ಅದಾನಿ, ಅಂಬಾನಿಯನ್ನ ಹುಟ್ಟಿಸಿದ್ದು ನರೇಂದ್ರ ಮೋದಿನಾ?; ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ಸಂಸದ ಪ್ರತಾಪ್ ಸಿಂಹ

ಸಿದ್ದರಾಮಯ್ಯನವರು ಯಾವ ಜಮೀನಿನಲ್ಲಿ ಬೆಳೆ ಬೆಳೆದಿದ್ದಾರೆ. ಯಾವ ಬೆಳೆ ಬೆಳೆದು ಸಿದ್ದರಾಮಯ್ಯನವರು ಹಣ ಮಾಡಿದರು? ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇವತ್ತು ಶ್ರೀಮಂತರಾಗಿಲ್ವಾ? ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.

ಅದಾನಿ, ಅಂಬಾನಿಯನ್ನ ಹುಟ್ಟಿಸಿದ್ದು ನರೇಂದ್ರ ಮೋದಿನಾ?; ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ಸಂಸದ ಪ್ರತಾಪ್ ಸಿಂಹ
ಪ್ರತಾಪ್ ಸಿಂಹ
Edited By: sandhya thejappa

Updated on: Apr 21, 2022 | 12:58 PM

ಮೈಸೂರು: ಅಂಬಾನಿ, ಅದಾನಿ ಸಂಪತ್ತಿನ ಬಗ್ಗೆ ಪ್ರಶ್ನೆ ಮಾಡಿದ್ದ ಸಿದ್ದರಾಮಯ್ಯಗೆ (Siddaramaiah) ಬಿಜೆಪಿ ಸಂಸದ ಪ್ರತಾಪ್ ಸಿಂಹ (Prathap Simha) ಟಾಂಗ್ ಕೊಟ್ಟಿದ್ದಾರೆ. ಸಿದ್ದರಾಮಯ್ಯನವರು ಯಾವ ಜಮೀನಿನಲ್ಲಿ ಬೆಳೆ ಬೆಳೆದಿದ್ದಾರೆ. ಯಾವ ಬೆಳೆ ಬೆಳೆದು ಸಿದ್ದರಾಮಯ್ಯನವರು ಹಣ ಮಾಡಿದರು? ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇವತ್ತು ಶ್ರೀಮಂತರಾಗಿಲ್ವಾ? 30, 40 ವರ್ಷಗಳ ಹಿಂದೆ ಇದ್ದಂತೆ ಈಗಲೂ ಇದ್ದಾರಾ? ಕೆ.ಜೆ.ಜಾರ್ಜ್, ಎಂ.ಬಿ.ಪಾಟೀಲ್, ಡಿಕೆಶಿ ಏನಾಗಿದ್ದರು? ಉದ್ಯಮಿಗಳ ಶ್ರೀಮಂತಿಕೆ ಬಗ್ಗೆ ಮಾತನಾಡುವ ನೀವು, ರಾಜಕಾರಣಿಗಳ ಶ್ರೀಮಂತಿಕೆ ಬಗ್ಗೆ ಏಕೆ ಮಾತನಾಡುವುದಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಅದಾನಿ, ಅಂಬಾನಿಯನ್ನ ಹುಟ್ಟಿಸಿದ್ದು ನರೇಂದ್ರ ಮೋದಿನಾ? ಎಂದು ಪ್ರಶ್ನೆ ಮಾಡಿದ ಪ್ರತಾಪ್ ಸಿಂಹ, ಮೋದಿ ಬರುವ ಮೊದಲು ಅವರು ಶ್ರೀಮಂತರಾಗಿರಲಿಲ್ವಾ? ಮಾತೆತ್ತಿದರೆ ಅದಾನಿ, ಅಂಬಾನಿ ಅಂತೀರಾ. ಎಷ್ಟೋ ಶ್ರೀಮಂತ ಉದ್ಯಮಿಗಳು ಹುಟ್ಟಿದ್ದು ಯಾರ ಕಾಲದಲ್ಲಿ? ಆಸ್ತಿ ಮೌಲ್ಯ ಹೆಚ್ಚಾದಂತೆ ಶ್ರೀಮಂತಿಕೆ ಹೆಚ್ಚಾಗುತ್ತದೆ. ಶ್ರೀಮಂತಿಕೆ ಹೆಚ್ಚಾಗಲು ಮೋದಿ ಕಾರಣ ಅಂದರೆ ಏನರ್ಥ? ಎಂದಿದ್ದಾರೆ.

