ಹಾಸನ: ಅರಸೀಕೆರೆಯಲ್ಲಿ ಮತ್ತೆ JDS ಗೆಲ್ಲುವವರೆಗೂ ನಾನು ನಿದ್ದೆ ಮಾಡಲ್ಲ. ಏನಾಗುತ್ತೋ ನೋಡೇ ಬಿಡೋಣ, ನಾವು ಸುಮ್ಮನೇ ಕೂರುವುದಿಲ್ಲ ಎಂದು ಸಂಸದ ಪ್ರಜ್ವಲ್ ರೇವಣ್ಣ (MP Prajwal Revanna) ತೊಡೆತಟ್ಟಿದಂತೆ ಕಾಣುತ್ತಿದೆ. ಜಿಲ್ಲೆಯ ಅರಸೀಕೆರೆಯಲ್ಲಿ ಜೆಡಿಎಸ್ ಕಛೇರಿ ಉದ್ಘಾಟನೆ ಮಾಡಿದ ಬಳಿಕ ಅವರು ಮಾತನಾಡಿ, ಫೆಬ್ರವರಿ 12ರಂದು ಅರಸೀಕೆರೆ ಕಾರ್ಯಕರ್ತರ ಸಭೆ ನಿಗದಿಯಾಗಿದೆ. ಹೆಚ್.ಡಿ. ಕುಮಾರಸ್ವಾಮಿ ಪಂಚರತ್ನ ಯಾತ್ರೆ ಬಂದಾಗ ಹೆಚ್ಚಿನ ಜನರನ್ನು ಸೇರಿಸಬೇಕು. ಟೊಂಕಕಟ್ಟಿ ನಿಂತು ಲಕ್ಷಾಂತರ ಜನರನ್ನು ಸೇರಿಸಿ ಕೆಲಸ ಮಾಡಬೇಕು. ಕಾರ್ಯಕರ್ತರಿಗೆ ಯಾವ ರೀತಿ ಒತ್ತಡ ಹೇರುತ್ತಿದ್ದಾರೆಂದು ನನಗೆ ಗೊತ್ತು. ನಮ್ಮ ಕಾರ್ಯಕರ್ತರು ಯಾರೂ ಭಯಪಡುವ ಅಗತ್ಯವಿಲ್ಲ ಹೇಳಿದರು.
ನಾನು ಸಂಸದನಾಗಿ ಕ್ಷೇತ್ರದ ಎಲ್ಲಾ ಹಳ್ಳಿಗೆ ಹೋಗಲು ಆಗಲ್ಲ. ಹಳ್ಳಿಗೆ ಬರೋಕೆ ನನಗೆ ಮುಜುಗರ ಇಲ್ಲಾ, ಖಂಡಿತಾ ಬರಬೇಕು ಎನ್ಮೋ ಆಸೆ ಇದೆ. ನಾನು ಸಾಕಷ್ಟು ಹೋರಾಟ ಮಾಡಿ ಕಡೆಗೆ 28ನೇ ವಯಸ್ಸಿಗೆ ಸಂಸದನಾದೆ. ದೇವೇಗೌಡರು ಅವರ ಸ್ಥಾನ ನನಗೆ ಬಿಟ್ಟು ಕೊಟ್ಟು ನನಗೆ ಅವಕಾಶ ನೀಡಿದ್ರು. ನನ್ನ ಚುನಾವಣೆ ಕೇಸ್ ನಡೀತಿದೆ ಹಾಗಾಗಿ ನಾನು ಬರೋಕೆ ಆಗಿರಲಿಲ್ಲ. ಶಿವಲಿಂಗೇಗೌಡ ಅವರ ಹತ್ರ ಮಾತಾಡಿ ತಪ್ಪು ನಿರ್ದಾರ ಮಾಡಬೇಡಿ. ಯಾರೊ ನಾಲ್ಕು ಜನ ಹೇಳಿದ ಮಾತು ಕೇಳಬೇಡಿ ಎಂದು ಹೇಳಿದ್ದೆ. ಪಾಪ ಅವರಿಗೂ ಗೊಂದಲ ಇದೆ ನೀವು ವಾಪಸ್ ಬರೋದಾದ್ರೆ ಖಂಡಿತಾ ನಾವು ನಿಮ್ಮ ಜೊತೆ ಇದೀವಿ. ದೇಹ ಮಾತ್ರ ಬರೋದಲ್ಲ ಮಾನಸಿಕವಾಗಿ ಬರವೇಕು ಎಂದು ಹೇಳಿದರು.
