AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾತನಾಡುವಾಗ ಖಂಡ್ರೆ ಬದಲು ಖರ್ಗೆ ಅಂತಾ ಹೇಳಿದ್ದೇನೆ: ಆರಗ ಜ್ಞಾನೇಂದ್ರ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ವಿರುದ್ಧ ದೂರು ದಾಖಲಿಸಲಾಗಿದೆ. ಈ ಬಗ್ಗೆ ಸ್ವತಃ ಆರಗ ಜ್ಞಾನೇಂದ್ರ ಮಾತನಾಡಿದ್ದಾರೆ.

ಮಾತನಾಡುವಾಗ ಖಂಡ್ರೆ ಬದಲು ಖರ್ಗೆ ಅಂತಾ ಹೇಳಿದ್ದೇನೆ: ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ ಮತ್ತು ಮಲ್ಲಿಕಾರ್ಜುನ ಖರ್ಗೆ
Basavaraj Yaraganavi
| Edited By: |

Updated on: Aug 04, 2023 | 4:05 PM

Share

ಶಿವಮೊಗ್ಗ, ಆಗಸ್ಟ್ 4: ನನ್ನ ವಿರುದ್ಧ ರಾಜಕೀಯ ಕಾರಣಕ್ಕಾಗಿ ದೂರು ನೀಡಿದ್ದಾರೆ ಎಂದು ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ (Araga Jnanedra) ಹೇಳಿದ್ದಾರೆ. ಪ್ರತಿಭಟನೆ ಮಾಡುವ ಸಂದರ್ಭದಲ್ಲಿ ಆಡದೇ ಇರುವ ಮಾತು ಬಂದಿದೆ. ಯಾರ ಮನಸ್ಸಿಗಾದರೂ ಕಸಿವಿಸಿ ಆದರೆ ಕ್ಷಮೆ ಯಾಚನೆ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಮಾತನಾಡಿದ ಅವರು, ಪ್ರತಿಭಟನೆ ವೇಳೆ ಮಾತನಾಡುವಾಗ ಖಂಡ್ರೆ ಬದಲು ಖರ್ಗೆ ಅಂತಾ ಹೇಳಿದ್ದೇನೆ. ಮಲ್ಲಿಕಾರ್ಜುನ ಖರ್ಗೆ ಅಂತಾ ಹೇಳಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ವೈಯಕ್ತಿಕವಾಗಿ ಎಲ್ಲಿಯೂ ಹೇಳಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಎಐಸಿಸಿ ಅಧ್ಯಕ್ಷ ಖರ್ಗೆ ವಿರುದ್ಧ ಅವಹೇಳನಕಾರಿ ಹೇಳಿಕೆ; ಆರಗ ಜ್ಞಾನೇಂದ್ರ ವಿರುದ್ಧ ಕಲಬುರಗಿಯಲ್ಲಿ ಎಫ್​​ಐಆರ್

ಬಣ್ಣದ ಬಗ್ಗೆ ವೈಯಕ್ತಿಕವಾಗಿ ನಿಂದನೆ ಮಾಡಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೀಳು ಮಟ್ಟದಿಂದ ನೋಡುವ ರಾಜಕಾರಣಿ‌ ನಾನಲ್ಲ. ಅವರ ಜೊತೆ ಕೆಲಸ ಮಾಡಿದ್ದೇನೆ ಗೌರವದಿಂದ ನೋಡುತ್ತೇನೆ. ಮಲ್ಲಿಕಾರ್ಜುನ ಖರ್ಗೆ ಅಂದಿಲ್ಲ, ಹಾಗೆನಾದರೂ ಆದರೆ ಯಾವುದೇ ಶಿಕ್ಷೆ ಆದರೂ ಓಕೆ ಎಂದರು.

ಕಾಂಗ್ರೆಸ್​ನವರು ಈ ವಿಚಾರವನ್ನು ದೊಡ್ಡದು ಮಾಡುತ್ತಿದ್ದಾರೆ. ಜಾತಿ ಬಗ್ಗೆ ಮಾತನಾಡಿಲ್ಲ, ಮಲೆನಾಡಿನ ಜನ ಹಾಗೂ ಬಯಲುಸೀಮೆ ಜನರ ಬಗ್ಗೆ ಮಾತನಾಡಿದ್ದೆ. ಕೆಲವು ಕಡೆ ನನ್ನ ಹೇಳಿಕೆ ಬಗ್ಗೆ ದೂರು ಕೊಟ್ಟಿದ್ದಾರೆ. ನ್ಯಾಯಾಂಗದ ಮೇಲೆ ನನಗೆ ಗೌರವ ಇದೆ. ಉತ್ತರ ಕರ್ನಾಟಕದ ಜನರ ಬಗ್ಗೆ ದ್ವೇಷದ ಭಾವನೆಯಿಂದ ಏನು ಹೇಳಿಲ್ಲ. ಪಾಪ ಅವರು ತುಂಬಾ ಶ್ರಮಜೀವಿಗಳು. ಆ ದಿನ ಸ್ವಲ್ಪ ತಮಾಷೆಯಾಗಿ ಈಶ್ವರ ಖಂಡ್ರೆ ಅವರಿಗೆ ಸ್ವಲ್ಪ ಕೂದಲು ಜಾಸ್ತಿ ಇದೆ ಅನ್ನುವ ಕಾರಣಕ್ಕೆ ಹಾಗೆ ಹೇಳಿದ್ದೆ, ಖರ್ಗೆ ಅವರ ಬಗ್ಗೆ ಮಾತನಾಡಿಲ್ಲ. ನಾನು ಆಡಿದ ಮಾತನ್ನು ಜನಕ್ಕೆ ಬಿಡುತ್ತೇನೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