Karnataka Budget 2023: ಕಾಂಗ್ರೆಸ್ ಸರ್ಕಾರದ ಫಸ್ಟ್ ಬಜೆಟ್ ಬಗ್ಗೆ ಯಾರು ಏನು ಹೇಳಿದರು?
ಇಂದು(ಜು.7) ಸಿಎಂ ಸಿದ್ದರಾಮಯ್ಯ ಅವರ 14ನೇ ಬಜೆಟ್ನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಈ ಕುರಿತು ಉಭಯ ಪಕ್ಷಗಳ ನಾಯಕರುಗಳು ಏನು ಹೇಳಿದರು ಇಲ್ಲಿದೆ ನೋಡಿ.
ಬೆಂಗಳೂರು: ಇಂದು(ಜು.7) ಸಿಎಂ ಸಿದ್ದರಾಮಯ್ಯ(Siddarmaiah) ಅವರ 14ನೇ ಬಜೆಟ್ನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಈ ಕುರಿತು ಉಭಯ ಪಕ್ಷಗಳ ನಾಯಕರುಗಳು ಟೀಕಿಸುತ್ತಿದ್ದು, ಅದರಂತೆ ‘ಆದಾಯ ಹೆಚ್ಚಿಸಲು ಅಬಕಾರಿ ಸುಂಕವನ್ನು ಹೆಚ್ಚಿಸಿದ್ದಾರೆಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಹೇಳಿದರು. ಬಜೆಟ್ ನಂತರ ವಿಧಾನಸೌಧದಲ್ಲಿ ಮಾತನಾಡಿದ ಅವರು ‘ ಆನ್ ಲೈನ್ ಗೇಮ್ನಿಂದ 65 ಲಕ್ಷ ಕಳೆದುಕೊಂಡಿದ್ದಾರೆ. ಅನ್ನಭಾಗ್ಯ ಅಕ್ಕಿಗೆ ಹಣಕೊಡಲು ಹೊರಟ್ಟಿದ್ದಿರಲ್ಲ, ಆ ದುಡ್ಡು ಇದಕ್ಕೆ ಹೋಗುತ್ತೆ. ಹಣವನ್ನ ಮನೆಗೆ ತೆಗೆದುಕೊಂಡು ಹೋಗ್ತಾನೊ, ಇನ್ನೆಲ್ಲಿ ತಗೊಂಡು ಹೋಗ್ತಾನೊ ಗೊತ್ತಿಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.
ಇವರು 1995 ರಿಂದ ಮಂಡಿಸಿದ ಬಜೆಟ್ನಿಂದ 13 ಬಜೆಟ್ನ್ನು ನಾನು ಅಧ್ಯಯನ ಮಾಡಿದ್ದೀನಿ, ದುಡಿಯುವ ಕೈಗೆ ಸ್ವಾವಲಂಬಿಯಾಗಿ ಬದುಕಲು ಲಾಂಗ್ ಟರ್ಮ್ ಯೋಜನೆ ಏನು?, ನಿಮ್ಮ ಯಾವ ಗ್ಯಾರಂಟಿಗೂ ನನ್ನ ತಕರಾರಿಲ್ಲ, ಇನ್ನು ಎರಡು ಜ್ಯೋತಿ ಕೊಡಿ ಪರವಾಗಿಲ್ಲ. ವರ್ಷಕ್ಕೆ 50 ರಿಂದ 60 ಸಾವಿರ ವೆಚ್ಚವಾಗಲಿದೆ. ಇನ್ನಿತರ ಯಾವುದಕ್ಕೂ ಈ ಬಜೆಟ್ನಲ್ಲಿ ಹಣ ಇಟ್ಟಿಲ್ಲ. ಇದು ಕೇವಲ ಕೇಂದ್ರ ಸರ್ಕಾರ ಮತ್ತು ಈ ಹಿಂದಿನ ಸರ್ಕಾರವನ್ನ ದೋಷಣೆ ಮಾಡುವ ಬಜೆಟ್ ಅಷ್ಟೇ, ಇದರಲ್ಲಿ ಏನು ಇಲ್ಲವೆಂದರು.
ಒಂದೇ ವರ್ಷಕ್ಕೆ ಜನರ ಮೇಲೆ 85 ಸಾವಿರ ಕೋಟಿ ಸಾಲ ಇಡ್ತಿದೀರಲ್ಲ, ಇಷ್ಟೋಂದು ಸಾಲ ಏಕೆ ಮಾಡ್ತೀದೀರಿ. ನೀರಾವರಿ, ಕೃಷಿಗೆ, ಜನರ ಬದುಕು ಕಟ್ಟಲು, ಜನರನ್ನ ಸ್ವಾಭಿಮಾನಿಯನ್ನಾಗಿ ಮಾಡಲು ಈ ಬಜೆಟ್ ಎಷ್ಟು ಸಹಕಾರಿಯಾಗುತ್ತೆ. ಕೇಂದ್ರ ಸರ್ಕಾರ- ರಾಜ್ಯ ಸರ್ಕಾರ ಸುಂದರ ಬಾಂಧವ್ಯ ಇಟ್ಟುಕೊಳ್ಳಬೇಕು. ಪ್ರತಿ ಬಾರಿ ಅವರನ್ನ ದೂಷಿಸಿದ್ರೆ, ಅವರು ಏಕೆ ನೆರವು ನೀಡ್ತಾರೆ. ಕೇಂದ್ರವನ್ನ ಇವರು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಕರ್ನಾಟಕದ ಬಜೆಟ್ ಇಡೀ ದೇಶಕ್ಕೆ ಸಂದೇಶ ಕೊಡುವ ಬಜೆಟ್ ಅಂತೆ, ಈ ಬಜೆಟ್ನಲ್ಲಿ ಇನ್ನೇನಿದೆ ಎಂದರು.
