ನನ್ನ ಮುಂದಾಳತ್ವದಲ್ಲಿ, ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ: ಡಿಕೆ ಶಿವಕುಮಾರ್ ಹೇಳಿಕೆ

ನನ್ನ ಮುಂದಾಳತ್ವದಲ್ಲಿ, ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ: ಡಿಕೆ ಶಿವಕುಮಾರ್ ಹೇಳಿಕೆ
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಕೇಂದ್ರ ಸರ್ಕಾರ ಅನುಮತಿ ನೀಡಿದ್ರೆ ಯೋಜನೆ ಮಾಡಬಹುದು. ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಪಾದಯಾತ್ರೆ ಮಾಡುತ್ತೇವೆ ಎಂದು ಶಿವಕುಮಾರ್ ತಿಳಿಸಿದ್ದಾರೆ. ಕಾಂಗ್ರೆಸ್​ ಹೋರಾಟಕ್ಕೆ ಪ್ರತಿಯೊಬ್ಬರೂ ಬೆಂಬಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

TV9kannada Web Team

| Edited By: ganapathi bhat

Dec 24, 2021 | 9:02 PM

ಹಾಸನ: ನನ್ನ ಮುಂದಾಳತ್ವದಲ್ಲೇ ಮುಂದಿನ ಚುನಾವಣೆ ಎದುರಿಸುತ್ತೇನೆ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ. ಸಿದ್ದರಾಮಯ್ಯ ನೇತೃತ್ವದಲ್ಲಿ ನಾವು ಉತ್ತಮ ಸರ್ಕಾರ ನೀಡಿದ್ದೆವು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ಸಮುದಾಯಕ್ಕೂ ಅಧಿಕಾರ ನೀಡುತ್ತೇವೆ ಎಂದು ಹಾಸನ ಜಿಲ್ಲೆ ಅರಕಲಗೂಡಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಶುಕ್ರವಾರ ಹೇಳಿಕೆ ನೀಡಿದ್ದಾರೆ. ನಾನು ಕಷ್ಟದಲ್ಲಿದ್ದಾಗ ನೀವೆಲ್ಲರೂ ಬೆಂಬಲ ಸೂಚಿಸಿ ಹೋರಾಟ ಮಾಡಿದ್ದೀರಿ. ತಿಹಾರ್​ ಜೈಲಿಗೆ ಹೋದಾಗ ಹೋರಾಟ ಮಾಡಿ ಹೊರತಂದಿದ್ರಿ. ನಿಮ್ಮ ಪ್ರೀತಿ ವಿಶ್ವಾಸವನ್ನು ನಾನು ಕೊನೆವರೆಗೂ ಮರೆಯುವುದಿಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಮೇಕೆದಾಟು ಹೋರಾಟ ಕೇವಲ ಕಾಂಗ್ರೆಸ್ ಕಾರ್ಯಕ್ರಮವಲ್ಲ. ಮೇಕೆದಾಟು ಯೋಜನೆ ಜಾರಿಗೆ ಪಕ್ಷಾತೀತವಾಗಿ ಹೋರಾಟ ಮಾಡಬೇಕು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮೇಕೆದಾಟು ಯೋಜನೆಗೆ ಡಿಪಿಆರ್ ಮಾಡಿಸಲಾಗಿತ್ತು. ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ಡಿಪಿಆರ್​ ಮಾಡಿದ್ದೆವು. ಆದ್ರೆ ಬಿಜೆಪಿ ಸರ್ಕಾರ ಮೇಕೆದಾಟು ಯೋಜನೆ ಬಗ್ಗೆ ಗಮನಿಸ್ತಿಲ್ಲ. ಮೇಕೆದಾಟು ಯೋಜನೆ ಜಾರಿಯಾದ್ರೆ ನೀರಿನ ಸಮಸ್ಯೆ ಪರಿಹಾರ ಆಗುತ್ತೆ. ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗುತ್ತದೆ. ಕೇಂದ್ರ ಸರ್ಕಾರ ಅನುಮತಿ ನೀಡಿದ್ರೆ ಯೋಜನೆ ಮಾಡಬಹುದು. ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಪಾದಯಾತ್ರೆ ಮಾಡುತ್ತೇವೆ ಎಂದು ಶಿವಕುಮಾರ್ ತಿಳಿಸಿದ್ದಾರೆ. ಕಾಂಗ್ರೆಸ್​ ಹೋರಾಟಕ್ಕೆ ಪ್ರತಿಯೊಬ್ಬರೂ ಬೆಂಬಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಮತಾಂತರ ನಿಷೇಧ ಕಾಯ್ದೆ ಕುರಿತು ಡಿ.ಕೆ. ಶಿವಕುಮಾರ್ ಗರಂ ಆಗಿದ್ದಾರೆ. ನಮ್ಮ ಸರ್ಕಾರ ಒಪ್ಪಿದ್ದರೆ ಸಂಪುಟದಲ್ಲಿ ನಾವು ತರುತ್ತಿದ್ದೆವು. ನಾವು ಒಪ್ಪಿರಲಿಲ್ಲ, ಅದು ಸರಿ ಇಲ್ಲ ಎಂದು ತಿರಸ್ಕರಿಸುತ್ತಿದ್ದೆವು. ಯಾವುದೋ ಸಂಘಟನೆಯವರು, ಅಧಿಕಾರಿಗಳು ಕೊಟ್ಟಿದ್ದರು. ಅದು ಸರಿಯಿಲ್ಲ ಎಂದು ಗೊತ್ತಾಗಿ ನಾವು ತಿರಸ್ಕಾರ ಮಾಡಿದ್ದೆವು ಎಂದು ಹಾಸನ ಜಿಲ್ಲೆ ಅರಕಲಗೂಡಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿಕೆ ನೀಡಿದ್ದಾರೆ.

