ಹೆಚ್ಡಿ ಕುಮಾರಸ್ವಾಮಿ ಸ್ಲೋ ಪಾಯಿಸನ್: ಹೆಚ್ಸಿ ಬಾಲಕೃಷ್ಣ ವಾಗ್ದಾಳಿ
ಹೆಚ್.ಡಿ. ಕುಮಾರಸ್ವಾಮಿ ಬಗ್ಗೆ ಬೇಸರವಿಲ್ಲ, ಅವರ ನಡುವಳಿಕೆ ಬಗ್ಗೆ ಬೇಸರ ಇದೆ. ಹೆಚ್ಡಿಕೆ ನಾಯಕತ್ವವನ್ನು ದುರುಪಯೋಗ ಪಡಿಸಿಕೊಂಡರು ಎಂದು ಬಿಡದಿಯಲ್ಲಿ ಬಾಲಕೃಷ್ಣ ಬೇಸರ ವ್ಯಕ್ತಪಡಿಸಿದ್ದಾರೆ.
ರಾಮನಗರ: ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸ್ಲೋ ಪಾಯಿಸನ್. ರಾಜ್ಯದಲ್ಲಿ ಜೆಡಿಎಸ್ ಪಕ್ಷಕ್ಕೆ ನೆಲೆ ಇಲ್ಲ. ಈಗಾಗಲೇ ಹಲವು ಶಾಸಕರು ಜೆಡಿಎಸ್ ಪಕ್ಷ ಬಿಟ್ಟಿದ್ದಾರೆ. ಪುಟ್ಟರಾಜು, ಶಿವಲಿಂಗೇಗೌಡ ಸೇರಿ ಇನ್ನೂ ಹಲವರು ಬಿಡ್ತಾರೆ. ಹೆಚ್.ಡಿ. ಕುಮಾರಸ್ವಾಮಿ ಪಕ್ಷದ ಮುಖಂಡರ ಏಳಿಗೆ ಸಹಿಸಲ್ಲ. ಪಕ್ಕದಲ್ಲಿರುವವರಿಗೆ ಮೊದಲು ಕುಮಾರಸ್ವಾಮಿ ಚುಚ್ಚುತ್ತಾರೆ ಎಂದು ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಮಾಜಿ ಶಾಸಕ ಹೆಚ್.ಸಿ. ಬಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ. ರಾಮನಗರ ತಾಲೂಕಿನ ಬಿಡದಿಯಲ್ಲಿ ಬಾಲಕೃಷ್ಣ ಮಾತನಾಡಿದ್ದಾರೆ.
ನನಗೆ ಟಿಕೆಟ್ ಕೊಟ್ಟು, ನನ್ನ ಸೋದರನನ್ನೇ ಸೋಲಿಸಿದರು. ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ನನ್ನ ತಮ್ಮನನ್ನೇ ಸೋಲಿಸಿದರು. ನಾನೂ ಕೂಡ ಕುಮಾರಸ್ವಾಮಿಯಿಂದ ಚುಚ್ಚಿಸಿಕೊಂಡಿದ್ದೇನೆ. ಹೆಚ್.ಡಿ. ಕುಮಾರಸ್ವಾಮಿ ಬಗ್ಗೆ ಬೇಸರವಿಲ್ಲ, ಅವರ ನಡುವಳಿಕೆ ಬಗ್ಗೆ ಬೇಸರ ಇದೆ. ಹೆಚ್ಡಿಕೆ ನಾಯಕತ್ವವನ್ನು ದುರುಪಯೋಗ ಪಡಿಸಿಕೊಂಡರು ಎಂದು ಬಿಡದಿಯಲ್ಲಿ ಬಾಲಕೃಷ್ಣ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ನಿಖಿಲ್ ಕುಮಾರಸ್ವಾಮಿ ನಟನೆಯ ‘ರೈಡರ್’ ಸಿನಿಮಾ ರಿಲೀಸ್; ಚಿತ್ರಮಂದಿರದಲ್ಲಿ ಹೇಗಿದೆ ಸಂಭ್ರಮ?
ಇದನ್ನೂ ಓದಿ: ಕನ್ನಡ ಕಟುಕರ ಕೈಯಲ್ಲಿ ಸಿಲುಕಿಕೊಂಡಿದೆ; ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಟ್ವೀಟ್