ರೈತ ಮಹಿಳೆಯರಿಗೆ ತಿಂಗಳಿಗೆ 1 ಸಾವಿರ ರೂ., ರೈತ ಮೃತಪಟ್ಟರೆ 2 ಲಕ್ಷ ರೂ. ಕೊಡಲು ತೀರ್ಮಾನ: ಯಡಿಯೂರಪ್ಪ

ಮತ್ತೆ ಬಿಜೆಪಿ ಸರ್ಕಾರ ರಚನೆಯಾದರೆ ರಾಜ್ಯದಲ್ಲಿ ಮೊದಲ ಬಾರಿಗೆ ರೈತರಿಗೆ ಜೀವ ವಿಮೆ‌ ಜಾರಿಗೆ ತರುತ್ತೇವೆ, ಬಡರೈತ ಮಹಿಳೆಯರಿಗೆ ಇನ್ಮುಂದೆ ತಿಂಗಳಿಗೆ 1000 ಕೊಡಲು ತೀರ್ಮಾನ ಮಾಡಿದ್ದೇವೆ. ತಾಯಂದಿರು ಇದನ್ನು ಮನೆ ಮನೆಗೆ ಹೋಗಿ ಹೇಳಬೇಕು ಎಂದು ಯಡಿಯೂರಪ್ಪ ಹೇಳಿದರು.

ರೈತ ಮಹಿಳೆಯರಿಗೆ ತಿಂಗಳಿಗೆ 1 ಸಾವಿರ ರೂ., ರೈತ ಮೃತಪಟ್ಟರೆ 2 ಲಕ್ಷ ರೂ. ಕೊಡಲು ತೀರ್ಮಾನ: ಯಡಿಯೂರಪ್ಪ
ಬಿ.ಎಸ್.ಯಡಿಯೂರಪ್ಪ ಮತ್ತು ರಮೇಶ್ ಜಾರಕಿಹೊಳಿ
Follow us
Rakesh Nayak Manchi
|

Updated on:Mar 15, 2023 | 4:04 PM

ಬಾಗಲಕೋಟೆ: ಮತ್ತೆ ಬಿಜೆಪಿ ಸರ್ಕಾರ ರಚನೆಯಾದರೆ ರಾಜ್ಯದಲ್ಲಿ ಮೊದಲ ಬಾರಿಗೆ ರೈತರಿಗೆ ಜೀವ ವಿಮೆ‌ ಜಾರಿಗೆ ತರುತ್ತೇವೆ. ರೈತ ಮಹಿಳೆಯರಿಗೆ ತಿಂಗಳಿಗೆ 1 ಸಾವಿರ ರೂಪಾಯಿ ನೀಡುತ್ತೇವೆ. ತಾಯಂದಿರು ಇದನ್ನು ಮನೆ ಮನೆಗೆ ಹೋಗಿ ಹೇಳಬೇಕು. ಮಾತ್ರವಲ್ಲದೆ, ಆಕಸ್ಮಿಕವಾಗಿ ರೈತ ಮೃತಪಟ್ಟರೆ ಅವರ ಕುಟುಂಬಕ್ಕೆ 2 ಲಕ್ಷ ರೂ. ಕೊಡಲು ತೀರ್ಮಾನ ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿಯೂ ಆಗಿರುವ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ (BS Yediyurappa) ಹೇಳಿದರು. ಜಿಲ್ಲೆಯ ಇಳಕಲ್​ನಲ್ಲಿ ನಡೆದ ಬಿಜೆಪಿ ಸಂಕಲ್ಪ ಯಾತ್ರೆ ಸಮಾವೇಶದಲ್ಲಿ (BJP Sankalpa Yatra Convention At Ilkal) ಭರವಸೆ ನೀಡಿದ ಅವರು, ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಕೊಡುತ್ತಿದ್ದೇವೆ. ನೀವೆಲ್ಲ ಆಶೀರ್ವಾದ ಮಾಡಿ ಇಡೀ ಜಿಲ್ಲೆಯಲ್ಲಿ ಬಿಜೆಪಿ ಗೆಲ್ಲಿಸಿ ಎಂದು ಮನವಿ ಮಾಡಿದರು.

