AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗ್ಯಾರಂಟಿ ಯೋಜನೆ ಬಗ್ಗೆ ಕುಮಾರಸ್ವಾಮಿ ಹಾಕಿದ್ದ ಸವಾಲು ಸ್ವೀಕರಿಸಿದ ಡಿಕೆ ಶಿವಕುಮಾರ್: ಸ್ಥಳ, ದಿನಾಂಕ ಫಿಕ್ಸ್

ಹೆಚ್​ಡಿ ಕುಮಾರಸ್ವಾಮಿ ಟೀಕೆ ಮಾಡಲಿ, ಏನಾದರೂ ಮಾತಾಡಲಿ ಸಂತೋಷ. ಅಸೂಯೆಗೆ ಔಷಧ ಇಲ್ಲ ಅಂತಾರೆ, ಕುಮಾರಸ್ವಾಮಿ ಮಾತಾಡಲಿ ಬಿಡಿ. ನನಗೆ ಚಾನ್ಸ್ ಸಿಗಲಿಲ್ಲ ಅಂತಾ ಏನೇನೋ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಒಳ್ಳೆಯದು ಆಗಲಿ ಅವರ ಹೋರಾಟ ಜಯವಾಗಲಿ ಎಂದು ಡಿಕೆ ಶಿವಕುಮಾರ್​ ವ್ಯಂಗ್ಯವಾಡಿದರು.

ಗ್ಯಾರಂಟಿ ಯೋಜನೆ ಬಗ್ಗೆ ಕುಮಾರಸ್ವಾಮಿ ಹಾಕಿದ್ದ ಸವಾಲು ಸ್ವೀಕರಿಸಿದ ಡಿಕೆ ಶಿವಕುಮಾರ್: ಸ್ಥಳ, ದಿನಾಂಕ ಫಿಕ್ಸ್
ಡಿಸಿಎಂ ಡಿಕೆ ಶಿವಕುಮಾರ್
Sunil MH
| Updated By: ವಿವೇಕ ಬಿರಾದಾರ|

Updated on: Nov 14, 2023 | 2:53 PM

Share

ಬೆಂಗಳೂರು ನ.14: ರಾಜ್ಯ ಸರ್ಕಾರ ಐದು ಗ್ಯಾರೆಂಟಿಗಳನ್ನು ಜನರಿಗೆ ಸಮರ್ಪಕವಾಗಿ ನೀಡುವಲ್ಲಿ ವಿಫಲವಾಗಿದೆ. ಈ ಬಗ್ಗೆ ಬಹಿರಂಗ ಚರ್ಚೆ ಮಾಡಲು ಸಿದ್ಧ ಎಂದು ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ (HD Kumaraswamy) ಸವಾಲು ಹಾಕಿದ್ದರು. “ಐದು ಗ್ಯಾರಂಟಿ ಕೊಟ್ಟಿದ್ದೀರಿ, ಸರಿ. ಅದನ್ನು ನೆಟ್ಟಗೆ ಕೊಡಲು ವಿಫಲರಾಗಿದ್ದೀರಿ ಎಂದಿದ್ದೇನೆ. ಇಲ್ಲವೆಂದರೆ ಹೇಳಿ, ಬಹಿರಂಗ ಚರ್ಚೆಗೇ ಬರುತ್ತೇನೆ. ಎಲ್ಲಿಗೆ ಬರಲಿ?” ಎಂದು ಸರಣಿ ಟ್ವೀಟ್​ ಮಾಡಿದ್ದರು. ಜೆಡಿಎಸ್​ ರಾಜ್ಯಾಧ್ಯಕ್ಷ ಹೆಚ್​ಡಿ ಕುಮಾರಸ್ವಾಮಿ ಸ್ವಾವಲನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar)​ ಸ್ವೀಕರಿಸಿದ್ದು, ಅಧಿವೇಶನದಲ್ಲಿ ಚರ್ಚಿಸೋಣ ಬನ್ನಿ ಎಂದು ಆಹ್ವಾನ ನೀಡಿದರು.

ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ “ಹೆಚ್​​ಡಿ ಕುಮಾರಸ್ವಾಮಿ ಸವಾಲನ್ನು ಗೌರವದಿಂದ ಸ್ವೀಕರಿಸುತ್ತೇನೆ. ವಿಧಾನಮಂಡಲ ಅಧಿವೇಶನದಲ್ಲಿ ದಾಖಲೆ ಸಮೇತ ಬಂದು ಚರ್ಚಿಸಲಿ. ಚುನಾವಣೆ ವೇಳೆ ಜೆಡಿಎಸ್​​ ಪಂಚರತ್ನ ಯೋಜನೆ ಬಗ್ಗೆ ಮಾತಾಡಿದ್ದರು. ಹಿಂದೆ ಏನೇನು ಮಾತು ಕೊಟ್ಟಿದ್ದರು ಅದನ್ನೆಲ್ಲ ತೆಗೆದುಕೊಂಡು ಬರಲಿ. ಹೆಚ್. ಡಿ.ಕುಮಾರಸ್ವಾಮಿ ಆರೋಪಗಳಿಗೆ ನಾವು ಉತ್ತರ ನೀಡುತ್ತೇವೆ ಎಂದು ಸವಾಲು ಸ್ವೀಕರಿಸಿದರು.

ಇದನ್ನೂ ಓದಿ: ಸಿದ್ದರಾಮಯ್ಯನವರೇ ರೈತರ ಸಾಲಮನ್ನಾ ಮಾಡಿ ತೋರಿಸಿ, ಇದೇ ನನ್ನ ಸವಾಲು: ಹೆಚ್​​ಡಿ ಕುಮಾರಸ್ವಾಮಿ

ಹೆಚ್​ಡಿ ಕುಮಾರಸ್ವಾಮಿ ಟೀಕೆ ಮಾಡಲಿ, ಏನಾದರೂ ಮಾತಾಡಲಿ ಸಂತೋಷ. ಅಸೂಯೆಗೆ ಔಷಧ ಇಲ್ಲ ಅಂತಾರೆ, ಕುಮಾರಸ್ವಾಮಿ ಮಾತಾಡಲಿ ಬಿಡಿ. ನನಗೆ ಚಾನ್ಸ್ ಸಿಗಲಿಲ್ಲ ಅಂತಾ ಏನೇನೋ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಒಳ್ಳೆಯದು ಆಗಲಿ ಅವರ ಹೋರಾಟ ಜಯವಾಗಲಿ ಎಂದು ವ್ಯಂಗ್ಯವಾಡಿದರು.

ದೇವೇಗೌಡರ ಜಾತಿ ಕೆಡಿಸಿದ ಹೆಚ್​​ಡಿ ಕುಮಾರಸ್ವಾಮಿ: ಡಿಕೆ ಶಿವಕುಮಾರ್

ಹೆಚ್​ ಡಿ ಕುಮಾರಸ್ವಾಮಿ ಎನ್​ಡಿಎ ಜೊತೆಗೆ ಕೈ ಜೋಡಿಸಿದ್ದಾರೆ. ಕುಮಾರಸ್ವಾಮಿ ಹೆಚ್​ಡಿ ದೇವೇಗೌಡರ ಜಾತಿ ಕೆಡಿಸಿಬಿಟ್ಟರಲ್ಲ ಎನ್ನುವ ಹೊಟೆ ಹೂರಿ ನನಗೆ. ಪಾಪ ಅವರು ಏನೋ ಕಾಪಾಡಿಕೊಂಡು ಬಂದಿದ್ದರು. ಇಳಿಯ ವಯಸ್ಸಿನಲ್ಲಿ ಅವರನ್ನು ಈ ಪರಿಸ್ಥಿತಿಗೆ ತಂದುಬಿಟ್ಟರು. I am sorry ಎಂದು ಹೇಳಿದರು.

ಹೆಚ್​.ಡಿ.ಕುಮಾರಸ್ವಾಮಿ ಸುಳ್ಳನ್ನೇ ಬಂಡವಾಳ ಮಾಡಿಕೊಂಡಿರುವ ವ್ಯಕ್ತಿ: ಸಿದ್ದರಾಮಯ್ಯ

ಹೆಚ್​.ಡಿ.ಕುಮಾರಸ್ವಾಮಿ ಆರೋಪಕ್ಕೆ ನಾನು ಉತ್ತರನೇ ಕೊಡಲ್ಲ. ಏಕೆಂದರೇ ಅವರು ಸುಳ್ಳನ್ನೇ ಬಂಡವಾಳ ಮಾಡಿಕೊಂಡಿರುವ ವ್ಯಕ್ತಿ. ಹೆಚ್​.ಡಿ.ಕುಮಾರಸ್ವಾಮಿ ಬರೀ ಸುಳ್ಳೇ ಹೇಳುವುದು. ಮಹಿಳೆಯರು ಉಚಿತವಾಗಿ ಬಸ್​​ನಲ್ಲಿ ಸಂಚಾರ ಮಾಡುತ್ತಿದ್ದಾರೆ. ಇದು ಕುಮಾರಸ್ವಾಮಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