ಕಾಂಗ್ರೆಸ್ಗೆ ಬರ್ತಿಯೋ ಸಿಡಿ ಬಿಡ್ಲೋ ಎಂದು ಮಂತ್ರಿಗೆ ಡಿಕೆ ಶಿವಕುಮಾರ್ ಹೆದರಿಸುತ್ತಿದ್ದಾರೆ, ರಮೇಶ್ ಜಾರಕಿಹೊಳಿ ಗಂಭೀರ ಆರೋಪ
ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಆಡಳಿತಕ್ಕೆ ಬರಲು ಬಿಡಲ್ಲ. ಹೀಗೆಂದು ನಾನು ಶಪಥ ಮಾಡಿದ್ದೇನೆ. ಏನ ಬೇಕಾದ್ದು ಆಗಲ್ಲಿ, ಎಷ್ಟೇ ತೊಂದರೆಯಾಗಲಿ ಬಿಡಲ್ಲ. ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. 2024ಕ್ಕೆ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಲಿದ್ದಾರೆ. ನಿಜವಾದ ಕೋಮುವಾದಿ ಪಕ್ಷ ಅಂದ್ರೆ ಕಾಂಗ್ರೆಸ್. ಜಾತಿಗಳನ್ನು ಒಡೆದು ಆಳುವಂತಹ ಪಕ್ಷ ಕಾಂಗ್ರೆಸ್ ಎಂದು ಶಾಸಕ ರಮೇಶ ಜಾರಕಿಹೊಳಿ ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿ: ಈ ಹಿಂದೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಕಾಕ್ (Gokak) ಶಾಸಕ ರಮೇಶ್ ಜಾರಕಿಹೊಳಿ (Ramesh Jarkiholi) ಸುದ್ದಿಗೋಷ್ಠಿ ನಡೆಸಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಮತ್ತು ಬೆಳಗಾವಿ ಗ್ರಾಮಾಂತರ ಕಾಂಗ್ರೆಸ್ (Congress) ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ವಿರುದ್ಧ ಹರಿಹಾಯ್ದಿದ್ದರು. ಈಗ ಮತ್ತೆ, ನನ್ನ ಜೊತೆಗೆ ಓರ್ವ ಮಂತ್ರಿಗೆ ಡಿಕೆ ಶಿವಕುಮಾರ್ ಹೆದರಿಸುತ್ತಿದ್ದಾನೆ. ನಮ್ಮ ಪಕ್ಷಕ್ಕೆ ಬರುತ್ತಿಯೋ, ಸಿಡಿ ಬಿಡ್ಲೋ ಎಂದು ಬೇದರಿಸುತ್ತಾರೆ ಎಂದು ರಮೇಶ್ ಜಾರಕಿಹೋಳಿ ಆರೋಪ ಮಾಡಿದ್ದಾರೆ. ಗೋಕಾಕ್ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು ಸಿಡಿ ಪಾರ್ಟ್ನರ್ ಮತ್ತು ಆ್ಯಕ್ಟರ್ ಬೆಳಗಾವಿಯಲ್ಲೇ ಇದ್ದಾರೆ. ಅದಕ್ಕೆ ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ಈಗ ಮತ್ತೊಬ್ಬ ಡ್ರೈವರ್ ಸಹ ಸೇರಿಕೊಂಡಿದ್ದಾನೆ ಎಂದು ಪರೋಕ್ಷವಾಗಿ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಹಟ್ಟಿಹೊಳಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಯಾವುದೇ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬಿಡಬಾರದು
ನಾವು ಯುದ್ಧ ಮಾಡೋ ಜನ ಷಡ್ಯಂತ್ರ ಮಾಡೋವರು ಅಲ್ಲ. ನನ್ನ ಬಳಿ 10 ಸಾಕ್ಷಿಗಳು ಇವೆ, ನಾನು ಬಹಿರಂಗ ಮಾಡಲ್ಲ. ಅವನ ಪತ್ನಿಯು ನನ್ನ ತಂಗಿ ಇದ್ದ ಹಾಗೆ, ಮನೆ ಒಡೆಯಬಾರದು. ನನಗೆ ಒಬ್ಬನಿಗೆ ತೊಂದರೆ ಆಗಿದೆ ನಾನು ಹೊರಗೆ ಬಂದಿದ್ದೇನೆ. ಬೇರೆ ಯಾರಿಗೂ ಈ ರೀತಿ ಆಗಬಾರದು. ಇಂತಹ ವ್ಯಕ್ತಿಯ ಕೈಯಲ್ಲಿ ತಪ್ಪಿ ರಾಜ್ಯದ ಅಧಿಕಾರ ಸಿಕ್ಕರೆ ಏನಾಗಬಹುದು. ಯಾವುದೇ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬಿಡಬಾರದು ಎಂದು ಹೇಳಿದರು.