ನೇಕಾರರಿಗೆ ನಾವು (ಬಿಜೆಪಿ ಸರ್ಕಾರ) ಕೊಟ್ಟಷ್ಟು ಸವಲತ್ತು ಬೇರೆ ಯಾರು ಕೊಟ್ಟಿಲ್ಲ. ಈ ಬಗ್ಗೆ ನಾಳೆಯಿಂದ ಮನೆ ಮನೆಗೆ ಹೋಗಿ ಕೇಳಿ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೌಲಭ್ಯಗಳು ಒಂದೇ ಒಂದು ಮನೆಗೆ ಸಿಕ್ಕಿಲ್ಲ ಅನ್ನೋದನ್ನ ತೋರಿಸಿ ಎಂದು ಸವಾಲ್ ಹಾಕಿದರು. ನಾನು ನಿಮಗೆ ಕೈ ಜೋಡಿಸಿ ಪ್ರಾರ್ಥನೆ ಮಾಡುತ್ತೇನೆ. ದೊಡ್ಡನಗೌಡ ಪಾಟೀಲ ಸಿಕ್ಕಿರುವುದು ನಿಮ್ಮ ಪುಣ್ಯ. ಮಾದರಿಯಾಗಿ ಕೆಲಸ ಮಾಡುತ್ತಿದ್ದಾರೆ, ಈ ಸಾರಿ ಬಿಜೆಪಿ ಗೆಲ್ಲಬೇಕು. ನಿಮ್ಮೆಲ್ಲರ ಆಶೀರ್ವಾದದ ಮೂಲಕ ಇಡೀ ಜಿಲ್ಲೆಯಲ್ಲಿ ಬಿಜೆಪಿ ಗೆಲ್ಲಿಸಿ ಎಂದರು.

ಇದನ್ನೂ ಓದಿ: Bengaluru: ಯಡಿಯೂರಪ್ಪರಿಂದ ರಾಜ್ಯದಲ್ಲಿ ಅಭಿವೃದ್ಧಿ ಪರ್ವ ಆರಂಭ; ಜೆಪಿ ನಡ್ಡಾ

ನಿಜವಾದ ಕೋಮುವಾದಿ ಪಕ್ಷ ಕಾಂಗ್ರೆಸ್: ರಮೇಶ್ ಜಾರಕಿಹೊಳಿ

ಸಮಾವೇಶದಲ್ಲಿ ಮಾತನಾಡಿದ ಶಾಸಕ ರಮೇಶ್ ಜಾರಕಿಹೊಳಿ, ನಿಜವಾದ ಕೋಮುವಾದಿ ಪಕ್ಷ ಅಂದರೆ ಕಾಂಗ್ರೆಸ್, ಸುಳ್ಳು ಹೇಳುವ ಈ ಪಕ್ಷವನ್ನು ಮನೆಗೆ ಕಳಿಸುವ ಕಾಲ ಬಂದಿದೆ ಎಂದು ಹೇಳಿ ನೇರವಾಗಿ ವಿಜಯಾನಂದ ಕಾಶಪ್ಪನವರ್​ ಅವರ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಕಾಶಪ್ಪನವರ್​ಗೆ ಬೇರೆ ಸಮುದಾಯದವರ ಮತ ಕೇಳುವ ಹಕ್ಕಿಲ್ಲ. ಕಾಶಪ್ಪನವರ್​ ಅಪ್ಪ ಒಳ್ಳೆಯವರಿದ್ದರು. ಆದರೆ ಕಾಶಪ್ಪನವರ್​ಗೆ SC, ST ಸಮುದಾಯದವರು ಮತ ಹಾಕಬಾರದು. ಏಕೆಂದರೆ ಆತ ಬೆಳಗಾವಿ ಜಿಲ್ಲೆಯಲ್ಲಿ ನಿಮಗೆ ಬಹಳ ಅವಮಾನ ಮಾಡಿದ್ದಾನೆ. ವಿಜಯಾನಂದ ಕಾಶಪ್ಪನವರ್ ಶಾಸಕನಾಗಲು ಲಾಯಕ್ಕಿಲ್ಲ. ಚುನಾವಣೆಯಲ್ಲಿ ಕಾಶಪ್ಪನವರ್​ನನ್ನು ಸೋಲಿಸುವಂತೆ ಕರೆ ನೀಡಿದರು. ಅಲ್ಲದೆ, ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕ ವಿಧಾನಸಭೆ ಚುನಾವಣೆಗೆ ರಣ ಕಹಳೆ ಮೊಳಗಿಸಿರುವ ಬಿಜೆಪಿ, ವಿಜಯ ಸಂಕಲ್ಪ ಯಾತ್ರೆ ಮೂಲಕ ಮತದಾರರನ್ನು ಸೆಳೆಯುತ್ತಿದೆ. ಪಕ್ಷದ ಮಹತ್ವದ ಚುನಾವಣಾ ಪ್ರಚಾರ ಅಭಿಯಾನವಾಗಿರುವ ವಿಜಯ ಸಂಕಲ್ಪ ಯಾತ್ರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಚಾಲನೆ ನೀಡಿದ್ದರು. ರಾಜ್ಯ ಮತ್ತು ಕೇಂದ್ರ ಡಬಲ್​ ಇಂಜಿನ್​ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ದೃಷ್ಟಿಯಿಂದ ಬಿಜೆಪಿ 224 ವಿಧಾನಸಭಾ ಕ್ಷೇತ್ರಗಳಲ್ಲಿ ವಿಜಯ ಸಂಕಲ್ಪ ರಥ ಯಾತ್ರೆ ಮಾಡುತ್ತಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:01 pm, Wed, 15 March 23

