6 ಎಲೆಕ್ಷನ್‌ನಲ್ಲಿ ದುಡ್ಡು ಹಂಚದೆ ಗೆದ್ದಿದ್ದೀನಿ ಎಂದ ರಮೇಶ್ ಜಾರಕಿಹೊಳಿ: ಹಣ ಹಂಚಿದ ಫೋಟೋ, FIR ಪ್ರತಿ ರಿಲೀಸ್ ಮಾಡಿದ ಪೂಜಾರಿ

ನಾನು 6 ಎಲೆಕ್ಷನ್‌ನಲ್ಲಿ ದುಡ್ಡು ಹಂಚದೆ ಗೆದ್ದಿದ್ದೀನಿ ಎಂದಿರುವ ರಮೇಶ್ ಜಾರಕಿಹೊಳಿ ವಿರುದ್ಧ ಅಶೋಕ್ ಪೂಜಾರಿ ಫೋಟೋ ಹಾಗೈ ಎಫ್​ಐಆರ್ ಪ್ರತಿ ರಿಲೀಸ್ ಮಾಡಿದ್ದಾರೆ.

6 ಎಲೆಕ್ಷನ್‌ನಲ್ಲಿ ದುಡ್ಡು ಹಂಚದೆ ಗೆದ್ದಿದ್ದೀನಿ ಎಂದ ರಮೇಶ್ ಜಾರಕಿಹೊಳಿ: ಹಣ ಹಂಚಿದ ಫೋಟೋ, FIR ಪ್ರತಿ ರಿಲೀಸ್ ಮಾಡಿದ ಪೂಜಾರಿ
ಅಶೋಕ್ ಪೂಜಾರಿ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Jan 21, 2023 | 3:34 PM

ಬೆಳಗಾವಿ: ಕರ್ನಾಟಕ ವಿಧಾನಸಭೆ ಚುನಾವಣೆ(Karnataka Assembly Election 2023) ದಿನದಿಂದ ದಿನಕ್ಕೆ ರಂಗೇರುತ್ತಿದೆ. ಅದರಲ್ಲೂ ಬೆಳಗಾವಿ (Belagavi) ಜಿಲ್ಲೆಯಲ್ಲಿ ಈಗನಿಂದಲೇ ಓಲೈಕೆ ರಾಜಕೀಯ (Politics) ಶುರುವಾಗಿದೆ. ಜಿಲ್ಲೆಯಲ್ಲಿ ಮತದಾರರಿಗೆ ಹಲವು ಬಗೆಯ ಗಿಫ್ಟ್​​ಗಳನ್ನು ನೀಡಲಾಗುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಪ್ರತಿಕ್ರಿಯಿಸಿ, ನಾನು 6 ಎಲೆಕ್ಷನ್‌ನಲ್ಲಿ ಗೆದ್ದಿದ್ದೇನೆ. ಆದ್ರೆ ದುಡ್ಡು ಹಂಚಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಮುಖಂಡ ಅಶೋಕ್ ಪೂಜಾರಿ ಅವರು ರಮೇಶ್ ಜಾರಕಿಹೊಳಿ ಕಳೆದ ಚುನಾವಣೆ ಸಂದರ್ಭದಲ್ಲಿ ಹಣ ಹಂಚುತ್ತಿದ್ದ ಫೋಟೋ ಹಾಗೂ ದಾಖಲಾಗಿದ್ದ ಎಫ್​ಐಆರ್ ಪ್ರತಿಯನ್ನು ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ: ಬೆಳಗಾವಿ ಗ್ರಾಮೀಣ ಮತ ಬ್ಯಾಂಕ್​ಗೆ ಲಗ್ಗೆ: ಕುಕ್ಕರ್ ಗಿಫ್ಟ್ ಬೇಡಾ, ನಾನು 10 ಕೋಟಿ ಖರ್ಚು ಮಾಡುವೆ ಬನ್ನೀ- ರಮೇಶ್ ಜಾರಕಿಹೊಳಿ

