ಜೆಡಿಎಸ್ ಶಾಸಕರಿಗೆ ಕಾಂಗ್ರೆಸ್ ಗಾಳ: ಆಪರೇಷನ್ ಹಸ್ತ ಬಹಿರಂಗಪಡಿಸಿದ ಶಾಸಕರು!
ಜೆಡಿಎಸ್ ಶಾಸಕರಾದ ವೆಂಕಟ ಶಿವಾರೆಡ್ಡಿ ಹಾಗೂ ಸಮೃದ್ದಿ ಮಂಜುನಾಥ್ ಅವರು ಕಾಂಗ್ರೆಸ್ ಸೇರುತ್ತಾರೆಂದು ಶಾಸಕ ಕೊತ್ತೂರು ಮಂಜುನಾಥ್ ಸ್ಫೋಟಕ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿತ್ತು. ಅಲ್ಲದೇ ಕೋಲಾರ ಜಿಲ್ಲಾ ರಾಜಕಾರಣದಲ್ಲಿ ಕಂಪನ ಸೃಷ್ಟಿಸಿತ್ತು. ಇದೀಗ ಸ್ವತಃ ಜೆಡಿಎಸ್ ಶಾಸಕರೇ ಸ್ಪಷ್ಟನೆ ನೀಡಿದ್ದು, ಎಲ್ಲಾ ಅಂತೆ-ಕಂತೆಗಳಿಗೆ ತೆರೆ ಎಳೆದಿದ್ದಾರೆ.
ಕೋಲಾರ, (ಫೆಬ್ರವರಿ 09): ಜೆಡಿಎಸ್ ಶಾಸಕರಾದ ವೆಂಕಟ ಶಿವಾರೆಡ್ಡಿ (Venkata Shivareddy) ಹಾಗೂ ಸಮೃದ್ದಿ ಮಂಜುನಾಥ್(samruddhi manjunath )ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎನ್ನುವ ಸುದ್ದಿಗೆ ಇದೀಗ ಕ್ಲ್ಯಾರಿಟಿ ಸಿಕ್ಕಿದೆ. ಲೋಕಸಭಾ ಚುನಾವಣೆ ಹೊತ್ತಲ್ಲಿ ಕೋಲಾರ ಜಿಡಿಎಸ್ ಶಾಸಕು ಕಾಂಗ್ರೆಸ್ ಸೇರುತ್ತಾರೆ ಎನ್ನುವ ಸುದ್ದಿ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿತ್ತು.ಇದೀಗ ಇದಕ್ಕೆ ಶಾಸಕರಾದ ವೆಂಕಟಶಿವಾರೆಡ್ಡಿ ಮತ್ತು ಸಮೃದ್ದಿ ಮಂಜುನಾಥ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಆದಿಯಾಗಿ ಯಾರೆಲ್ಲಾ ಆಹ್ವಾನ ನೀಡಿದ್ದಾರೋ ಅವರ ಹೆಸರನ್ನು ಬಹಿರಂಗಪಡಿಸಿದ್ದಾರೆ.
ಈ ಬಗ್ಗೆಕೋಲಾರದಲ್ಲಿ ಮಾತನಾಡಿದ ಮುಳಬಾಗಿಲು ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸೋತು ತೋಟದಲ್ಲಿ ಇದ್ದಾರೆ. ತೋಟದಲ್ಲಿ ಕುಳಿತು ಈ ಸ್ಕೆಚ್ ಹಾಕಿದ್ದಾರೆ. ಜೆಡಿಎಸ್ನಿಂದ ಎಂಪಿ ಸ್ಪರ್ಧೆಗೆ ಆಫರ್ ಇದೆ, ಆದ್ರೆ ಫೈನಲ್ ಮಾಡಿಲ್ಲ. ಕಾಂಗ್ರೆಸ್ ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ, ನಂಜೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್ ನನಗೆ ಆಹ್ವಾನ ನೀಡಿದ್ದಾರೆ. JDSನ 19 ಶಾಸಕರು ನೆಮ್ಮದಿಯಾಗಿ ಇದ್ದೇವೆ. ಸಿಎಂ ಹಾಗೂ ಡಿಕೆಶಿ ಕೂಡ ಪಕ್ಷ ಸೇರ್ಪಡೆಗೆ ನನಗೆ ಆಹ್ವಾನ ನೀಡಿದ್ದಾರೆ. ಮೂರ್ನಾಲ್ಕು ತಿಂಗಳ ಹಿಂದೆ ದೆಹಲಿಗೆ ಬರಲು ನನಗೆ ಆಹ್ವಾನ ನೀಡಿದ್ದರು ಎಂದು ಹೊಸ ಬಾಂಬ್ ಸಿಡಿಸಿದರು.
ಇದನ್ನೂ ಓದಿ: ಈ ಬಾರಿ ಲೋಕಸಭೆಗೆ ಕುಮಾರಸ್ವಾಮಿ ಸ್ಪರ್ಧಿಸುವ ಸುಳಿವು ನೀಡಿದ ದೇವೇಗೌಡ, ಯಾವ ಕ್ಷೇತ್ರದಿಂದ?
