ಲೆಯಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ ಅವಧಿಯಲ್ಲಿ ಉಗ್ರರಿಗೆ ಬಿರಿಯಾನಿ ಭಾಗ್ಯ ನೀಡಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನೀಡಿದ್ದು ಕೊಲೆ ಭಾಗ್ಯ. ಇವರು ಅಧಿಕಾರಕ್ಕೆ ಬಂದರೆ ತುಕಡೇ ಗ್ಯಾಂಗ್​​ ಹೊರಗೆ ಬರುತ್ತೆ. ಡಿ.ಕೆ. ಶಿವಕುಮಾರ ಕುಕ್ಕರ್​ ಬಾಂಬ್ ಬ್ರದರ್ಸ್ ಎದ್ದು ಕುಳಿತುಕೊಳ್ಳುತ್ತಾರೆ. ಯೋಗಿ ಮಾದರಿ ತರಬೇಕೆಂದು ನಾನು ಬೊಮ್ಮಾಯಿಗೆ ಹೇಳಿದ್ದೇನೆ. ಎಲ್ಲಾ ಕಡೆ ಅಲ್ಲದಿದ್ದರೂ ಬಾಲಬಿಚ್ಚೋ ಕಡೆ ಬುಲ್ಡೋಜರ್​ ತರಬೇಕು. ನಾವು ಅನುಭವ ಮಂಟಪ ಅಭಿವೃದ್ಧಿಗೆ ಕೈಹಾಕಿದ್ದೇವೆ. ಬಸವಣ್ಣ, ಟಿಪ್ಪುವಿನ ವಿಚಾರದ ಮೇಲೆ ಚುನಾವಣೆ ನಡೆಯುತ್ತೆ ಎಂದರು.

ಈಗ ಕಾಂಗ್ರೆಸ್​​ನವರು ಹೇಳುತ್ತಾರೆ 300 ಯೂನಿಟ್ ಕರೆಂಟ್​ ಫ್ರೀ ಅಂತಾ. ಅವರು ಹೇಳುತ್ತಾರೆ ಸುಳ್ಳು ನಮ್ಮಲ್ಲಿಲ್ಲ, ಆದರೆ ಸುಳ್ಳೇ ಅವರ ಮನೆ ದೇವರು. ಕರೆಂಟ್ ಇಲ್ಲ ಎಂದು ಪೋನ್ ಮಾಡಿದ ವ್ಯಕ್ತಿಯನ್ನ ಜೈಲಿಗೆ ಹಾಕಿದ್ದು ಡಿ.ಕೆ. ಶಿವಕುಮಾರ. ಇಂತಹ ಸುಳ್ಳಿನ ಜನ ಕರೆಂಟ್ ಕೊಡದವರು, ಇನ್ನೂ ಫ್ರೀ ಕೊಡುತ್ತೀರಾ. ಕಾಂಗ್ರೆಸ್​ನವರೇ ನಿಮಗೆ ನಾಚಿಕೆ ಮಾನ ಮರ್ಯಾದೆ ಇದೆಯಾ ಎಂದು ಪ್ರಶ್ನಿಸಿದರು. ಅವರು ಕೊಡುತ್ತಿರುವುದು ಫಾಲ್ಸ್ ಕಾರ್ಡ, ಮೋಸ ವಂಚನೆ ಅವರಿಗೆ ಮೊದಲಿಂದಲು ಬಂದಿದ್ದು ಎಂದು ಹರಿಹಾಯ್ದರು.

ಇದನ್ನೂ ಓದಿ: ನಾನು ಇದೇ ಕಾರಣಕ್ಕಾಗಿ ಮತ್ತೆ ರಾಜಕೀಯ ಕ್ಷೇತ್ರಕ್ಕೆ ಬಂದಿದ್ದೇನೆ ಎಂದ ಜನಾರ್ದನ ರೆಡ್ಡಿ

