ದೇವೇಗೌಡರು, ಕುಮಾರಸ್ವಾಮಿಗೆ ಅವಕಾಶ ಮಾಡಿಕೊಟ್ಟಿದ್ದೀರಿ, ನನಗೂ ಅವಕಾಶ ಮಾಡಿಕೊಡಿ; ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಿಕೆ ಶಿವಕುಮಾರ್

| Updated By: sandhya thejappa

Updated on: Jul 20, 2022 | 8:34 AM

ನನಗೆ ಹೂವಿನ ಹಾರ ಬೇಡ. ನಾನು ಯಾರನ್ನು ನಿಲ್ಲಿಸುತ್ತೆನೆ ಅವರಿಗೆ ಸಹಕಾರ ಕೊಡಬೇಕು. ನನಗೆ ಆಶೀರ್ವಾದ ಮಾಡಬೇಕು. ರಾಜ್ಯದಲ್ಲಿ ಸೇವೆಯನ್ನ ಮಾಡುವ ಅವಕಾಶ ಕಲ್ಪಿಸಬೇಕು.

ದೇವೇಗೌಡರು, ಕುಮಾರಸ್ವಾಮಿಗೆ ಅವಕಾಶ ಮಾಡಿಕೊಟ್ಟಿದ್ದೀರಿ, ನನಗೂ ಅವಕಾಶ ಮಾಡಿಕೊಡಿ; ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್
Follow us on

ರಾಮನಗರ: 2023ಕ್ಕೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ (Assembly Election) ನಡೆಯಲಿದೆ. ಹೆಚ್ಚು ಕಡಿಮೆ ಒಂದು ವರ್ಷ ಇರುವ ಚುನಾವಣೆಗೆ ಪಕ್ಷಗಳು ಈಗಿನಿಂದಲೇ ತಯಾರಿ ನಡೆಸಿಕೊಳ್ಳುತ್ತಿವೆ. ಇನ್ನು ಕಾಂಗ್ರೆಸ್ನಲ್ಲಿ ಸಿಎಂ ಅಭ್ಯರ್ಥಿ ಬಗ್ಗೆ ಬಾರಿ ಕುತೂಹಲ ಮೂಡಿದೆ. ಅವಕಾಶ ಸಿಕ್ಕರೆ ಯಾರು ಬಿಡುತ್ತಾರೆ ಎಂದು ಸಿದ್ದರಾಮಯ್ಯ (Siddaramaiah) ಹೇಳುತ್ತಿದ್ದರೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಮುಖ್ಯಮಂತ್ರಿ ಆಗುವ ಆಸೆ ವ್ಯಕ್ತಪಡಿಸಿದ್ದಾರೆ. ರಾಮನಗರದಲ್ಲಿ ಮಾತನಾಡಿರುವ ಡಿಕೆಶಿ, ದೇವೇಗೌಡರು, ಕುಮಾರಸ್ವಾಮಿಗೆ ಅವಕಾಶ ಮಾಡಿಕೊಟ್ಟಿದ್ದೀರಿ. ತಾಯಿಯ ಸನ್ನಿಧಿಯಿಂದ ಕೇಳುತ್ತಿದ್ದೇನೆ, ನನಗೂ ಅವಕಾಶ ಮಾಡಿಕೊಡಿ ಎಂದು ಹೇಳಿಕೆ ನೀಡಿದ್ದಾರೆ.