ಹಿಂದಿನ ಸರ್ಕಾರ ತೋರಿಸಿ ಕಾಗೆ ಹಾರಿಸೋ ಬಜೆಟ್ ಇದೆ; ಮಾಜಿ ಸಚಿವ ಸುನಿಲ್ ಕುಮಾರ್
ಇನ್ನು ಬಜೆಟ್ ಕುರಿತು ಮಾಜಿ ಸಚಿವ ಸುನಿಲ್ ಕುಮಾರ್ ಮಾತನಾಡಿ ‘ಈ ಸಾಲಿನ ಬಜೆಟ್ನ ಒಂದು ಲೈನ್ನಲ್ಲಿ ಹೇಳೋದಾದ್ರೆ, ಕೇಂದ್ರ ಸರ್ಕಾರ ಏನೂ ಕೊಡಲಿಲ್ಲ, ಹಿಂದಿನ ಸರ್ಕಾರ ಏನೂ ಮಾಡಲಿಲ್ಲ ಎನ್ನುವುದು ಅವರ ಸಾರಾಂಶ. ಬಜೆಟ್ ಅಂದ್ರೆ, ಆರ್ಥಿಕ ಮುನ್ನೋಟ. ಹಿಂದಿನ ಸರ್ಕಾರ ತೋರಿಸಿ ಕಾಗೆ ಹಾರಿಸೋ ಬಜೆಟ್ ಇದಾಗಿದೆ. ಚರ್ಚೆಯ ಸಂದರ್ಭದಲ್ಲಿ ಇದನ್ನು ವಿರೋಧಿಸುವ ಕೆಲಸ ಮಾಡ್ತೀವಿ. ವಿಶೇಷವಾಗಿ NEP ಕೈಬಿಡೋದಾಗಿ ಹೇಳಿದ್ದಾರೆ. ಈ ಮೂಲಕ ಇಡೀ ಶಿಕ್ಷಣ ವ್ಯವಸ್ಥೆಯನ್ನ ಅಲುಗಾಡಿಸುವ ಕೆಲಸ ಮಾಡಿದ್ದಾರೆ. ಭೌಗೋಳಿಕವಾಗಿ ಯಾವುದೇ ಭಾಗಕ್ಕೆ ನ್ಯಾಯ ಒದಗಿಸದ ಬಜೆಟ್ ಇದಾಗಿದೆ ಎಂದರು.
ಸಿದ್ದರಾಮಯ್ಯ ಅವರ ಶ್ರಮ ಬುದ್ದಿವಂತಿಕೆಯನ್ನ ಬಜೆಟ್ಗೆ ಉಪಯೋಗಿಸಿಲ್ಲ; ಬಿವೈ ವಿಜಯೇಂದ್ರ
ಈ ಕುರಿತು ‘ಸಿದ್ದರಾಮಯ್ಯ ಅವರ 14ನೇ ಬಜೆಟ್ ಸಾಕಷ್ಟು ನಿರೀಕ್ಷೆ ಇತ್ತು. ಆದ್ರೆ, ಇದೊಂದು ನಿರಾಶದಾಯಕ ಬಜೆಟ್ ಆಗಿದ್ದು, ಬಹುಶಃ ಡಿಕೆಶಿ ಅವರಿಗೂ ನಿರಾಶೆಯಾಗಿದೆ ಎಂದು ಬಿವೈ ವಿಜಯೇಂದ್ರ ಹೇಳಿದರು. ಡಿಕೆ ಶಿವಕುಮಾರ್ ಮೇಕೆದಾಟುಗಾಗಿ ಪಾದಯಾತ್ರೆ ಮಾಡಿದ್ರು, ಈಗ ಮೇಕೆದಾಟು, ಮಹಾದಾಯಿಗೆ ಅನುದಾನವೇ ಮೀಸಲಿಟ್ಟಿಲ್ಲ. ಈ ಮೂಲಕ ಡಿಕೆ ಶಿವಕುಮಾರ್ ಅವರ ಮೇಲೆ ಸೇಡು ತೀರಿಸಿಕೊಳ್ಳುವ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಶ್ರಮ ಬುದ್ದಿವಂತಿಕೆಯನ್ನ ಬಜೆಟ್ಗೆ ಉಪಯೋಗಿಸಿಲ್ಲ. ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದೆ ಎಂದರು.
ಇನ್ನಷ್ಟು ಬಜೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