AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮಗೇನು ಯೋಗ್ಯತೆ ಇಲ್ವಾ? ವಿದೇಶದಿಂದ ವಾಪಸ್ ಆಗ್ತಿದ್ದಂತೆ ಹೆಚ್​ಡಿ ಕುಮಾರಸ್ವಾಮಿ ಗರಂ ಆಗಿದ್ದೇಕೆ?

ಕಾಂಬೋಡಿಯಾ ಪ್ರವಾಸ ಕೈಗೊಂಡಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಿನ್ನೆ(ಆ.13) ರಾತ್ರಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ತಡರಾತ್ರಿ 11.30 ಗಂಟೆ ಸುಮಾರಿಗೆ ಕೌಲಾಲಂಪುರದಿಂದ ಹೆಚ್‌.ಡಿ.ಕುಮಾರಸ್ವಾಮಿ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ್ದಾರೆ. ಇನ್ನು ವಿದೇಶದಿಂದ ಆಗಮಿಸುತ್ತಿದ್ದಂತೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ.

ನಮಗೇನು ಯೋಗ್ಯತೆ ಇಲ್ವಾ? ವಿದೇಶದಿಂದ ವಾಪಸ್ ಆಗ್ತಿದ್ದಂತೆ ಹೆಚ್​ಡಿ ಕುಮಾರಸ್ವಾಮಿ ಗರಂ ಆಗಿದ್ದೇಕೆ?
ಹೆಚ್​ ಡಿ ಕುಮಾರಸ್ವಾಮಿ
ನವೀನ್ ಕುಮಾರ್ ಟಿ
| Edited By: |

Updated on: Aug 14, 2023 | 7:41 AM

Share

ಬೆಂಗಳೂರು, (ಆಗಸ್ಟ್ 14): ವಿದೇಶದಿಂದ ಆಗಮಿಸುತ್ತಿದ್ದಂತೆ ರಾಜ್ಯ ಕಾಂಗ್ರೆಸ್ ಸರ್ಕಾರದ (Congress Government)  ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ(HD Kumaraswamy)  ವಾಗ್ದಾಳಿ ನಡೆಸಿದ್ದಾರೆ. ನಿನ್ನೆ(ಆ.13) ರಾತ್ರಿ ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಮಾತನಾಡಿದ ಅವರು, ರಾಜ್ಯದ ಕೆಲ ಸಚಿವರು ಲೂಟಿ ಹೊಡೆಯಲು ಬಿಟ್ಟು ಬಿಡಿ ಅಂತ ವಿದೇಶದಲ್ಲಿ ಅರೆಂಜ್ಮೆಂಟ್ ಮಾಡಿದ್ದಾರಲ್ಲ. ವಿದೇಶದಲ್ಲಿ ಇದ್ದು ಬಿಡಿ ಅಂತ ಸಲಹೆ ಕೊಟ್ಟಿದ್ದಾರಲ್ವಾ ಅದಕ್ಕೆ ಗೌರವ ಕೊಡಬೇಕು ಅಲ್ವಾ.. ನಾನು ಅದನ್ನು ಪಾಲಿಸಬೇಕು ಅಲ್ವಾ ಎಂದು ಕುಮಾರಸ್ವಾಮಿ ಕುಟುಕಿದ್ದಾರೆ.

‘ನಮಗೇನು ವಿದೇಶಕ್ಕೆ ಹೋಗೋ ಯೋಗ್ಯತೆ ಇಲ್ವಾ?’

ಕೆಲ ಸಚಿವರು ಕುಮಾರಸ್ವಾಮಿ ವಿದೇಶದಲ್ಲೇ ಇದ್ದು ಬಿಡಲಿ ಎಲ್ಲಾ ವ್ಯವಸ್ಥೆ ಮಾಡಿಕೊಡುತ್ತೇನೆ ಎಂದು ಹೇಳಿದ್ದಾರೆ. ಮಾನ ಮರ್ಯಾದೆ ಇಲ್ಲದೆ ಇಲ್ಲಿ ದರೋಡೆ ಮಾಡಿಕೊಂಡು ಕೂತಿದ್ದಾರೆ. ಅದಕ್ಕೆ ನಮ್ಮನ್ನ ಸಚಿವರು ವಿದೇಶಕ್ಕೆ ಕಳಿಸುತ್ತಾರೆ. ನಮಗೇನು ವಿದೇಶಕ್ಕೆ ಹೋಗುವ ಯೋಗ್ಯತೆ ಇಲ್ವಾ? ಆ ಪಾಪದ ಹಣವನ್ನ ತೆಗೆದುಕೊಂಡು ಹೋಗಬೇಕಾ ನಾನು ಎಂದು ಕುಮಾರಸ್ವಾಮಿ ತಿರುಗೇಟು ನೀಡಿದರು.

