AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯತ್ನಾಳ್​-ಅರುಣ್ ಸಿಂಗ್ ರಹಸ್ಯ ಮಾತು: BSY ಮೇಲೆ ಇನ್ನಷ್ಟು ದಾಳಿಯ ಸಂಚು ರೂಪಿಸುವುದೇ? ಕಾಂಗ್ರೆಸ್ ಪ್ರಶ್ನೆ

ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್ ಹಾಗೂ ವಿಜಯಪುರ ನಗರ ಶಾಸಕ‌ ಬಸನಗೌಡ ಪಾಟೀಲ್‌ ಯತ್ನಾಳ್‌ ಮಂಗಳವಾರ ರಾತ್ರಿ ರಹಸ್ಯ ಮಾತುಕತೆ ನಡೆಸಿದ್ದು ತೀವ್ರ ಕುತೂಹಲ ಮೂಡಿಸಿದೆ. ಇದಕ್ಕೆ ಕಾಂಗ್ರೆಸ್ ಪ್ರಶ್ನೆಗಳು ಸುರಿಮಳೆಗೈದಿದೆ.

ಯತ್ನಾಳ್​-ಅರುಣ್ ಸಿಂಗ್ ರಹಸ್ಯ ಮಾತು: BSY ಮೇಲೆ ಇನ್ನಷ್ಟು ದಾಳಿಯ ಸಂಚು ರೂಪಿಸುವುದೇ? ಕಾಂಗ್ರೆಸ್ ಪ್ರಶ್ನೆ
Basangouda Patil Yatnal And Arun Singh
TV9 Web
| Updated By: ರಮೇಶ್ ಬಿ. ಜವಳಗೇರಾ|

Updated on:Nov 09, 2022 | 8:19 PM

Share

ಬೆಂಗಳೂರು/ವಿಜಯಪುರ: ಬಸನಗೌಡ ಪಾಟೀಲ್ ಯತ್ನಾಳ್  (Basangouda Patil Yatnal) ನಮ್ಮ ಪಕ್ಷದ ನಾಯಕರಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್(Arun Singh) ಹೇಳಿದ್ದರು. ಆದ್ರೆ, ಇದೀಗ ಯತ್ನಾಳ್​ ಜೊತೆ ಅರುಣ್ ಸಿಂಗ್ ರಹಸ್ಯವಾಗಿ ಮಾತುಕತೆ ನಡೆಸಿದ್ದು, ಬಿಜೆಪಿಯಲ್ಲಿ (BJP) ವಲಯದಲ್ಲಿ ಸಂಚಲನ ಮೂಡಿಸಿದೆ.

ಹೌದು…. ಯಡಿಯೂರಪ್ಪ ಸೇರಿದಂತೆ ಇತರೆ ಕೆಲ ಸ್ವಪಕ್ಷದ ನಾಯಕರ ಬಹಿರಂಗಾವಾಗಿಯೇ ನಿಷ್ಠುರವಾಗಿ ಹೇಳಿಕೆಗಳನ್ನು ನೀಡಿದ್ದರಿಂದ ಬಸನಗೌಡ ಪಾಟೀಲ್ ಯತ್ನಾಳ್ ಅವರು ನಮ್ಮ ಪಕ್ಷದ ನಾಯಕರಲ್ಲ ಎಂದು ಸ್ವತಃ ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದರು. ಆದ್ರೆ, ಇದೀಗ ಯತ್ನಾಳ್ ಜೊತೆ ಅರುಣ್ ಸಿಂಗ್ 15 ನಿಮಿಷದ ಗೌಪ್ಯ ಮಾತುಕತೆ ನಡೆಸಿದ್ದು ಸಂಚಲನ ಮೂಡಿಸಿದೆ. ಅಲ್ಲದೇ ಈ ಬಗ್ಗೆ ಕಾಂಗ್ರೆಸ್ ವ್ಯಂಗ್ಯವಾಡಿದೆ.