ನನಗೆ ಹೂವಿನ ಹಾರ ಬೇಡ. ನಾನು ಯಾರನ್ನು ನಿಲ್ಲಿಸುತ್ತೆನೆ ಅವರಿಗೆ ಸಹಕಾರ ಕೊಡಬೇಕು. ನನಗೆ ಆಶೀರ್ವಾದ ಮಾಡಬೇಕು. ರಾಜ್ಯದಲ್ಲಿ ಸೇವೆಯನ್ನ ಮಾಡುವ ಅವಕಾಶ ಕಲ್ಪಿಸಬೇಕು. ನಿಮ್ಮ ಜಿಲ್ಲೆಯ ಮಗನಿಗೆ ಕೊಡಬೇಕೆಂಬ ಆಸೆಯಿದ್ದರೆ ಮಾಡಬೇಕು. ದೇಶದಲ್ಲಿ ಈಗ ಪ್ರತಿಯೊಂದು ವಸ್ತುವಿನ ಬೆಲೆ ಗಗನಕ್ಕೆ ಏರಿದೆ. ಪ್ರತಿಯೊಬ್ಬರ ಬದುಕಿನಲ್ಲಿ ಸರ್ಕಾರ ಕತ್ತರಿ ಹಾಕುತ್ತಿದೆ. ನಿಮ್ಮ ಸೇವೆ ಮಾಡಲು ನನಗೆ ಒಂದು ಅವಕಾಶ ಮಾಡಿಕೊಡಿ ಎಂದು ಡಿಕೆ ಶಿವಕುಮಾರ್ ಸಿಎಂ ಆಗುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Ramanagara News: ನಾಡಿನಲ್ಲಿ ಬಹಳ ಜನ ಸಿಎಂ ಆಗಬೇಕೆಂದು ಆಸೆ ಪಟ್ಟಿದ್ದಾರೆ; ಆದರೆ ಭಗವಂತನ ಇಚ್ಛೆ ಬೇರೆ ಇದೆ ಎಂದ ಕುಮಾರಸ್ವಾಮಿ

ಇದನ್ನೂ ಓದಿ
Sri Lanka President: ಗೊಟಬಯ ರಾಜಪಕ್ಸ ರಾಜೀನಾಮೆಯಿಂದ ತೆರವಾದ ಶ್ರೀಲಂಕಾ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ
ನಾಸಿರುದ್ದೀನ್​ ಶಾ ಜನ್ಮದಿನ: ಕನ್ನಡದಲ್ಲೂ ನಟಿಸಿದ ಈ ಕಲಾವಿದ ಮಾಡಿಕೊಂಡ ವಿವಾದಗಳು ಒಂದೆರೆಡಲ್ಲ
ಡಯಾಬಿಟೀಸ್: ಹೃದ್ರೋಗ ಮತ್ತು ಮೂತ್ರಪಿಂಡ ಸಮಸ್ಯೆಗಳಿಂದ ಬಚಾವಾಗಲು ಆಯುರ್ವೇದದ ಪರಿಹಾರಗಳು
Ramanagara News: ನಾಡಿನಲ್ಲಿ ಬಹಳ ಜನ ಸಿಎಂ ಆಗಬೇಕೆಂದು ಆಸೆ ಪಟ್ಟಿದ್ದಾರೆ; ಆದರೆ ಭಗವಂತನ ಇಚ್ಛೆ ಬೇರೆ ಇದೆ ಎಂದ ಕುಮಾರಸ್ವಾಮಿ

ಬಹಳ ಜನ ಸಿಎಂ ಆಗಬೇಕೆಂದು ಆಸೆ ಪಟ್ಟಿದ್ದಾರೆ- ಕುಮಾರಸ್ವಾಮಿ:
ನಾಡಿನಲ್ಲಿ ಬಹಳ ಜನ ಸಿಎಂ ಆಗಬೇಕೆಂದು ಆಸೆ ಪಟ್ಟಿದ್ದಾರೆ. ಆದರೆ ಭಗವಂತನ ಇಚ್ಛೆ ಬೇರೆ ಇದೆ ಎಂದು ರಾಮನಗರದಲ್ಲಿ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಹೇಳಿದರು. ಚಾಮುಂಡೇಶ್ವರಿ, ಜನರ ಆಶೀರ್ವಾದದಿಂದ ರಾಜ್ಯದಲ್ಲಿ ಮತ್ತೆ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: Kalonji Seeds: ಪುರುಷರಿಗೆ ಅಲರ್ಟ್​! ಕಾಲಾ ಜೀರಾ ಬೀಜ ತಿಂದರೆ ಪುರುಷರಿಗೆ ಡಬಲ್ ಸ್ಟ್ಯಾಮಿನಾ.. ಮತ್ತು ಇನ್ನೂ ಅನೇಕ ಪ್ರಯೋಜನಗಳಿವೆ

Published On - 8:30 am, Wed, 20 July 22