ಇದೇ ವೇಳೆ ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್​ನಿಂದ ಗಲಭೆ ನಡೆದ ಪ್ರಕರಣದ ಬಗ್ಗೆ ಪ್ರತಾಪ್ ಸಿಂಹ ಮಾತನಾಡಿದರು. ಗಲಭೆಗಳಲ್ಲಿ ಮುಸ್ಲಿಮರ ಮನಸ್ಥಿತಿ ಹೇಗಿದೆ ಎಂದು ಗೊತ್ತಾಗಿದೆ. ಮುಸ್ಲಿಮರ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿಲ್ಲ. ಹಿಂದೂಗಳ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಕಲ್ಲು ಹೊಡೆಯುವುದು ಮುಸಲ್ಮಾನರ ಸಂಸ್ಕೃತಿಯಾಗಿದೆ. ಭಾರತದ ಮುಸ್ಲಿಮರು ಮೆಕ್ಕಾ, ಮದೀನಾದಲ್ಲಿ ಹುಟ್ಟಿಲ್ಲ. ಮುಸ್ಲಿಮರಲ್ಲೂ ನಮ್ಮದೇ ಡಿಎನ್​ಎ, ನಮ್ಮದೇ ರಕ್ತ ಇದೆ. ಕಲ್ಲು ತೂರುವುದನ್ನ ಬಿಡದಿದ್ದರೆ ಬುಲ್ಡೋಜರ್ ಬರಲಿದೆ. ಉತ್ತರ ಪ್ರದೇಶದಲ್ಲಿರುವಂತೆ ಕರ್ನಾಟಕದಲ್ಲಿಯೂ ಆಗಲಿದೆ ಎಂದರು.

ಇನ್ಮೇಲೆ ಏಟಿಗೆ ಏಟು:
ಮೆಕ್ಕಾ‌, ಮದೀನಾದಲ್ಲಿ ಸೈತಾನನಿಗೆ ಕಲ್ಲು ಹೊಡೆಯುತ್ತಾರೆ. ಹಿಂದೂಗಳ ಯಾತ್ರೆಯನ್ನ ಸೈತಾನನ ರೀತಿ ನೋಡ್ತಾರೆ.  ನೆಲೆ ಕೇಳಿ ಹಿಂದೂ ರಾಷ್ಟ್ರಕ್ಕೆ ಬಂದವರು ಮುಸ್ಲಿಮರು. ಮತಾಂತರದಿಂದ ಅರಬ್ DNA ಬಂದಂತೆ ವರ್ತಿಸಬೇಡಿ. ಕಲ್ಲು ಬಿಸಾಕಿದರೆ ಬುಲ್ಡೋಜರ್ ಮನೆ ಮುಂದೆ ಬರುತ್ತದೆ. ದಾವೂದ್ ಇಬ್ರಾಹಿಂ ನಮ್ಮವನೆಂದು ನಿಮಗೆ ಅನ್ನಿಸುತ್ತದೆ. ಛೋಟಾ ರಾಜನ್ ನಮ್ಮವನೆಂದು ಹಿಂದೂಗಳು ಹೇಳಲ್ಲ. ಕಲ್ಲು ಹೊಡೆದರೆ ಹಣ್ಣು ಕೊಡುವ ಕಾಲ ಹೋಯಿತು. ಕಲ್ಲು ಹೊಡೆದು ಗುಲಾಬಿ ಹೂ, ಹಣ್ಣನ್ನ ನಿರೀಕ್ಷಿಸಬೇಡಿ. ಇನ್ಮೇಲೆ ಏಟಿಗೆ ಏಟು ಇರುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

YouTube video player

ಇದನ್ನೂ ಓದಿ

ದೆಹಲಿಯ ಜಹಾಂಗೀರ್​ಪುರಿ ಡೆಮಾಲಿಷನ್ ಕಾರ್ಯಾಚರಣೆಗೆ ಸುಪ್ರೀಂ ಕೋರ್ಟ್​ನಿಂದ ತಡೆಯಾಜ್ಞೆ

ನಿಮ್ಮ ಟೈಮ್​ಲೈನ್: ಯಾರಿಗೆ ಬೇಕು ರಾಮರಾಜ್ಯ? ಓ ಕಲ್ಕಿಯೇ ಬೇಗ ಬಾ, ಹೆಣ್ಣುಗಳೆಲ್ಲರ ಅಂಕೆ ತಪ್ಪಿಸು ಬಾ

Published On - 12:54 pm, Thu, 21 April 22

TV9 Web

TV9 Kannada

Read More
Loading...
Unable to load recommendations.
Follow Us