ಕಾಂಗ್ರೆಸ್ನವರ ಅವಧಿಯಲ್ಲಿ ಭಯೋತ್ಪಾದನೆ ಆರಂಭವಾಗಿದೆ: ನಳಿನ್ ಕುಮಾರ್ ಕಟೀಲ್
ಗಾಂಧಿ ಹೆಸರಲ್ಲಿ ಕಾಂಗ್ರೆಸ್ 60 ವರ್ಷ ದೇಶವನ್ನ ಆಳಿದೆ. ಆದರೆ ಗಾಂಧೀಜಿ ಕಂಡ ಕನಸು ನೆರವೇರಿಸಲಿಲ್ಲ. ಗಾಂಧೀಜಿ ಕಂಡ ಗ್ರಾಮ ಸ್ವರಾಜ್ ಕಲ್ಪನೆ ನೆರವೇರಿಸಿಲ್ಲ ಎಂದು ಬೀದರ್ ನಗರದಲ್ಲಿ ನಳಿನ್ ಕುಮಾರ್ ಕಟೀಲು ಹೇಳಿಕೆ ನೀಡಿದ್ದಾರೆ.
ಬೀದರ್: ಕಾಂಗ್ರೆಸ್ನವರ ಅವಧಿಯಲ್ಲಿ ಭಯೋತ್ಪಾದನೆ ಆರಂಭವಾಗಿದೆ. ಯುಪಿಎ ಆಡಳಿತದಲ್ಲಿ ಸಿಕ್ಕಸಿಕ್ಕಲ್ಲಿ ಬಾಂಬ್ ಸ್ಫೋಟವಾಯಿತು. ಬಿಜೆಪಿ ಆಡಳಿತದಲ್ಲಿ ಭಯೋತ್ಪಾದನೆ ನಿಗ್ರಹವಾಗಿದೆ. ಆದರೆ ಕಾಂಗ್ರೆಸ್ ಆಡಳಿತದಲ್ಲಿ ಭಯೋತ್ಪಾದನೆಗೆ ಆಗ್ರಹ ಎಂದು ಬೀದರ್ನಲ್ಲಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಇಂದು (ನವೆಂಬರ್ 20) ಹೇಳಿಕೆ ನೀಡಿದ್ದಾರೆ.
ಲಾಲ್ ಬಹದ್ದೂರ್ ಶಾಸ್ತ್ರಿ ಕಾಲದಲ್ಲಿ ಭ್ರಷ್ಟಾಚಾರ ನಡೆದಿಲ್ಲ. ಉಳಿದ ಎಲ್ಲರ ಅವಧಿಯಲ್ಲಿಯೂ ಭ್ರಷ್ಟಾಚಾರ ನಡೆದಿದೆ. ಯುಪಿಎ ಆಡಳಿತ ಇದ್ದಾಗಲೆಲ್ಲಾ ಭ್ರಷ್ಟಾಚಾರ ನಡೆದಿದೆ. ಯುಪಿಎ ಅವಧಿಯ ಪ್ರಧಾನಿಗಳೆಲ್ಲ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಕಾಂಗ್ರೆಸ್ ಮನೆಯಲ್ಲಿದ್ದವರು ಈಗ ಬಿಜೆಪಿ ಮನೆಗೆ ಬರ್ತಿದ್ದಾರೆ. ಯಾಕೆಂದರೆ ಬಿಜೆಪಿಯ ಮೇಲೆ ಅವರಿಗೆ ನಂಬಿಕೆಯಿದೆ. ನಂಬಿಕೆ, ನೆಲೆಯಿದೆ ಎಂದು ಬಿಜೆಪಿ ಮನೆಗೆ ಬರುತ್ತಿದ್ದಾರೆ. ಕಾಂಗ್ರೆಸ್ನವರು ಗಾಂಧಿ ಹೆಸರಲ್ಲಿ ಟೋಪಿ ಹಾಕುವ ಕೆಲಸ ಮಾಡುತ್ತಿದ್ದಾರೆ. ಗಾಂಧಿ ಹೆಸರಲ್ಲಿ ಕಾಂಗ್ರೆಸ್ 60 ವರ್ಷ ದೇಶವನ್ನ ಆಳಿದೆ. ಆದರೆ ಗಾಂಧೀಜಿ ಕಂಡ ಕನಸು ನೆರವೇರಿಸಲಿಲ್ಲ. ಗಾಂಧೀಜಿ ಕಂಡ ಗ್ರಾಮ ಸ್ವರಾಜ್ ಕಲ್ಪನೆ ನೆರವೇರಿಸಿಲ್ಲ ಎಂದು ಬೀದರ್ ನಗರದಲ್ಲಿ ನಳಿನ್ ಕುಮಾರ್ ಕಟೀಲು ಹೇಳಿಕೆ ನೀಡಿದ್ದಾರೆ.
ವಿಪಕ್ಷವಾಗಿ ಕಾಂಗ್ರೆಸ್ ಬೇಜವಾಬ್ದಾರಿಯಾಗಿ ವರ್ತಿಸುತ್ತಿದೆ ಬಿಟ್ ಕಾಯಿನ್ ಹಗರಣದ ಕುರಿತು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದಾರೆ. ಸರ್ಕಾರಗಳ ಮೇಲೆ ಅಟ್ಯಾಕ್ ಮಾಡಲು ವಿಷಯಗಳಿಲ್ಲ. ಕಾಂಗ್ರೆಸ್ಗೆ ವಿಷಯಗಳು ಇಲ್ಲ. ವಿಪಕ್ಷವಾಗಿ ಕಾಂಗ್ರೆಸ್ ಬೇಜವಾಬ್ದಾರಿಯಾಗಿ ವರ್ತಿಸುತ್ತಿದೆ. ಈವರೆಗೂ ಸಣ್ಣ ದಾಖಲೆ ಕೊಡಲು ಸಹ ಅವರಿಗೆ ಆಗಿಲ್ಲ ಎಂದು ಚಿಕ್ಕಬಳ್ಳಾಪುರದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಚಿಕ್ಕಬಳ್ಳಾಪುರ ಕೆ.ವಿ.ಕ್ಯಾಂಪಸ್ನಲ್ಲಿ ಜನಸ್ವರಾಜ್ ಸಮಾವೇಶ ನಡೆದಿದೆ. ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಚಿವರಾದ ಡಾ.ಕೆ. ಸುಧಾಕರ್, ಡಾ.ಅಶ್ವತ್ಥ್ ನಾರಾಯಣ, ಸಚಿವ ಕೆ.ಗೋಪಾಲಯ್ಯ ಸೇರಿದಂತೆ ಹಲವರು ಉಪಸ್ಥಿತಿ ವಹಿಸಿದ್ದಾರೆ.
ಇದನ್ನೂ ಓದಿ: ಶಂಖನಾದವನ್ನು 15 ದಿನ ಮುಂದೂಡಿ, ಜನರ ನೆರವಿಗೆ ಬನ್ನಿ: ಬಿಜೆಪಿ ವಿರುದ್ಧ ಹೆಚ್ಡಿ ಕುಮಾರಸ್ವಾಮಿ ಟೀಕೆ
ಇದನ್ನೂ ಓದಿ: ಈ ಕೆಲಸ ಮೊದಲೇ ಮಾಡಿದ್ದರೆ 700ಕ್ಕೂ ಹೆಚ್ಚು ರೈತರ ಪ್ರಾಣ ಉಳಿಯುತ್ತಿತ್ತು: ಪ್ರಧಾನಿ ಮೋದಿಗೆ ಪತ್ರ ಬರೆದ ಬಿಜೆಪಿ ಸಂಸದ