ಕೊಪ್ಪಳದಲ್ಲಿ ಐದು ವಿಧಾನಸಭಾ ಕ್ಷೇತ್ರ ಗೆಲ್ಲುವ ನಿರೀಕ್ಷೆ: ಶ್ರೀರಾಮುಲು 

ಸಾರಿಗೆ ಸಚಿವ ಶ್ರೀರಾಮುಲು ಮಾತನಾಡಿ, ಇಡೀ ರಾಜ್ಯದಾದ್ಯಂತ ನಾಲ್ಕು ಕಡೆ ಯಾತ್ರೆ ನಡೆಯುತ್ತಿದೆ. 1000 ಕಿ.ಮೀ ಹತ್ತರತ್ತರ ವಿಜಯ ಸಂಕಲ್ಪ ಯಾತ್ರೆ ಸಾಗಿದೆ. ಕೊಪ್ಪಳದಲ್ಲಿ ಐದು ವಿಧಾನಸಭಾ ಕ್ಷೇತ್ರ ಗೆಲ್ಲುವ ನಿರೀಕ್ಷೆ ಇದೆ. ಕಲ್ಯಾಣ ಕರ್ನಾಟಕದಲ್ಲಿ 31 ಕ್ಷೇತ್ರದಲ್ಲಿ ಗೆಲ್ಲುವ ನಿರೀಕ್ಷೆ ನಮ್ಮದು. ಈ ಹಿನ್ನೆಲೆ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ನಡೆದಿದೆ. ರಾಜ್ಯದಲ್ಲಿ ರಸ್ತೆಗಳ ಅಭಿವೃದ್ಧಿಗೆ ಪ್ರಧಾನಿ ಮೋದಿ ಅವರನ್ನು ಶ್ಲಾಘೀಸಬೇಕು ಎಂದು ಹೇಳಿದರು.

ಸಿದ್ದರಾಮಯ್ಯ ಸಿಎಂ ಆಗಲು ಡಿಕೆ ಶಿವಕುಮಾರ ಬೀಡಲ್ಲ 

ಕಾಂಗ್ರೆಸ್ ನಾಯಕರಿಗೆ ಅಧಿಕಾರಕ್ಕೆ ಬರಲ್ಲ ಎನ್ನುವುದು ಗ್ಯಾರೆಂಟಿಯಾಗಿದೆ. ಹಾಗಾಗಿ 70 ವರ್ಷಗಳ ನಂತರ ಗ್ಯಾರೆಂಟಿ ಕಾರ್ಡ್ ಗಳನ್ನು ಕೊಡುತ್ತಿದ್ದಾರೆ. ಕಾಂಗ್ರೆಸ್​ನ್ನು ಮನೆಗೆ ಕಳುಹಿಸುವ ಸಂಕಲ್ಪ ಮಾಡಬೇಕು. ಕಾಂಗ್ರೆಸ್ ಪರಿಸ್ಥಿತಿ ಹೀನಾಯವಾಗಿದೆ. ಕನ್ನಡಿ ಹಾಕಿಕೊಂಡು ಹುಡುಕವ ಪರಿಸ್ಥಿತಿ ಇದೆ. ಕಾಂಗ್ರೆಸ್​ನಲ್ಲಿ ಡಿ.ಕೆ. ಶಿವಕುಮಾರ ಹಾಗೂ ಸಿದ್ದರಾಮಯ್ಯ ಅವರ ನಡುವೆ ಅಧಿಕಾರಕ್ಕಾಗಿ ಜಗಳ ನಡೆಯುತ್ತಿದೆ. ಸಿದ್ದರಾಮಯ್ಯ ಅವರ ಮೇಲೆ ನನಗೆ ಗೌರವಿದೆ. ಆದರೆ ಅವರನ್ನು ಸಿಎಂ ಆಗಲು ಡಿಕೆ ಶಿವಕುಮಾರ ಬೀಡಲ್ಲ ಎಂದರು.

ಇದನ್ನೂ ಓದಿ: ಲಿಂಗಾಯತರು, ವೀರಶೈವರು ಯಾವುದೇ ಕಾರಣಕ್ಕೂ ಕಾಂಗ್ರೆಸ್​ನ್ನು ನಂಬಬಾರದು: ಪ್ರಧಾನಿ ಮೋದಿ

ಕಾಂಗ್ರೆಸ್ ಮುಕ್ತ ಮುಕ್ತ

ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯ ಅವರು ಹರಕೆ ಕುರಿಯಾಗಿದ್ದಾರೆ. ಒಂದು ಸೀರಿಯಲ್​ ಬರುತ್ತಿತ್ತು, ಅದೇ ರೀತಿ ಕರ್ನಾಟಕದಲ್ಲಿ ಕಾಂಗ್ರೆಸ್ ಮುಕ್ತ ಮುಕ್ತವಾಗಿತ್ತಿದೆ. ಜೀವನದಿ ತುಂಗಾಭದ್ರ ಜಲಾಶಯಕ್ಕೆ ಸಮಾನಾಂತರ ಜಲಾಶಯವಾಗಬೇಕಾಗಿದೆ. ಇದಕ್ಕಾಗಿ 1000 ಕೋಟಿ ರೂಪಾಯಿ ಇಡಲಾಗಿದೆ. ಕೊಪ್ಪಳಕ್ಕೆ ವಿಮಾನ ನಿಲ್ದಾಣ ತರಲು ಸಂಕಲ್ಪ ಮಾಡಲಾಗಿದೆ ಎಂದು ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:24 pm, Sun, 12 March 23

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು