ಕಾಂಗ್ರೆಸ್​​ ಸೇರಿದ ದೀಪಕ್​ ತಿಮ್ಮಯ್ಯ: ಕೆಪಿಸಿಸಿ ಕಾರ್ಯದರ್ಶಿ, ಮಾಧ್ಯಮ ಸಲಹೆಗಾರರಾಗಿ ನೇಮಿಸಿದ ಡಿಕೆ ಶಿವಕುಮಾರ್

|

Updated on: Apr 11, 2024 | 12:28 PM

ಕಾಂಗ್ರೆಸ್ ಪಕ್ಷಕ್ಕೆ ಓಟು ನೀಡುವುದು ಭಯೋತ್ಪಾದನೆಗೆ ಬೆಂಬಲ ನೀಡಿದಂತೆ ಎಂಬ ಯಡಿಯೂರಪ್ಪ ಹೇಳಿಕೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್, ಅದನ್ನು ಚುನಾವಣಾ ಆಯೋಗ ನೋಡಿಕೊಳ್ಳಲಿದೆ. ಮಾದರಿ ನೀತಿ ಸಮಯದ ಜಾರಿಯಲ್ಲಿ ಇರುವುದರಿಂದ ಅವರ ಹೇಳಿಕೆ ಬಗ್ಗೆ ಆಯೋಗ ಗಮನ ಹರಿಸಲಿದೆ ಎಂದರು.

ಕಾಂಗ್ರೆಸ್​​ ಸೇರಿದ ದೀಪಕ್​ ತಿಮ್ಮಯ್ಯ: ಕೆಪಿಸಿಸಿ ಕಾರ್ಯದರ್ಶಿ, ಮಾಧ್ಯಮ ಸಲಹೆಗಾರರಾಗಿ ನೇಮಿಸಿದ ಡಿಕೆ ಶಿವಕುಮಾರ್
ಕಾಂಗ್ರೆಸ್​​ ಸೇರಿದ ದೀಪಕ್​ ತಿಮ್ಮಯ್ಯ
Follow us on

ಬೆಂಗಳೂರು, ಏಪ್ರಿಲ್ 11: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು (BS Yediyurappa) ಲೋಕಸಭೆ ಚುನಾವಣೆ (Lok Sabha Elections) ಸಂದರ್ಭದಲ್ಲಿ ವಿಷಯಾಂತರ ಮಾಡುವುದು ಬೇಡ. ಅವರು ಮೊದಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ಗೆ ಉತ್ತರ ನೀಡಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದರು. ದೀಪಕ್ ತಿಮ್ಮಯ್ಯ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಯಡಿಯೂರಪ್ಪ ಮಾಡಿರುವ ಟೀಕೆಗಳಿಗೆ ತಿರುಗೇಟು ನೀಡಿದರು.

ಯಡಿಯೂರಪ್ಪನವರು ಅಂದು ಯಾಕೆ ಕಣ್ಣೀರು ಹಾಕುವ ಪರಿಸ್ಥಿತಿ ಬಂತು? ಅದಕ್ಕೆ ಉತ್ತರಿಸಲಿ. ನಮಗೆ ರಾಹುಲ್ ಗಾಂಧಿ ಹೆಸರು ಹೇಳುವ ಧೈರ್ಯ ಇಲ್ಲ ಎನ್ನುತ್ತಾರಲ್ಲ, ಹಾಗಾದರೆ ಶಿವಮೊಗ್ಗಕ್ಕೆ ಬಂದಾಗ ಪ್ರಧಾನಿ ಮೋದಿ ಯಾಕೆ ಅಭ್ಯರ್ಥಿಗಳ ಹೆಸರು ಹೇಳಿ ಮತ ಯಾಚಿಸಿದರು? ಅವರಿಗೇ ಧೈರ್ಯವಿಲ್ಲ ಎಂದು ಡಿಕೆ ಶಿವಕುಮಾರ್ ಟೀಕಿಸಿದರು.

ಕಾಂಗ್ರೆಸ್ ಪಕ್ಷಕ್ಕೆ ಓಟು ನೀಡುವುದು ಭಯೋತ್ಪಾದನೆಗೆ ಬೆಂಬಲ ನೀಡಿದಂತೆ ಎಂಬ ಯಡಿಯೂರಪ್ಪ ಹೇಳಿಕೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿ, ಅದನ್ನು ಚುನಾವಣಾ ಆಯೋಗ ನೋಡಿಕೊಳ್ಳಲಿದೆ. ಮಾದರಿ ನೀತಿ ಸಮಯದ ಜಾರಿಯಲ್ಲಿ ಇರುವುದರಿಂದ ಅವರ ಹೇಳಿಕೆ ಬಗ್ಗೆ ಆಯೋಗ ಗಮನ ಹರಿಸಲಿದೆ ಎಂದರು.

ರಂಜಾನ್ ಹಬ್ಬದ ಶುಭಾಶಯ ಕೋರಿದ ಡಿಕೆ ಶಿವಕುಮಾರ್, ಹೊಸದಡಕು, ಯುಗಾದಿ ಆಗಿದೆ. ಇವತ್ತು ಒಳ್ಳೆಯ ಮುಹೂರ್ತ ಹುಡುಕಿದ್ದೇನೆ. ದೀಪಕ್ ತಿಮ್ಮಯ್ಯ ಅವರನ್ನು ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡೆ. ಒಳ್ಳೆಯ ಸಂದರ್ಭದಲ್ಲಿ ಒಳ್ಳೆ ಸಲಹೆಗಳನ್ನು ನೀಡಿದ್ದಾರೆ. ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದೇನೆ. ಪ್ರಜಾಪ್ರಭುತ್ವದಲ್ಲಿ ಯಾರ ಯಾರ ಹಣೆಬರಹ ಏನೇನಿದೆಯೋ ಗೊತ್ತಿಲ್ಲ ಎಂದರು.

ಇದನ್ನೂ ಓದಿ: ನಾಡಿನೆಲ್ಲೆಡೆ ಸಂಭ್ರಮದ ರಂಜಾನ್, ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಸಚಿವ ಜಮೀರ್ ಅಹ್ಮದ್

ಆದಿಚುಂಚನಗಿರಿ ಸ್ವಾಮೀಜಿ ಬೆಂಬಲ ಜೆಡಿಎಸ್ ಪಕ್ಷಕ್ಕೆ ದೊರೆಯಲಿದೆ ಎಂಬ ಆ ಪಕ್ಷದ ನಾಯಕರ ವಾದವನ್ನು ಡಿಕೆ ಶಿವಕುಮಾರ್ ತಿರಸ್ಕರಿಸಿದರು. ಜೆಡಿಎಸ್ ಪಾಂಡವರಿದ್ದಂತೆ. ಕಾಂಗ್ರೆಸ್ ಕೌರವರಿದ್ದಂತೆ. ಮಹಾಭಾರತ ಯುದ್ಧದ ಸಮಯದಲ್ಲಿ ಇಬ್ಬರೂ ಶ್ರೀ ಕೃಷ್ಣನನ್ನು ಭೇಟಿಯಾಗಿದ್ದರು. ಆದರೆ ಆತ ಪಾಂಡವರಿಗೆ ಬೆಂಬಲ ನೀಡಿದ್ದ. ಅದರಂತೆಯೇ ಸ್ವಾಮೀಜಿ ಜೆಡಿಎಸ್ ಅನ್ನು ಬೆಂಬಲಿಸಲಿದ್ದಾರೆ ಎಂದು ಜೆಡಿಎಸ್ ನಾಯಕರು ಹೇಳಿದ್ದರು. ಇದನ್ನು ಡಿಕೆ ಶಿವಕುಮಾರ್ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.

ಜೆಡಿಎಸ್ ಎಲ್ಲಿದೆ? ಡಿಕೆಶಿ ವ್ಯಂಗ್ಯ

ಜೆಡಿಎಸ್ ಪಕ್ಷ ಎಲ್ಲಿದೆ? ಜೆಡಿಎಸ್​​ಗೆ ಮುಕ್ತಿ ಕೊಟ್ಟಾಯಿತು. ನಮಗೂ ಜೆಡಿಎಸ್ ಇರಲಿ ಎಂಬ ಆಸೆ ಇತ್ತು, ಈಗಲೂ ಆಸೆ ಇದೆ. ಆದರೆ ಅವರೇ ಪಕ್ಷವನ್ನು ವಿಸರ್ಜನೆ ಮಾಡುವ ಹಂತಕ್ಕೆ ಬಂದಿದ್ದಾರೆ. ನಾವು ಹಿಂದೆ ಒಂದು ಬ್ಲಂಡರ್ ಮಾಡಿದ್ದೆವು. ಅದಕ್ಕಿಂತ ದೊಡ್ಡ ಬ್ಲಂಡರ್ ಜೆಡಿಎಸ್​ನವರು ಈಗ ಮಾಡುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ವ್ಯಂಗ್ಯವಾಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:24 pm, Thu, 11 April 24