ರೈಲಿನಡಿ ಸಿಲುಕುತ್ತಿದ್ದ ವೃದ್ಧರನ್ನು ರಕ್ಷಿಸಿದ ಬಂಗಾಳದ ಕಾನ್‌ಸ್ಟೆಬಲ್
ರೈಲಿನಡಿ ಸಿಲುಕುತ್ತಿದ್ದ ವೃದ್ಧರನ್ನು ರಕ್ಷಿಸಿದ ಬಂಗಾಳದ ಕಾನ್‌ಸ್ಟೆಬಲ್
ಬಾಡಿಗೆ ಮನೆಯಲ್ಲಿದ್ದೇನೆ, ಸಂಭಾವನೆಯಿಂದ ಸಾಲ ತೀರಿಸ್ತೀನಿ: ತ್ರಿವಿಕ್ರಮ್
ಬಾಡಿಗೆ ಮನೆಯಲ್ಲಿದ್ದೇನೆ, ಸಂಭಾವನೆಯಿಂದ ಸಾಲ ತೀರಿಸ್ತೀನಿ: ತ್ರಿವಿಕ್ರಮ್
ಜನಪ್ರತಿನಿಧಿಗಳು ಅಧಿಕಾರಿಗಳ ಮೇಲೆ ರೇಗುವುದು ಯಾಕೆ?
ಜನಪ್ರತಿನಿಧಿಗಳು ಅಧಿಕಾರಿಗಳ ಮೇಲೆ ರೇಗುವುದು ಯಾಕೆ?
ಬಿಜೆಪಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಬಹುದೊಡ್ಡ ಪಕ್ಷವಾಗಿ ಬೆಳೆದಿದೆ: ಸಂಸದ
ಬಿಜೆಪಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಬಹುದೊಡ್ಡ ಪಕ್ಷವಾಗಿ ಬೆಳೆದಿದೆ: ಸಂಸದ
ಹನುಮಂತುಗೆ ಹೊಡೆದರೂ ಭವ್ಯಾನ ಹೊರಗೆ ಹಾಕಲಿಲ್ಲ ಯಾಕೆ? ಮಂಜು ಹೇಳಿದ್ದೇನು?
ಹನುಮಂತುಗೆ ಹೊಡೆದರೂ ಭವ್ಯಾನ ಹೊರಗೆ ಹಾಕಲಿಲ್ಲ ಯಾಕೆ? ಮಂಜು ಹೇಳಿದ್ದೇನು?
ಜಲಮಂಡಳಿ ನಿರ್ವಹಣೆಗೆ ಹಣ ಹೊಂದಿಸಲಾಗುತ್ತಿಲ್ಲ, ದರಯೇರಿಕೆ ಅನಿವಾರ್ಯ: ಸಚಿವ
ಜಲಮಂಡಳಿ ನಿರ್ವಹಣೆಗೆ ಹಣ ಹೊಂದಿಸಲಾಗುತ್ತಿಲ್ಲ, ದರಯೇರಿಕೆ ಅನಿವಾರ್ಯ: ಸಚಿವ
ವಲಸಿಗರ ವಿಚಾರದಲ್ಲಿ ಭಾರತ ಸೂಕ್ತ ಕ್ರಮ ಕೈಗೊಳ್ಳಲಿದೆ; ಟ್ರಂಪ್ ಹೇಳಿಕೆ
ವಲಸಿಗರ ವಿಚಾರದಲ್ಲಿ ಭಾರತ ಸೂಕ್ತ ಕ್ರಮ ಕೈಗೊಳ್ಳಲಿದೆ; ಟ್ರಂಪ್ ಹೇಳಿಕೆ
ಇಕ್ಬಾಲ್ ಹುಸ್ಸೇನ್ ಹೇಳಿಕೆಗೆ ಕೌಂಟರ್ ನೀಡಿದ ಸಚಿವ ರಾಜಣ್ಣ
ಇಕ್ಬಾಲ್ ಹುಸ್ಸೇನ್ ಹೇಳಿಕೆಗೆ ಕೌಂಟರ್ ನೀಡಿದ ಸಚಿವ ರಾಜಣ್ಣ
ಕಾಂಗ್ರೆಸ್ ಪಕ್ಷ ಒಂದು ಸಿಟಿ ಬಸ್​ನಂತೆ, ಯಾರು ಬೇಕಾದರೂ ಹತ್ತಬಹುದು: ಲಾಡ್
ಕಾಂಗ್ರೆಸ್ ಪಕ್ಷ ಒಂದು ಸಿಟಿ ಬಸ್​ನಂತೆ, ಯಾರು ಬೇಕಾದರೂ ಹತ್ತಬಹುದು: ಲಾಡ್
150 ರೂ.ಗೆ ಕೆಲಸ ಮಾಡಿದ್ದ ಉಗ್ರಂ ಮಂಜು; ಬಿಗ್ ಬಾಸ್​ನಿಂದ ದೊಡ್ಡ ಸಂಭಾವನೆ
150 ರೂ.ಗೆ ಕೆಲಸ ಮಾಡಿದ್ದ ಉಗ್ರಂ ಮಂಜು; ಬಿಗ್ ಬಾಸ್​ನಿಂದ ದೊಡ್ಡ ಸಂಭಾವನೆ