ದೇವಾಲಯಗಳ ಆದಾಯ ಜಟಾಪಟಿ: ಬಿಜೆಪಿ ನಾಯಕರ ಆರೋಪಗಳಿಗೆ ಸ್ಪಷ್ಟನೆ ನೀಡಿದ ರಾಮಲಿಂಗಾರೆಡ್ಡಿ

ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮದಾಯ ದತ್ತಿಗಳ ವಿಧೇಯಕವನ್ನು ಮಂಡಿಸಿ ಸರ್ಕಾರ ಅಂಗೀಕಾರ ಪಡೆದುಕೊಂಡಿದ್ದು, ಇದಕ್ಕೆ ವಿಪಕ್ಷ ಬಿಜೆಪಿ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ​ ಟ್ವೀಟ್ ವಾರ್ ಕೂಡ ನಡೆಸಿದ್ದರು. ಇದಕ್ಕೆ ಮುಜುರಾಯಿ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.

ದೇವಾಲಯಗಳ ಆದಾಯ ಜಟಾಪಟಿ: ಬಿಜೆಪಿ ನಾಯಕರ ಆರೋಪಗಳಿಗೆ ಸ್ಪಷ್ಟನೆ ನೀಡಿದ ರಾಮಲಿಂಗಾರೆಡ್ಡಿ
ರಾಮಲಿಂಗಾರೆಡ್ಡಿ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 22, 2024 | 3:06 PM

ಬೆಂಗಳೂರು, ಫೆ.22: ಅಧಿವೇಶನದಲ್ಲಿ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮದಾಯ ದತ್ತಿಗಳ ವಿಧೇಯಕವನ್ನು ಮಂಡಿಸಿ ಸರ್ಕಾರ ಅಂಗೀಕಾರ ಪಡೆದುಕೊಂಡಿದೆ. ಇದಕ್ಕೆ ವಿಪಕ್ಷ ಬಿಜೆಪಿ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಹಾಗೂ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ನಡುವೆ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ​ ಟ್ವೀಟ್ ವಾರ್ ಕೂಡ ನಡೆದಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ರಾಮಲಿಂಗಾರೆಡ್ಡಿ, ‘ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ, ಮಾನ ಮರ್ಯಾದೆ ಬಿಟ್ಟಿರುವುದಕ್ಕೆ ಹೀಗೆಲ್ಲ ಮಾತನಾಡುತ್ತಾರೆ ಎಂದು ಕಿಡಿಕಾರಿದ್ದಾರೆ.

ಹಿಂದೂ ದೇಗುಲಗಳ ಹಣ ಬೇರೆಯಾವುದಕ್ಕೂ ಬಳಕೆ ಆಗಲ್ಲ

ಬಿಎಸ್​ ಯಡಿಯೂರಪ್ಪ ನೇತೃತ್ವದ ಸರ್ಕಾರ ಇದ್ದಾಗಲೇ ಹಣ ತೆಗೆದುಕೊಳ್ಳಲಾಗಿತ್ತು. ಹೆಚ್ಚಿನ ಆದಾಯ ಬಂದ ದೇಗುಲಗಳಲ್ಲಿ ಹಣ ತೆಗೆದುಕೊಳ್ಳಲಾಗುತ್ತಿತ್ತು. 10 ಲಕ್ಷದೊಳಗಿನ ಆದಾಯ ದೇವಸ್ಥಾನಗಳು ಹಣ ಕೊಡುವಂತಿಲ್ಲ. 10 ಲಕ್ಷದಿಂದ 1 ಕೋಟಿ ಆದಾಯ ಇರುವ ದೇವಸ್ಥಾನಗಳು ಮಾತ್ರ 5% ಹಣ ಕೊಡಬೇಕು. ಬಿಜೆಪಿ ತಂದಿರುವ ಕಾಯ್ದೆಗಳಿಗೆ ನಾವು ತಿದ್ದುಪಡಿ ತಂದಿದ್ದೇವೆ ಅಷ್ಟೆ. ಹಿಂದೂ ದೇಗುಲಗಳ ಹಣ ಬೇರೆಯಾವುದಕ್ಕೂ ಬಳಕೆ ಆಗುವುದಿಲ್ಲ. ಈ ಹಣ ಮುಜರಾಯಿ ಇಲಾಖೆಗೂ ಬರಲ್ಲ, ಧಾರ್ಮಿಕ ಪರಿಷತ್​ನ ಅಕೌಂಟ್​​ನಲ್ಲೇ ಇರುತ್ತದೆ ಎಂದು ಸ್ಪಷ್ಟನೆ ನೀಡಿದರು.

ಇದನ್ನೂ ಓದಿ:ದೇವಾಲಯದ ಆದಾಯದ ಮೇಲೆ ರಾಜ್ಯ ಸರ್ಕಾರದ ಕಣ್ಣು: ವಿಜಯೇಂದ್ರ-ರಾಮಲಿಂಗಾರೆಡ್ಡಿ ಟ್ವೀಟ್ ವಾರ್

ಇನ್ನು ವಿಧಾನಸಭೆಯಲ್ಲಿ ಈ ತಿದ್ದುಪಡಿಯನ್ನ ಎಲ್ಲರೂ ಸೇರಿ ಪಾಸ್ ಮಾಡಲಾಗಿದೆ. ಬರುವ 30 ಕೋಟಿ ಹಣದಲ್ಲಿ ಸಿ ವರ್ಗದ ದೇವಸ್ಥಾನಕ್ಕೆ ಕೊಡುತ್ತೇವೆ. ಪರ್ಸೆಂಟೇಜ್ ವ್ಯವಹಾರವೆಲ್ಲವೂ ಬಿಜೆಪಿಯವರದ್ದು, ನಾಲ್ಕು ವರ್ಷಗಳ ಕಾಲ ಬಿಜೆಪಿ ಅವರು ಹುಂಡಿಯನ್ನು ಇಟ್ಟಿದ್ದರು. ಈಗ ತುಂಬಿದ ಗುಂಡಿಯನ್ನ ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಹಣ ಎಣಿಸುವ ಯಂತ್ರವನ್ನು ಬಿಜೆಪಿಯವರು ಮನೆಯಲ್ಲಿ ಇಟ್ಟುಕೊಂಡಿದ್ದಾರೆ, ಅದೂ ನಾವಲ್ಲ ಎಂದು ವಾಗ್ದಾಳಿ ನಡೆಸಿದರು.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