ಇದನ್ನೂ ಓದಿ: ನಮ್ಮ ಪಕ್ಷದ ಬಗ್ಗೆ ಮಾತನಾಡಲು ಹೆಚ್ಡಿ ಕುಮಾರಸ್ವಾಮಿಗೆ ಯಾವ ನೈತಿಕತೆಯಿದೆ: ಬಿ.ಸಿ.ಪಾಟೀಲ್ ಪ್ರಶ್ನೆ
ಅವರು ಜಾತಿವಾರು ಮತ ಆಗುತ್ತೆ ಅಶೋಕ್ ಆಕಡೆ ಇದಾರೆ ಎಂದು ಜಾತಿ ವಿಚಾರ ಹೇಳಿದ್ರು. ಅವರ ಮಾತಿನಂತೆ ಅಶೋಕ ಅವರನ್ನೇ ಪಕ್ಷಕ್ಕೆ ಸೇರಿಸಿಕೊಂಡೆವು. ಸಾಕಷ್ಟು ಪ್ರಯತ್ನ ನಡೆದಿದೆ, ನಾವು ಪಕ್ಷ ಉಳಿಸಲು ಕೆಲಸ ಮಾಡಿದ್ದೇವೆ. ಅದು ಬಿಟ್ಟು ಶಿವಲಿಂಗೇಗೌಡ ಅವರ ವಿರುದ್ಧ ಏನು ಮಾಡಿಲ್ಲ. ನಮ್ಮ ಕಾರ್ಯಕರ್ತರು ಈಗಲೂ ಗಟ್ಡಿಯಾಗಿ ಇದಾರೆ. ನಿಮ್ಮನ್ನ ಗೆಲ್ಲಿಸಿಕೊಂಡು ಬರುತ್ರೇವೆ. ಇದು ಆಗದಿದ್ದರೆ ನಾವು ಸುಮ್ಮನೇ ಕೂರೋದಿಲ್ಲ. ಅರಸೀಕೆರೆಯಲ್ಲಿ ನಿಷ್ಟಾವಂತ ಕಾರ್ಯಕರ್ತರು ಇದಾರೆ ಎಂದರು.
ಇದನ್ನೂ ಓದಿ: Karwar: ಒಂದೇ ದಿನ ದೇವಸ್ಥಾನ, ದರ್ಗಾ ಮತ್ತು ಚರ್ಚ್ಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಹೆಚ್ ಡಿ ಕುಮಾರಸ್ವಾಮಿ
ಸ್ತ್ರಿಶಕ್ತಿ ಸಂಘದ ಸಾಲಾ ಮನ್ನಾ ಮಾಡುತ್ತೇವೆ ಎಂದು ಹೆಚ್.ಡಿ. ಕುಮಾರಸ್ವಾಮಿ ಅವರು ಈಗಾಗಲೇ ಘೋಷಣೆ ಮಾಡಿದ್ದಾರೆ. ಪ್ರಜ್ವಲ್, ಸೂರಜ್ ಪ್ರತಿ ಹಳ್ಳಿಗೆ ಬರ್ತಾರೆ, ನಾನು ಇರ್ತಿನಿ. ಆರು ತಿಂಗಳಲ್ಲಿ ದೇವೇಗೌಡರು ಒಬ್ಬರನ್ನು ಶಾಸಕನಾಗಿ ಮಾಡಿದ ಉದಾಹರಣೆ ಇದೆ. ಅರಸೀಕೆರೆ ಜನ ಹಣ ಕೊಟ್ಟರೆ ಮಾತ್ರ ಓಟು ಅಂತಾರೆ ಕೆಲವರು. ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ಮಾತಿಗೆ ಬೆಲೆ ಇಲ್ಲಾ ಅಂತಾರೆ. ನೋಡೋಣ ಹಾಗಿದ್ರೆ ಹಣ ನಡೆಯುತ್ತಾ ಜನರ ಬಲ ನಡೆಯುತ್ತಾ ಎಂದು ಸವಾಲು ಹಾಕಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:23 pm, Thu, 9 February 23