ಇದೊಂದು ಐತಿಹಾಸಿಕ ಸಭೆ ಎಂದು ನಾನು ಭಾವಿಸಿದ್ದೇನೆ. ನಿಂಬೆಗಿಮ್‌ಹುಳಿಯಿಲ್ಲ, ದುಂಬಿಗಿಮ್ ಕರಿಯಿಲ್ಲ, ಶಂಭುಗಿಮ್ ದೇವರಿಲ್ಲ, ನಂಬಿಕೆಗಿನ್ನ ದೊಡ್ಡ ಗುಣ ಇಲ್ಲ ಎಂಬ ಸರ್ವಜ್ಞನ ವಚನ ಹೇಳಿ ಶಿವಕುಮಾರ್ ಮಾತನಾಡಿದ್ದಾರೆ. ಮುಂದಿನ ಸಿಎಂ ಡಿಕೆಶಿ ಎಂದು ಘೋಷಣೆ ಕೂಗಿದ ಅಭಿಮಾನಿಗಳಿಗೆ ಶಿವಕುಮಾರ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಸಿಎಂ ಆಮೇಲೆ ಮೊದಲು ಓಟ್ ಹಾಕ್ರೋ. ಇಲ್ಲಿ ಕಾಂಗ್ರೆಸ್ ಮೊದಲು ಗೆಲ್ಲಿಸಿ ಎಂದು ಗರಂ ಆಗಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಪ್ರಾರಂಭವಾಗಿದೆ: ಧ್ರುವನಾರಾಯಣ ಕಾಂಗ್ರೆಸ್​ನಲ್ಲಿ ಎಲ್ಲ ಜಾತಿಯವರಿಗೂ ಸಮಾನ ಅವಕಾಶವಿದೆ. ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಪ್ರಾರಂಭವಾಗಿದೆ. ಡಿಕೆಶಿಯವರು ಅಧ್ಯಕ್ಷರಾದ ಸಮಯ ಕೊವಿಡ್ ಸಮಯ. ಆದರೆ ಡಿಕೆಶಿ ಮನೆಯಲ್ಲಿರದೆ ಜನರ ಸಮಸ್ಯೆಗೆ ಸ್ಪಂದಿಸಿದರು. ಡಿಕೆಶಿ, ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆಯಲ್ಲಿ ಗೆಲುವು ಸಿಕ್ಕಿದೆ. ನಾವು ಸಾಕಷ್ಟು ಉಪ ಚುನಾವಣೆಯಲ್ಲಿ ಜಯಗಳಿಸಿದ್ದೇವೆ. ಇದೆಲ್ಲ ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆಯನ್ನು ತೋರಿಸುತ್ತೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಎರಡೂ ಕಾಯ್ದೆಗಳನ್ನು ನಾವು ವಾಪಸ್ ಪಡೆಯುವುದು ಖಚಿತ; ಬಿಜೆಪಿ, ಜೆಡಿಎಸ್​ಗೆ ಬಹಿರಂಗ ಸವಾಲು ಹಾಕಿದ ಡಿ.ಕೆ.ಶಿವಕುಮಾರ್

ಇದನ್ನೂ ಓದಿ: ವಿಧಾನ ಪರಿಷತ್​​ನಲ್ಲಿ ಮಂಡನೆ ಆಗದ ಮತಾಂತರ ನಿಷೇಧ ವಿಧೇಯಕ: ಮುಂದಿನ ಅಧಿವೇಶನದಲ್ಲಿ ಮಂಡನೆಗೆ ನಿರ್ಧಾರ

Follow us on

Related Stories

Most Read Stories

Click on your DTH Provider to Add TV9 Kannada