ಬ್ಲ್ಯಾಕ್ ಮೇಲರ್ ಕೈಯಲ್ಲಿ ಸಿಕ್ಕು ಕಾಂಗ್ರೆಸ್ ಕಥೆ ಮುಗಿದಿದೆ
ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ, ಜಿ. ಪರಮೇಶ್ವರ, ಮಲ್ಲಿಕಾರ್ಜುನ ಖರ್ಗೆರಂತಹ ಒಳ್ಳೇಯವರು ಇದ್ದಾರೆ. ಅವರೇದು ಏನು ನಡೆಯಲ್ಲ, ಇಲ್ಲ ಅಂದರೆ ತೋರಸ್ತೆನಿ ಅಂತಾನೆ. ಸಭೆಗಳಲ್ಲಿ ನೋಡಿ ಹೇಗೆ ಕುಂತಿರುತ್ತಾರೆ. ರಾಹುಲ್ ಗಾಂಧಿಗೆ ಏನ ಮಾಡಿದ್ದಾನೆ ಎಂಬುದು ತಿಳಿಯುತ್ತಿಲ್ಲ. ಬ್ಲ್ಯಾಕ್ ಮೇಲರ್ ಕೈಯಲ್ಲಿ ಸಿಕ್ಕು ಕಾಂಗ್ರೆಸ್ ಕಥೆ ಮುಗಿದಿದೆ. ಯಾವುದೇ ಆಡಿಯೋ ಬಿಡಲಿ, ಸಿಡಿ ಬಿಡಲಿ ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದರು.
ಇದನ್ನೂ ಓದಿ: ಮಹೇಶ್ ಕುಮಟಳ್ಳಿಗೆ ಟಿಕೆಟ್ ನೀಡದಿದ್ದರೆ ನಾನೂ ಸ್ಪರ್ಧಿಸಲ್ಲ; ರಮೇಶ್ ಜಾರಕಿಹೊಳಿ ಎಚ್ಚರಿಕೆ
ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬರಲು ಬಿಡಲ್ಲ ಎಂದು ಶಪಥಗೈದ ಜಾರಕಿಹೊಳಿ
ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಆಡಳಿತಕ್ಕೆ ಬರಲು ಬಿಡಲ್ಲ. ಹೀಗೆಂದು ನಾನು ಶಪಥ ಮಾಡಿದ್ದೇನೆ. ಏನ ಬೇಕಾದ್ದು ಆಗಲ್ಲಿ, ಎಷ್ಟೇ ತೊಂದರೆಯಾಗಲಿ ಬಿಡಲ್ಲ. ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. 2024ಕ್ಕೆ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಲಿದ್ದಾರೆ. ನಿಜವಾದ ಕೋಮುವಾದಿ ಪಕ್ಷ ಅಂದ್ರೆ ಕಾಂಗ್ರೆಸ್. ಜಾತಿಗಳನ್ನು ಒಡೆದು ಆಳುವಂತಹ ಪಕ್ಷ ಕಾಂಗ್ರೆಸ್ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಒಂದೇ ಬಾಗಿಲು ಇದೆ, ಬಿಜೆಪಿಯಲ್ಲಿ 10 ಬಾಗಿಲು ಇದೆ. ಒಬ್ಬರು ಯಾರಾದರು ನಾಯಕರು ಸಿಟ್ಟು ಮಾಡಿದರೆ ಮತ್ತೊಬ್ಬರ ಕಡೆ ಹೋಗಬಹುದು. ಅಲ್ಲಿ ಒಂದೇ ಬಾಗಿಲು ಒದ್ದರು ಅಲ್ಲಿಗೆ ಹೋಗಬೇಕಾಗುತ್ತದೆ. ವಿರೋಧಿಗಳು ಅಪಪ್ರಚಾರಕ್ಕೆ ಯಾವುದೇ ಕಾರಣಕ್ಕೂ ಕಿವಿ ಕೊಡಬೇಡಿ. ಎಲ್ಲ ಜಾತಿ, ಧರ್ಮದವರನ್ನು ಒಂದೇ ರೀತಿಯಲ್ಲಿ ನೋಡುತ್ತೇನೆ. ಕೇವಲ ನಮ್ಮ ಜಾತಿಯವರನ್ನು ಪ್ರೀತಿ ಮಾಡಿದರೆ ಶಾಸಕರಾಗಿ ಇರಲು ನಾಲಾಯಕ್. ವಿರೋಧಿಗಳು ಕೇವಲ ಕುತಂತ್ರದ ಮೂಲಕ ರಾಜಕೀಯ ಮಾಡುತ್ತಾರೆ. ಬೇರೆ ಏನು ಮಾಡಲು ಸಾಧ್ಯವಿಲ್ಲ. ತಂತ್ರಜ್ಞಾನ ಬಳಸಿ ಕಟ್ ಅಂಡ್ ಪೆಸ್ಟ್ ಮಾಡಬಹುದು. ಯಾರೋ ಬೈದಿರೋದನ್ನು ತಂದು ಎಡಿಟ್ ಮಾಡುತ್ತಾರೆ. ತನಿಖೆಯಲ್ಲಿ ಸುಳ್ಳು ಎಂದು ಬರುತ್ತದೆ, ಆದರೆ ಅಲ್ಲಿಯವರೆಗೆ ಡ್ಯಾಮೆಜ್ ಆಗುತ್ತದೆ. ಕಳೆದ ಎರಡು ವರ್ಷಗಳಿಂದ ಮಹಾನಾಯಕ ಏನೋ ಇಟ್ಟುಕೊಂಡು ಕುಂತಿದ್ದಾನೆ. ನಿಜವಾಗಿದ್ದರೆ ಅಂದೇ ಬಿಡುಗಡೆ ಮಾಡಬೇಕಿತ್ತು ಎಂದು ಮಾತನಾಡಿದರು.
