ರಾಜಕಾಲುವೆಗಳ ತೆರವಿಗೆ ಸಮಗ್ರ ನೀತಿ ಜಾರಿ ಮಾಡದ ಬಿಬಿಎಂಪಿ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್

ರಾಜಕಾಲುವೆಗಳ ತೆರವಿಗೆ ಒತ್ತುವರಿದಾರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಮತ್ತು ಸಮಗ್ರ ನೀತಿ ಜಾರಿ ಮಾಡದ ಬಿಬಿಎಂಪಿ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, ವಿಚಾರಣೆಯನ್ನು ಆಗಸ್ಟ್ 1ರಂದು ಮುಂದೂಡಿದೆ. ಖುದ್ದು ಬಿಬಿಎಂಪಿ ಮುಖ್ಯ ಆಯುಕ್ತರು ಹಾಗೂ ನಗರಾಭಿವೃದ್ಧಿ ಇಲಾಖೆಯ ಉನ್ನತ ಅಧಿಕಾರಿಗಳು ಹಾಜರಿರಲು ಸೂಚಿಸಿದೆ.

ರಾಜಕಾಲುವೆಗಳ ತೆರವಿಗೆ ಸಮಗ್ರ ನೀತಿ ಜಾರಿ ಮಾಡದ ಬಿಬಿಎಂಪಿ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್
ಹೈಕೋರ್ಟ್
Follow us
Ramesha M
| Updated By: ಗಂಗಾಧರ​ ಬ. ಸಾಬೋಜಿ

Updated on:Jul 22, 2023 | 10:24 PM

ಬೆಂಗಳೂರು, ಜುಲೈ 22: ರಾಜಕಾಲುವೆಗಳ ತೆರವಿಗೆ ಒತ್ತುವರಿದಾರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಮತ್ತು ಸಮಗ್ರ ನೀತಿ ಜಾರಿ ಮಾಡದ ಬಿಬಿಎಂಪಿ (BBMP) ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಕೆರೆ ಮತ್ತು ರಾಜಕಾಲುವೆಗಳ ಸಂರಕ್ಷಣೆ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಸಿಟಿಜನ್​ ಆಕ್ಷನ್​​ ಗ್ರೂಪ್​ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ಮತ್ತು ನ್ಯಾಯಮೂರ್ತಿ ಎಂ.ಜಿ.ಎಸ್​.ಕಮಲ್‌ ಅವರಿದ್ದ ಪೀಠ ಈ ಕುರಿತಾಗಿ ಅಸಮಾಧಾನ ಹೊರಹಾಕಿದೆ.

ಒತ್ತುವರಿ ವೇಳೆ ಕೈಕಟ್ಟಿ ಕುಳಿತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ. ಸಮಗ್ರ ಯೋಜನೆ ರೂಪಿಸದೇ ಭಾಗಶಃ ಕ್ರಮ ಕೈಗೊಂಡಿದೆ ಎಂದು ಬಿಬಿಎಂಪಿ ಸಲ್ಲಿಸಿದ ವರದಿ ಬಗ್ಗೆ ಹೈಕೋರ್ಟ್ ಅತೃಪ್ತವಾಗಿದೆ.

ಇದನ್ನೂ ಓದಿ: Bengaluru News: ಚುರುಕುಗೊಂಡ ರಾಜಕಾಲುವೆ ಒತ್ತುವರಿ ತೆರವು ಕಾರ್ಯ: ಅಧಿಕಾರಿಗಳಿಗೆ ಗಡುವು ನೀಡಿದ ಬಿಬಿಎಂಪಿ ಆಯುಕ್ತ

ಆಗಸ್ಟ್ 1ಕ್ಕೆ ವಿಚಾರಣೆ ಮುಂದೂಡಿಕೆ

ಸದ್ಯ ವಿಚಾರಣೆಯನ್ನು ಆಗಸ್ಟ್ 1ರಂದು ಮುಂದೂಡಿದ್ದು, ಬಿಬಿಎಂಪಿ ಮುಖ್ಯ ಆಯುಕ್ತರು ಹಾಗೂ ನಗರಾಭಿವೃದ್ಧಿ ಇಲಾಖೆಯ ಉನ್ನತ ಅಧಿಕಾರಿಗಳು ಖುದ್ಧು ಹಾಜರಿರಬೇಕು ಎಂದು ಸೂಚನೆ ನೀಡಲಾಗಿದೆ.

ಇದನ್ನೂ ಓದಿ: Manipur Incident: ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿ ವಾಪಸ್ ಆಗುತ್ತಿದ್ದ ಯುವತಿಗೆ ರ್ಯಾಪಿಡೋ ಬೈಕ್ ಚಾಲಕನಿಂದ ಲೈಂಗಿಕ ಕಿರುಕುಳ

ಬೆಂಗಳೂರಿನಲ್ಲಿ 571 ಕಡೆ ಅಕ್ರಮ ಒತ್ತುವರಿ ವರದಿ ಹಿನ್ನಲೆ ತೆರವು ಮಾಡಲಾಗಿದೆ. ಇತ್ತೀಚೆಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಒತ್ತುವರಿ ತೆರವುಗೊಳಿಸಲು ಅಧಿಕಾರಿಗಳಿಗೆ 15 ದಿನಗಳ ಟಾರ್ಗೆಟ್ ನೀಡಿದ್ದರು. ಈಗಾಗಲೆ ಸಿಲಿಕಾನ್ ಸಿಟಿಯಲ್ಲಿ 100ಕ್ಕೂ ಹೆಚ್ಚು ಕಡೆ ಒತ್ತುವರಿ ತೆರವು ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:11 pm, Sat, 22 July 23