ಹೌದು…ಇಂದು(ಜನವರಿ 21) ಬೆಳಗಾವಿಯಲ್ಲಿ ಸುದ್ದಿಗೋಷ್ಠಿ‌ ನಡೆಸಿ ಮಾತನಾಡಿದ ಅಶೋಕ್ ಪೂಜಾರಿ, 2018ರ ಚುನಾವಣೆ ವೇಳೆ ರಮೇಶ್ ಜಾರಕಿಹೊಳಿ ದುಡ್ಡು ಹಂಚುತ್ತಿದ್ದ ಫೋಟೋ ರಿಲೀಸ್ ಮಾಡಿದರು. ಅಲ್ಲದೇ ಹಣ ಹಂಚಿಕೆ ಆರೋಪದ ಮೇಲೆ ದಾಖಲಾಗಿದ್ದ ಎಫ್​ಐಆರ್​ ಪ್ರತಿಯನ್ನು ಸಹ ಮಾಧ್ಯಮಗಳ ಮುಂದೆ ಬಿಡುಗಡೆ ಮಾಡಿದರು. ಈ ಮೂಲಕ ರಮೇಶ್ ಜಾರಕಿಹೊಳಿ ಹಣ ಹಂಚಿಲ್ಲ ಎನ್ನುವ ಹೇಳಿಕೆಗೆ ತಿರುಗೇಟು ನೀಡಿದರು.

2018ರ ಚುನಾವಣೆಯಲ್ಲಿ ಗೋಕಾಕ್​ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಶೋಕ್ ಪೂಜಾರಿ, ರಮೇಶ್ ಜಾರಕಿಹೊಳಿ ವಿರುದ್ಧ ಸೋಲುಕಂಡಿದ್ದರು. ಆ ವೇಳೆ ದುರ್ಗಾ ಮಂದಿರದಲ್ಲಿ ಅಂದಿನ ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಜಾರಕಿಹೊಳಿ ವಿರುದ್ಧ ಹಣ ಹಂಚಿದ ಆರೋಪ ಮಾಡಿದ್ದರು. ಈ ಬಗ್ಗೆ ಗೋಕಾಕ್ ಗ್ರಾಮೀಣ ಠಾಣೆಯಲ್ಲಿ 2018 ಮೇ.7ರಂದು ಎಫ್ಐಆರ್ ದಾಖಲಾಗಿತ್ತು. ಆ ಎಫ್​ಐಆರ್ ಪ್ರತಿಯನ್ನು ಬಿಡುಗಡೆ ಮಾಡಿ ರಮೇಶ್ ಜಾರಕಿಹೊಳಿಗೆ ಟಾಂಗ್ ಕೊಟ್ಟಿದ್ದಾರೆ.

ಇದನ್ನೂ ಓದಿ: ಬೆಳಗಾವಿ ಕ್ಷೇತ್ರದಲ್ಲಿ ಗಿಫ್ಟ್​ ಪಾಲಿಟಿಕ್ಸ್​​: ರಮೇಶ್​ ಜಾರಕಿಹೊಳಿ ಆಪ್ತನಿಂದ ಸೀರೆ ಹಂಚಿಕೆ

ರಮೇಶ್ ಜಾರಕಿಹೊಳಿ ಹೇಳಿದ್ದೇನು?

ನಿನ್ನೆ (ಜನವರಿ 20) ಬೆಳಗಾವಿ ಗ್ರಾಮೀಣ ಕ್ಷೇತ್ರದ ಸುಳೇಭಾವಿಯಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ರಮೇಶ್ ಜಾರಕಿಹೊಳಿ, ಕುಕ್ಕರ್, ಮಿಕ್ಸರ್​ ಗಿಫ್ಟ್ ಕೊಡುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ವಿರುದ್ಧ ವಾಗ್ದಾಳಿ ನಡೆಸಿದ್ದರು. ಹಾಗೇ ನಾನು 6 ಚುನಾವಣೆ ಗೆದ್ದಿದ್ದೇನೆ ಎಂದೂ ದುಡ್ಡು ಹಂಚಿಲ್ಲ ಎಂದು ಹೇಳಿದ್ದರು. ಆದರೆ, ಇದೀಗ ರಮೇಶ್ ಜಾರಕಿಹೊಳಿ ಹಣ ಹಂಚಿದ ಫೋಟೋವನ್ನು ಅಶೋಕ್ ಪೂಜಾರಿ ಬಿಡುಗಡೆ ಮಾಡುವ ಮೂಲಕ ಜಾರಕಿಹೊಳಿಗೆ ತಿವಿದಿದ್ದಾರೆ.

ಗೋಕಾಕ್‌ನಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಅಶೋಕ್ ಪೂಜಾರಿ ಸತತವಾಗಿ 4 ಬಾರಿ ಸ್ಪರ್ಧಿಸಿ ಸೋಲುಕಂಡಿದ್ದಾರೆ. ಈಗ ಮತ್ತೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗೋಕಾಕ್​ನಿಂದ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

Published On - 3:32 pm, Sat, 21 January 23