ಇದನ್ನೂ ಓದಿ: ದಿಢೀರನೆ ಮರಾಠಿ ಪ್ರೇಮಕ್ಕೆ ಗಂಟುಬಿದ್ದ ರಮೇಶ್ ಜಾರಕಿಹೊಳಿ ಹೇಳಿದ್ದೇನು! ಏನಿದರ ರಾಜಕೀಯ ಒಳಸುಳಿ?
ಚುನಾವಣೆ ಸಂದರ್ಭದಲ್ಲಿ ನನ್ನ ವಿರುದ್ದ ಲಿಂಗಾಯತ, ಶಿವಾಜಿ, ಮುಸ್ಲಿಂ ಸಮುದಾಯ ಎತ್ತಿಕಟ್ಟುವ ಕುತಂತ್ರ ಇದೆ. ನನ್ನ ಪುತ್ರ ಅಮರನಾಥ ಬಳಿ ಡಿಕೆ ಶಿವಕುಮಾರ್ ನನ್ನ ಉದ್ಯೋಗವೆ ಅದು ಎಂದು ಹೇಳಿದ್ದಾನೆ. ನನ್ನ ಸಿಡಿ ಕೇಸ್ ಆದಾಗ ಖಾಸಗಿಯಾಗಿ ಅಮರನಾಥ ಬಳಿ ಹೇಳಿದ್ದಾನೆ. ಬೇಕಾದ್ರೆ ನನ್ನ ಮಗನನ್ನು ಕರೆದುಕೊಂಡು ಲಕ್ಷ್ಮೀ ದೇವರ ಆಣೆ ಮಾಡಿಸಿ. ಯುದ್ದ ಮಾಡಲು ನಾನು ರೆಡಿ ಇದ್ದೇನೆ, ಆದರೆ ಕುತಂತ್ರ ಮಾಡಿದ್ರೆ ಎನ್ ಮಾಡೋದು. ಕನಕಪುರಕ್ಕೆ ಬರಲು ನಾನು ಸಿದ್ದನಿದ್ದೇನೆ, ಆದರೆ ಷಡ್ಯಂತ್ರ ಏನ ಮಾಡೊದು. ಕಾಂಗ್ರೆಸ್ನಲ್ಲಿ ಎಲ್ಲರೂ ಬಾಯಿಮುಚ್ಚಿಕೊಂಡು ಕುಳಿತಿದ್ದಾರೆ. ಇಂತಹ ನೂರು ಸಿಡಿ ಬರಲಿ ಎದುರಿಸಲು ನಾನು ಸಿದ್ದನಿದ್ದೇನೆ. ಸಹೋದರರು, ಪತ್ನಿ, ಮಕ್ಕಳು ನನ್ನ ಜೊತಗೆ ಇದ್ದಾರೆ ಎಂದು ತಿಳಿಸಿದರು.
ನಾನು ಸಚಿವನಾಗಿದ್ದ ವೇಳೆಯಲ್ಲಿ ಕ್ಷೇತ್ರ ಅನೇಕ ಯೋಜನೆ ತಂದಿದ್ದೆ. ದುರ್ದೈವ ರಾಜೀನಾಮೆ ಕೊಡಬೇಕಾಯತು. 2023ರಲ್ಲಿ ಯಾವುದೇ ಪರಿಸ್ಥಿತಿಯಲ್ಲಿ ಸರ್ಕಾರ ರಚನೆ ಮಾಡುತ್ತೇವೆ. ಹೇಗಾದ್ರು ಮಾಡಿ ಸರ್ಕಾರ ಮಾಡುತ್ತೇವೆ, ಬಹಿರಂಗವಾಗಿ ಹೇಳಲು ಬರಲ್ಲ. ಈ ಸಂಬಂಧ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ. ಗೋಕಾಕ್ ಕ್ಷೇತ್ರದಲ್ಲಿ ಕಾರ್ಯಕರ್ತರ ಬೃಹತ್ ಸಮಾರಂಭ ಆಯೋಜನೆ ಮಾಡಲಾಗಿತ್ತು. ಸಮಾವೇಶದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಮಾಜಿ ಶಾಸಕರಾದ ಶಶಿಕಾಂತ ನಾಯಕ್, ಎಂ ಎಲ್ ಮುತ್ತೇಣ್ಣವರ್ ಭಾಗಿಯಾಗಿದ್ದರು. ಹಾಗೇ ಗೋಕಾಕ್ ತಾಲೂಕಿನಲ್ಲಿ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಭೆಗಳನ್ನು ಮಾಡುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