ಇದನ್ನೂ ಓದಿ: ವಿದೇಶದಿಂದ ಕುಮಾರಸ್ವಾಮಿ ವಾಪಸ್: ಕಾಂಬೋಡಿಯಾಗೆ ಹೋಗಿದ್ಯಾಕೆ? ಕಾರಣ ಬಿಚ್ಚಿಟ್ಟ ಮಾಜಿ ಸಿಎಂ

ಗುತ್ತಿಗೆದಾರರ ಬಾಕಿ ಹಣ ಬಿಡುಗಡೆ ಮಾಡದ ಸರ್ಕಾರದ ವಿರುದ್ಧದ ಆರೋಪ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಅಯ್ಯೋ ಈ ಗುತ್ತಿಗೆ ವ್ಯವಹಾರ ಎಲ್ಲಿಗೆ ಹೋಗಿ ನಿಲ್ಲುತ್ತೋ ಗೊತ್ತಿಲ್ಲ. ಈ‌ ಬಗ್ಗೆ ಇನ್ನೂ ನಾಳೆ ನಾಡಿದ್ದು ಮಾತನಾಡುತ್ತೇನೆ. ನಿಮ್ಮನ್ನೆಲ್ಲ ನಾನು ಭೇಟಿ ಮಾಡಲೆಬೇಕು ಎಂದರು.

‘ರಾಜ್ಯಪಾಲರಿಗೆ ಯಾಕೆ ಲೆಟರ್ ಹೋಗುತ್ತೆ’

ಚೆಲುವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ಲೆಟರ್ ಬರೆದ ವಿಚಾರಕ್ಕೂ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ನಾನೇ ಹೇಳಿದ್ದನ್ನು ಈಗ ತನಿಖೆ ಮಾಡ್ತಿದ್ದಾರೆ ಅಲ್ವಾ. ತನಿಖೆಯ ಸರ್ಟಿಫಿಕೇಟ್ ತೆಗೆದುಕೊಳ್ಳಲು ಹೇಳಿ. ಯಾಕೆ‌ ಇವೆಲ್ಲ ಬರ್ತಾವೆ ಗರ್ವನರ್‌ಗೆ ಯಾಕೆ ಲೆಟರ್ ಹೋಗುತ್ತೆ…? ನಾನು ಮಾಸ್ಟರ್ ಮೈಂಡ್ ಅಂತಾರಲ್ವಾ. ನಾನು ಆ ಪ್ರಕರಣದ ಬಗ್ಗೆ ಚರ್ಚೆನೆ ಮಾಡಿಲ್ಲ ಆದ್ರು ನನ್ನ ಹೆಸರು ಯಾಕೆ ಹೇಳುತ್ತಾರೆ ಎಂದು ಕುಮಾರಸ್ವಾಮಿ ಪ್ರಶ್ನಿಸಿರು.

‘ಚಲುವರಾಯಸ್ವಾಮಿಗೆ ನನ್ನ ಭಯ ಇದೆ’

ಚಲುವರಾಯಸ್ವಾಮಿಗೆ ನನ್ನ ಭಯ ಇದೆ. ಅದಕ್ಕೆ ಅವರು ನನ್ನ ಹೆಸರು ಹೇಳ್ತಾರೆ. ಮೊದಲು ಪ್ರಾಮಾಣಿಕವಾಗಿ ನಡೆದುಕೊಳ್ಳಲು ಕಲಿತುಕೊಳ್ಳಲಿ.. ಪ್ರಾಮಾಣಿಕವಾಗಿ ನಡೆದುಕೊಂಡ್ರೆ ಇಂತದ್ದೆಲ್ಲ ಯಾಕೆ ಬರುತ್ತೆ. ಮಂತ್ರಿಗಿರಿ ಸಿಕ್ಕಿದೆ ಅಂತ ಸ್ವೇಚ್ಛಾಚಾರವಾಗಿ ಹಗಲು ದರೋಡೆ ಮಾಡುವುದಲ್ಲ. ಮೊದಲು ಒಳ್ಳೆ ಕೆಲಸ ಮಾಡಿ ಅಂತ ಚೆಲುವರಾಯಸ್ವಾಮಿಗೆ ನಾನು ಹೇಳ್ತೀನಿ ಎಂದು ಕುಮಾರಸ್ವಾಮಿ ಹೇಳಿದರು

‘ಲೂಟಿ ಹೊಡೆಯುವ ಬಗ್ಗೆಯೇ ಚಿಂತೆ’

ನಮ್ಮ ದೇಶದಲ್ಲಿ ಬೇರೆ ದೇಶದಂತೆ ಹಣದ ಕೊರತೆಯಿಲ್ಲ. ಮದ್ಯಪ್ರದೇಶದಲ್ಲಿ ಇಲ್ಲಿ 40% ಸರ್ಕಾರ ಅಂತ ಹಾಕಿದಂತೆ ಅಲ್ಲೂ 50% ಸರ್ಕಾರ ಅಂತ ಹಾಕ್ಕೊಂಡು ಹೊರಟಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳು ದೇಶವನ್ನ ಎಲ್ಲಿಗೆ ತೆಗೆದುಕೊಂಡು ಹೋಗಲು ಹೊರಟಿವೆ ಅಂತಾ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಇವರಿಗೆ ದೇಶದ ಜನರ ಸಮಸ್ಯೆಗೆ ಪರಿಹಾರ ಹುಡುಕುವುದು ಬೇಕಿಲ್ಲ ಜನರ ಹಣ ಲೂಟಿ ಹೊಡೆಯುವ ಬಗ್ಗೆಯೇ ಚಿಂತೆ ಎಂದು ವಾಗ್ದಾಳಿ ನಡೆಸಿದರು.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