ಯಡಿಯೂರಪ್ಪನವರ ಆಪ್ತ, ಮಾಜಿ ಶಾಸಕ ಬಿಜೆಪಿಗೆ ಗುಡ್​ ಬೈ, ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ

ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಯತ್ನಾಳ್ ನಮ್ಮ ಪಕ್ಷದ ನಾಯಕರಲ್ಲ” ಎಂದಿದ್ದ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಯತ್ನಾಳ್‌ರ ಜೊತೆ ರಹಸ್ಯ ಮಾತುಕತೆ ಮಾಡಿದ್ದಾರೆ. ಇಂತಹ ಸದಾರಮೆ ನಾಟಕ ಬಿಜೆಪಿಗೆ ಮಾತ್ರ ಸಾದ್ಯವೇನೋ! BSY ಅವರಿಗೆ ಮಸಿ ಬಳಿಯಲು ಬಿಜೆಪಿಯೇ ಯತ್ನಳರನ್ನು ಮುಂದೆ ಬಿಟ್ಟಿದೆಯೇ? ಇದು ತೊಟ್ಟಿಲನ್ನೂ ತೂಗುತ್ತಾ, ಮಗುವನ್ನೂ ಚಿವುಟುವ ಆಟವೇ ಎಂದು ಪ್ರಶ್ನಿಸಿದೆ.

ಯತ್ನಾಳರನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ, ಅವರು ನಮ್ಮ ಪಕ್ಷದ ನಾಯಕರಲ್ಲ ಎಂದಿದ್ದ ಅರುಣ್ ಸಿಂಗ್ ಈಗ ಅದೇ ಯತ್ನಳರೊಂದಿಗೆ ಗಂಭೀರವಾಗಿ ರಹಸ್ಯ ಮಾತುಕತೆ ನಡೆಸಿರುವುದೇಕೆ? ಆ ರಹಸ್ಯ ಏನು ಎಂದು ಕರ್ನಾಟಕ ಬಿಜೆಪಿಗೆ ಪ್ರಶ್ನಿಸಿರುವ ಕಾಂಗ್ರೆಸ್, BSY ಮೇಲೆ ಇನ್ನಷ್ಟು ದಾಳಿಯ ಸಂಚು ರೂಪಿಸುವುದೇ? ಸಿಎಂ ಹುದ್ದೆಯ ಬಲವಾದ ಆಕಾಂಕ್ಷಿಯಾಗಿರುವ ಯತ್ನಾಳರ ಆಸೆ ಈಡೇರಿಸುವ ಭೇಟಿಯೇ? ಎಂದು ಟ್ವೀಟ್ ಮಾಡಿದೆ.

ಯತ್ನಾಳರೊಂದಿಗೆ ಖಾಸಾ ಖಾಸಾ ಮಾತುಕತೆ ನಡೆಸಿರುವ ಅರುಣ್ ಸಿಂಗ್ ಅವರೇ ಬಿಜೆಪಿಗೆ ಯತ್ನಾಳ್ ನೀಡಿದ ‘ಬ್ಲಾಕ್ಮೇಲ್ ಜನತಾ ಪಾರ್ಟಿ’ ಎಂಬ ಹೆಸರನ್ನು ಒಪ್ಪುವಿರಾ? ಸಿಎಂ ಹುದ್ದೆಗೆ ₹2,500 ಕೋಟಿ ಸಲ್ಲಿಸಬೇಕು ಎಂಬ ಹೇಳಿಕೆ ಅನುಮೋದಿಸುತ್ತೀರಾ? ಹಣ ನೀಡಿ ಮಂತ್ರಿಯಾದವರಿದ್ದಾರೆ ಎಂಬ ಯತ್ನಾಳ್ ಆರೋಪ ಒಪ್ಪುವಿರಾ? ಎಂದು ಕಾಂಗ್ರೆಸ್ ಸಾಲು- ಸಾಲು ಪ್ರಶ್ನೆಗಳನ್ನು ಕೇಳಿದೆ.

Published On - 8:15 pm, Wed, 9 November 22

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!