ಜೆಡಿಎಸ್ ಬಿಡುವ ಕುರಿತು ಬಹಿರಂಗವಾಗಿ ನಾನು ಹೇಳಿಕೆ ನೀಡಿಲ್ಲ. ಅನುದಾನ ಕೇಳುವುದಕ್ಕೆ ಸಿಎಂರನ್ನು ಭೇಟಿ ಮಾಡೋದು ತಪ್ಪಾ? ಭೇಟಿ ಮಾಡುವುದು ತಪ್ಪು ಅನ್ನೋದಾದ್ರೆ ಮುಖ್ಯಮಂತ್ರಿ ಹೇಳಲಿ. ಅನುದಾನ ಕುರಿತು ಸಿಎಂ, ಡಿಸಿಎಂರನ್ನು ಭೇಟಿ ಮಾಡಿದ್ದೇನೆ ಅಷ್ಟೇ. ಜಿಲ್ಲೆಯ ಶಾಸಕರು ಕಾಂಗ್ರೆಸ್ ಸೇರಿಕೊಳ್ಳಿ ಎಂದು ಆಹ್ವಾನ ನೀಡಿದ್ದಾರೆ. ಆದ್ರೆ, ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರೋದು ಸತ್ಯಕ್ಕೆ ದೂರವಾದ ವಿಚಾರ ಎಂದು ಸ್ಪಷ್ಟಪಡಿಸಿದರು.
ಶಾಸಕ ವೆಂಕಟಶಿವಾರೆಡ್ಡಿ ಸ್ಪಷ್ಟನೆ
ಇನ್ನು ಈ ಬಗ್ಗೆ ಶ್ರೀನಿವಾಸಪುರ ಕ್ಷೇತ್ರದ JDS ಶಾಸಕ ವೆಂಕಟಶಿವಾರೆಡ್ಡಿ ಪ್ರತಿಕ್ರಿಯಿಸಿ, ನಾನು ಜೆಡಿಎಸ್ ಪಕ್ಷ ತೊರೆಯುವಂತಹ ಪರಿಸ್ಥಿತಿ ಉದ್ಭವವಾಗಿಲ್ಲ. ನಾನು ಎಲ್ಲಿದ್ದೇನೋ ಅಲ್ಲೇ ಇರುತ್ತೇನೆ, JDSನಲ್ಲೇ ಸಂತಸವಾಗಿದ್ದೇನೆ. ಕಾಂಗ್ರೆಸ್ನವರು ನನ್ನನ್ನು ಪಕ್ಷಕ್ಕೆ ಸ್ವಾಗತಿಸಿರುವುದಕ್ಕೆ ಅಭಿನಂದಿಸುವೆ ಎಂದರು.
ಇನ್ನು ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಮಾತನಾಡಿ. ಜೆಡಿಎಸ್ ಪಕ್ಷ ಬಿಟ್ಟು ಹೋದ ಮಾಜಿ ಶಾಸಕ ಶ್ರೀನಿವಾಸಗೌಡರಿಗೆ ಯಾವ ಗತಿ ಬಂತು ಅದೇ ಗತಿ ಪಕ್ಷ ಬಿಟ್ಟವರಿಗೆ ಬರುತ್ತೆ. ಗುಬ್ಬಿ ಶ್ರೀನಿವಾಸ ಅವರಿಗೆ ಕ್ಯಾಬಿನೆಟ್ ಸಚಿವರನ್ನಾಗಿ ಮಾಡಲಾಗಿತ್ತು. ಕಾಂಗ್ರೆಸ್ ಹೋದ ಮೇಲೆ ಯಾವ ಸ್ಥಾನ ಕೊಟ್ಟಿದ್ದಾರೆ. ಬೋರ್ಡ್ ಕೊಟ್ಟಿದ್ಧಾರೆ ಡಬ್ಬ ಕೆಎಸ್ ಆರ್ ಟಿಸಿ ಬಸ್ ಗಳಿಗೆ ಗಾಳಿ ಹಿಡಿಯಲು. ಏಕೆ ಬೇಕಾಗಿತ್ತು, ಇಲ್ಲಿ ಗೌರವಯುತವಾಗಿ ಇರುತ್ತಿದ್ದರು ಎಂದರು.
ಡಿಕೆಶಿ, ಸಿಎಂ ಗುಂಪು ಯಾವ ಗುಂಪುನಲ್ಲಿ ಗುರುತಿಸಿಕೊಂಡಿದ್ದವರಿಗೆ ಮಂತ್ರಿ ಸಿಕ್ಕಿದೆ, ಶ್ರೀನಿವಾಸಗೌಡರಿಗೆ ಈ ಪರಿಸ್ಥಿತಿ ಬರಬಾರದಾಗಿತ್ತು. ದ್ರೋಹ ಮಾಡಿದವರು ಯಾರು ಚನ್ನಾಗಿ ಆಗಿಲ್ಲ, ಕಾಂಗ್ರೆಸ್ ನವರು ಎಷ್ಟು ಸರ್ಕಸ್ ಮಾಡಿದರೂ ಸಹ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿನೇ ಗೆಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